ಪುಟಾಣಿ 'ಸೀತಾ ಮಾತೆ'ಯ ನೃತ್ಯದ ಮೋಡಿಗೆ ಎಲ್ಲರೂ ಫಿದಾ: ವೈರಲ್ ವಿಡಿಯೋ

ನವದೆಹಲಿ, ಅಕ್ಟೋಬರ್ 15: ಮಕ್ಕಳ ನಗು, ಹಾಡು, ಅಳು, ನೃತ್ಯ ಹೀಗೆ ಎಲ್ಲ ಚಟುವಟಿಕೆಗಳೂ ಮುದ್ದಾಗಿ ಕಾಣಿಸುತ್ತವೆ. ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳೂ ಸೆಲೆಬ್ರಿಟಿಗಳೇ. ಮುದ್ದು ಮುದ್ದು ಮಾತಿನ, ತುಂಟಾಟಗಳನ್ನು ನಡೆಸುವ ಮಕ್ಕಳು ಯಾರಿಗೆ ಇಷ್ಟವಾಗುವುದಿಲ್ಲ. ಅಂತಹದ್ದೊಂದು ಮುದ್ದಾದ ಮಗುವಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಜನರನ್ನು ಹುಚ್ಚೆಬ್ಬಿಸಿದೆ. ಚೆಂದದ ಮಗುವಿನ ಅಷ್ಟೇ ಚೆಂದದ ನೃತ್ಯಕ್ಕೆ ನೆಟ್ಟಿಗರು ಮಾರುಹೋಗಿದ್ದಾರೆ.

ಇದು ಹಬ್ಬಗಳ ತಿಂಗಳು. ನವರಾತ್ರಿಯಿಂದ ದೀಪಾವಳಿ ಮುಗಿಯುವವರೆಗೂ ಹಬ್ಬಗಳ ಸಂಭ್ರಮ ಕೊನೆಗೊಳ್ಳುವುದಿಲ್ಲ. ಮನೆಗಳಲ್ಲಿ, ಶಾಲೆಗಳಲ್ಲಿ ಮತ್ತು ಸಮುದಾಯಗಳಲ್ಲಿ ಹಬ್ಬಗಳ ವಿವಿಧ ಬಗೆಯ ಆಚರಣೆಗಳು, ಕಾರ್ಯಕ್ರಮಗಳು ನಡೆಯುತ್ತವೆ. ಉತ್ತರ ಭಾರತದಲ್ಲಂತೂ ಶಾಲಾ ಮಕ್ಕಳಾದಿಯಾಗಿ ಹಿರಿಯರು ಪೌರಾಣಿಕ ಮತ್ತು ಐತಿಹಾಸಿಕ ಪಾತ್ರಗಳನ್ನು ನೆನಪಿಸುವ ವೇಷ ತೊಟ್ಟು ಹಬ್ಬದ ಗಮ್ಮತ್ತನ್ನು ಹೆಚ್ಚಿಸುತ್ತಾರೆ. ಹಾಗೆ ರಾಮ, ಲಕ್ಷ್ಮಣ ಮತ್ತು ಸೀತೆಯಂತೆ ವೇಷ ತೊಟ್ಟ ಮಕ್ಕಳ ವಿಡಿಯೋ ವೈರಲ್ ಆಗಿದೆ.

ಈ ವಿಡಿಯೋದ ಮೂಲ ಯಾವುದೆಂದು ಗೊತ್ತಿಲ್ಲ. ವಿಡಿಯೋ ಎಲ್ಲಿ ಚಿತ್ರೀಕರಿಸಲಾಯಿತು, ಆ ಮಕ್ಕಳು ಎಲ್ಲಿಯವರು ಎಂಬ ಮಾಹಿತಿ ಇಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ರಾಮ ಮತ್ತು ಲಕ್ಷ್ಮಣರ ವೇಷ ತೊಟ್ಟ ಗಂಡುಮಕ್ಕಳಿಬ್ಬರು ಅಂಜುತ್ತ ನಿಂತಿದ್ದರೆ, ಅವರ ಪಕ್ಕದಲ್ಲಿದ್ದ 'ಸೀತಾ ಮಾತೆ' ಮಾತ್ರ ಯಾವ ಅಳುಕೂ ಇಲ್ಲದೆ ಮನಮೋಹಕವಾಗಿ ನರ್ತಿಸುತ್ತಾ, ವಾದ್ಯದ ಸದ್ದನ್ನು ಎಂಜಾಯ್ ಮಾಡಿದ್ದಾಳೆ.

ವೈರಲ್ ವಿಡಿಯೋ

ವೈರಲ್ ವಿಡಿಯೋ

ಸೀತೆಯ ವೇಷ ತೊಟ್ಟ ಪುಟಾಣಿ ಬಾಲಕಿ ಲೋಕದ ಪರಿವೇ ಇಲ್ಲದಂತೆ ಚಿತ್ತಾಕರ್ಷಕ ನಗುವಿನೊಂದಿಗೆ ವಾದ್ಯದ ಸದ್ದಿಗೆ ತಕ್ಕಂತೆ ನರ್ತಿಸುವ 22 ಸೆಕೆಂಡುಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿಡಿಯೋ ನೋಡಿದವರೆಲ್ಲರೂ ಅ ಮಗುವಿನ ಹೊಳಪಿನ ತೇಜಸ್ಸು, ಮುಗ್ಧತೆಯನ್ನು ಬಿಂಬಿಸುವ ನಿಷ್ಕಲ್ಮಶ ನಗು, ಸಂಭ್ರಮ ಕಂಡು ಬೆರಗಾಗುತ್ತಿದ್ದಾರೆ.

ಸೀತಾ ಮಾತೆಯ ಸೃಷ್ಟಿ

ಸೀತಾ ಮಾತೆಯ ಸೃಷ್ಟಿ

'ಬಾಲ ಸೀತೆ'ಯ ನೃತ್ಯ ಕಂಡು ಜನರು ಪರವಶಗೊಂಡಿದ್ದಾರೆ. ಆಕೆ ನನ್ನಲ್ಲಿ ಖುಷಿ ಮೂಡಿಸಿದ್ದಾಳೆ. ಎಷ್ಟು ಸಿಹಿಯಾದ ಮಗು. ಸಂಗೀತಕ್ಕೆ ಆಕೆಯ ಸ್ಪಂದನೆ ಅತ್ಯಂತ ಸಹಜವಾಗಿದೆ ಎಂದು ಕೊಂಡಾಡಿದ್ದಾರೆ. ಇನ್ನು ಕೆಲವರು ಆಕೆ ಸೀತಾ ಮಾತೆಯ ಮುದ್ದಾದ ಸೃಷ್ಟಿ ಎಂದು ಕರೆದಿದ್ದಾರೆ.

ದಸರಾ ರಾಮಲೀಲಾ ಸಂಭ್ರಮ

ದಸರಾ ರಾಮಲೀಲಾ ಸಂಭ್ರಮ

ದಸರಾ ಹಬ್ಬದ ನವರಾತ್ರಿಯಲ್ಲಿ ದೇಶದ ಅನೇಕ ಕಡೆ ರಾಮಾಯಣ ಪುರಾಣದಲ್ಲಿನ ರಾಮನ ಬದುಕನ್ನು ತೋರಿಸುವ ರಾಮಲೀಲಾ ನಾಟಕವನ್ನು ಪ್ರದರ್ಶಿಸಲಾಗುತ್ತದೆ. ರಂಗಭೂಮಿ ಕಲಾವಿದರು, ಆಸಕ್ತ ಗುಂಪುಗಳು ದಸರಾ ಸಮಯದಲ್ಲಿ ರಾಮಲೀಲಾ ಪ್ರದರ್ಶಿಸುತ್ತಾರೆ. ಅದೇ ರೀತಿ ಪುಟ್ಟ ಮಕ್ಕಳಿಗೂ ರಾಮಾಯಣದ ಪಾತ್ರಗಳ ವೇಷಗಳನ್ನು ತೊಡಿಸುತ್ತಾರೆ. ಈ ಮಕ್ಕಳೂ ಶಾಲೆ ಅಥವಾ ಸಮುದಾಯದ ವತಿಯಿಂದ ಈ ವೇಷ ತೊಟ್ಟಿದ್ದರು ಎಂದು ಊಹಿಸಲಾಗಿದೆ.

ಮುದ್ದಾದ ದೃಶ್ಯವಿದು...

ಮುದ್ದಾದ ದೃಶ್ಯವಿದು...

'ಇದನ್ನು ನೋಡಲು ಅದ್ಭುತವಾಗಿದೆ' ಎಂದು ನೆಟ್ಟಿಗರೊಬ್ಬರು ಸಂತಸ ಹಂಚಿಕೊಂಡಿದ್ದಾರೆ. 'ನಾನು ಇತ್ತೀಚೆಗೆ ನೋಡಿದ ಅತ್ಯಂತ ಮುದ್ದಾದ ದೃಶ್ಯವಿದು' ಎಂದು ಮತ್ತೊಬ್ಬರು ಹೇಳಿದ್ದಾರೆ. 'ಈ ಮಗುವಿನಿಂದ ದಿನಕ್ಕೊಂದು ಅರ್ಥ ಸಿಕ್ಕಿತು' ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಮುಗ್ಧ ಮತ್ತು ಪರಿಶುದ್ಧ ಆತ್ಮ

ಮುಗ್ಧ ಮತ್ತು ಪರಿಶುದ್ಧ ಆತ್ಮ

'ಎಷ್ಟು ಸುಂದರವಾಗಿದೆ. ಮುಗ್ಧ ಮತ್ತು ಪರಿಶುದ್ಧ ಆತ್ಮ' ಎಂದು ಮಗುವಿನ ಹಾವಭಾವಕ್ಕೆ ಮರುಳಾಗಿದ್ದಾರೆ. ಸೀತಾ ಮಾತೆ ಇಷ್ಟೊಂದು ಖುಷಿಯಾಗಿರಲು ಕಾರಣವೇನು? ಎಂದು ಹೇಳಿದ್ದಾರೆ. ಎಷ್ಟು ಚೆಂದದ, ಖುಷಿಯಲ್ಲಿರುವ ಸೀತಾ... ಸೀತಾ ಎಂಬ ಹೆಸರೇ ಆಕೆಯ ಮೂಡ್‌ಅನ್ನು ಬದಲಿಸಿರಬಹುದು ಎಂದು ನಾನು ಊಹಿಸುತ್ತೇನೆ ಎಂದು ಹೇಳಿದ್ದಾರೆ.

ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+