• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತ-ಚೀನಾ ದ್ವಿಪಕ್ಷೀಯ ಸಹಿ ಕಂಡ ಒಪ್ಪಂದಗಳು

By Mahesh
|

ನವದೆಹಲಿ, ಸೆ.18: 'ಭಾರತ ಹಾಗೂ ಚೀನಾ ಎರಡು ದೇಹ ಒಂದೇ ಆತ್ಮದಂತೆ' ಎಂದು ಪ್ರಧಾನಿ ಮೋದಿ ಅವರು ಹೇಳಿದ್ದಾರೆ ಅದರಂತೆ ಚೀನಾ ಕೂಡಾ ನಡೆದುಕೊಳ್ಳಲಿದೆ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಹೇಳಿದ್ದಾರೆ. ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಮಾತುಕತೆ ಮುಕ್ತಾಯವಾಗಿದ್ದು, 12 ಮಹತ್ವದ ಒಪ್ಪಂದಕ್ಕೆ ಎರಡು ದೇಶಗಳು ಅಂಕಿತ ಹಾಕಿವೆ.

ಚೀನಾ ಪ್ರತಿನಿಧಿಗಳ ಜೊತೆ ಉನ್ನತ ಮಟ್ಟದ ಸಭೆ ನಡೆಸುವುದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಸುಮಾರು 90 ನಿಮಿಷಗಳ ಕಾಲ ಅಧ್ಯಕ್ಷ ಕ್ಸಿನ್ ಜಿನ್ ಪಿಂಗ್ ಅವರೊಂದಿಗೆ ಚರ್ಚೆ ನಡೆಸಿದರು. ಭಾರತದ ವಿವಿಧ ಕ್ಷೇತ್ರಗಳಲ್ಲಿ ಸುಮಾರು 20 ಬಿಲಿಯನ್ ಡಾಲರ್ ಬಂಡವಾಳ ಹೂಡಿಕೆಗೆ ಚೀನಾ ಸಿದ್ಧವಾಗಿರುವುದನ್ನು ಮೋದಿ ಸ್ವಾಗತಿಸಿದರು. [ಚೀನಾ ಅಧ್ಯಕ್ಷರ ಪ್ರವಾಸ 1ನೇ ದಿನದ ಮುಖ್ಯಾಂಶ]

ಚೀನಾ ಮೂಲಕ (ನಾಥುಲ ಪಾಸ್) ಕೈಲಾಸ ಮಾನಸ ಸರೋವರಕ್ಕೆ ಸಾಗಲು ಯಾತ್ರಾರ್ಥಿಗಳಿಗೆ ಅನುಮತಿ, ವೀಸಾ ಸಮಸ್ಯೆ ಇತ್ಯರ್ಥ, ಹೈಸ್ಪೀಡ್ ರೈಲು, ಬುಲೇಟ್ ರೈಲು, ಕೈಗಾರಿಕಾ ಪಾರ್ಕ್ ಸ್ಥಾಪನೆ ಮುಂತಾದ ಕ್ಷೇತ್ರಗಳ ಯೋಜನೆಗಳಿಗೆ ಕುರಿತಂತೆ ಒಪ್ಪಂದ ಹಾಕಲಾಗಿದೆ. ಭಾರತ ಹಾಗೂ ಚೀನಾ ಪ್ರತಿನಿಧಿಗಳ ನಡುವೆ ಸಹಿ ಹಾಕಲ್ಪಟ್ಟ ಒಪ್ಪಂದಗಳ ಪಟ್ಟಿ ಇಲ್ಲಿದೆ: [2ನೇ ದಿನದ ಮುಖ್ಯಾಂಶಗಳು]

ಕೈಲಾಸ ಮಾನಸ ಸರೋವರ ಯಾತ್ರೆಗೆ ವೀಸಾ

ಕೈಲಾಸ ಮಾನಸ ಸರೋವರ ಯಾತ್ರೆಗೆ ವೀಸಾ

* ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ಚೀನಾದ ವಾಂಗ್ ಯಿ ರಿಂದ ಅಂಕಿತ

* ವಾರ್ಷಿಕ ಕೈಲಾಸ ಮಾನಸ ಸರೋವರ ಯಾತ್ರಾರ್ಥಿಗಳಿಗೆ ಸಿಕ್ಕಿಂ ಬಳಿಯ ನಾಥುಲಾ ಪಾಸ್ ಮೂಲಕ ತೆರಳಲು ಅನುಮತಿ. ಜೊತೆಗೆ ಉತ್ತರಾಖಂಡ್ ನ ಲಿಪುಲೆಖ್ ಪಾಸ್ ಮೂಲಕ ಕೂಡಾ ಸಾಗಬಹುದು.

ಕೈಲಾಸ ಮಾನಸ ಸರೋವರ ಯಾತ್ರೆ ವಿಡಿಯೋ

ವಿದೇಶಾಂಗ ಸಚಿವಾಲಯದಿಂದ ಕೈಲಾಸ ಮಾನಸ ಸರೋವರ ಯಾತ್ರೆ ವಿಡಿಯೋ

ರೈಲು ಸಂಪರ್ಕ ಅಭಿವೃದ್ಧಿ

ರೈಲು ಸಂಪರ್ಕ ಅಭಿವೃದ್ಧಿ

* ರೈಲ್ವೆ ಬೋರ್ಡ್ ಅರುಣೇಂದ್ರ ಕುಮಾರ್ ಹಾಗೂ ನ್ಯಾಷನಲ್ ರೈಲ್ವೆ ಅಡ್ಮಿನಿಸ್ಟ್ರೇಷನ್ ಲೂ ಡೊಂಗ್ ಫು

* ಬುಲೆಟ್ ರೈಲು, ಹೈ ಸ್ಪೀಡ್ ರೈಲು ಓಡಾಟ, ವೇಗದ ರೈಲು ಯೋಜನೆ ಸ್ಥಾಪನೆ ಬಗ್ಗೆ ಅಧ್ಯಯನ, ರೈಲ್ವೆ ನಿಲ್ದಾಣಗಳು ಹೈಟೆಕ್ ದರ್ಜೆಗೆ, ಭಾರತದಲ್ಲಿ ರೈಲ್ವೆ ವಿಶ್ವವಿದ್ಯಾಲಯ ಸ್ಥಾಪನೆ.

* ಮುಂಬೈ -ಬೆಂಗಳೂರು ಬುಲೆಟ್ ಟ್ರೈನ್, ಬೆಂಗಳೂರು -ಚೆನ್ನೈ, ಚೆನ್ನೈ-ಮೈಸೂರು ಹೈಸ್ಪೀಡ್ ರೈಲು ಪ್ರಮುಖ ಯೋಜನೆಗಳು

ವಾರ್ತಾ ಮತ್ತು ಪ್ರಸಾರ ಇಲಾಖೆ

ವಾರ್ತಾ ಮತ್ತು ಪ್ರಸಾರ ಇಲಾಖೆ

* ಸಚಿವ ಪ್ರಕಾಶ್ ಜಾವಡೇಕರ್ ಹಾಗೂ ಕಾಯಿ ಫುಕಾವೋರಿಂದ ಅಂಕಿತ

* ಉಭಯ ದೇಶಗಳ ಕಲೆ, ಸಂಸ್ಕೃತಿ, ತಂತ್ರಜ್ಞಾನ ವಿನಿಮಯ. ಸಹ ನಿರ್ಮಾಣದಲ್ಲಿ ಚಲನಚಿತ್ರ ತಯಾರಿಸುವುದು, ಆಡಿಯೋ ವಿಷ್ಯುವಲ್ ಉತ್ಪನ್ನ ಬಳಸಿ ಮಾರುಕಟ್ಟೆ ವಿಸ್ತರಿಸುವುದು..ಇತ್ಯಾದಿ

ಬಾಹ್ಯಾಕಾಶ ಯೋಜನೆ

ಬಾಹ್ಯಾಕಾಶ ಯೋಜನೆ

* ಇಸ್ರೋ ಅಧ್ಯಕ್ಷ ಕೆ ರಾಧಾಕೃಷ್ಣನ್ ಹಾಗೂ ಚೀನಾದ ಜಾಂಗ್ ಜಿಯಾನ್ಹುವಾ ರಿಂದ ಅಂಕಿತ

* ಬಾಹ್ಯಾಕಾಶ ಯೋಜನೆಗಳಲ್ಲಿ ಪರಸ್ಪರ ಸಹಕಾರ, ವೈಜ್ಞಾನಿಕ ಸಂಶೋಧನೆ, ಉಪಗ್ರಹಗಳ ಪ್ರಯೋಗ, ದೂರ ಸಂವೇದಿ ಕ್ಷೇತ್ರ ಹಾಗೂ ಸಂವಹನ ಉಪಗ್ರಹಗಳ ಬಳಕೆ

ಆಹಾರ ಮತ್ತು ಔಷಧ ಪ್ರಾಧಿಕಾರ

ಆಹಾರ ಮತ್ತು ಔಷಧ ಪ್ರಾಧಿಕಾರ

* ಇಲಾಖಾ ಕಾರ್ಯದರ್ಶಿ ಲವ ವರ್ಮ ಹಾಗೂ ರಾಯಭಾರಿ ಲೆ ಯೂಚೆಂಗ್ ಅವರಿಂದ ಅಂಕಿತ

* ಉಭಯ ದೇಶಗಳಲ್ಲಿ ಬಳಕೆಯಲ್ಲಿರುವ ಸಾಂಪ್ರದಾಯಿಕ ಔಷಧಗಳ ಬಗ್ಗೆ ಹೆಚ್ಚಿನ ಸಂಶೋಧನೆ, ಅಭಿವೃದ್ಧಿ, ಈ ಬಗ್ಗೆ ಪ್ರತಿನಿಧಿಗಳಿಂದ ವಿಷಯ ವಿನಿಮಯ.

ಸೋದರಿ ನಗರ

ಸೋದರಿ ನಗರ

* ಮುಂಬೈ ಮೇಯರ್ ಸ್ನೇಹಳ್ ಅಂಬೇಕರ್ ಹಾಗೂ ಶಾಂಘೈ ಉಪ ಮೇಯರ್ ತು ಗುಯಾಂಗ್ ಶಾವೋ

* ಮುಂಬೈ ಹಾಗೂ ಶಾಂಘೈ ನಗರ ಹಾಗೂ ಅಹಮದಾಬಾದ್ ಹಾಗೂ ಗುವಾಗ್ಜಾವೋ ನಗರಗಳನ್ನು ಸಿಸ್ಟರ್ ಸಿಟಿ ಎಂದು ಘೋಷಣೆ.

ಕೈಗಾರಿಕಾ ಪಾರ್ಕ್

ಕೈಗಾರಿಕಾ ಪಾರ್ಕ್

* ಕೈಗಾರಿಕಾ ಕಾರ್ಪೋರೇಷನ್ ಭೂಷನ್ ಗಾಗ್ ರಾಣಿ ಹಾಗೂ ಸಿಇಒ ಬೈಕಿ ಫುಟಾನ್ ಮೋಟರ್ ವಾಂಗ್ ಜಿಂಯೂ ನಡುವೆ ಅಂಕಿತ

* ಮಹಾರಾಷ್ಟದ ಪುಣೆಯಲ್ಲಿ 1250 ಎಕರೆ ಭೂ ವಿಸ್ತ್ರೀರ್ಣದಲ್ಲಿ ಕೈಗಾರಿಕಾ ಪಾರ್ಕ್ ಸ್ಥಾಪನೆ. ಉದ್ಯೋಗ ಸೃಷ್ಟಿ, ಕ್ಲಸ್ಟರ್ ಮಾದರಿ ಅಭಿವೃದ್ಧಿ.

* ಗುಜರಾತಿನ ಅಹಮದಾಬಾದಿನಲ್ಲಿ ಕೈಗಾರಿಕಾ ಪಾರ್ಕ್ ಸ್ಥಾಪನೆ.

ವಾಣಿಜ್ಯ ಹಾಗೂ ಆರ್ಥಿಕ ಅಭಿವೃದ್ಧಿ

ವಾಣಿಜ್ಯ ಹಾಗೂ ಆರ್ಥಿಕ ಅಭಿವೃದ್ಧಿ

* ವಾಣಿಜ್ಯ ಸಚಿವ ನಿರ್ಮಲಾ ಸೀತಾರಾಮನ್ ಹಾಗೂ ಸಚಿವ ಗಾವೋ ಹುಚೆಂಗ್ ರಿಂದ ಅಂಕಿತ.

* ಮುಂದಿನ ಐದು ವರ್ಷಗಳಲ್ಲಿ ಉಭಯ ದೇಶಗಳ ನಡುವಿನ ವಾಣಿಜ್ಯ ಉದ್ಯಮ ಅಭಿವೃದ್ಧಿಗಾಗಿ 20 ಬಿಲಿಯನ್ ಡಾಲರ್ ಚೀನಾದಿಂದ ಹೂಡಿಕೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Indian and Chinese government signed 12 key agreements including that an agreement on Railways and Kailash Mansarovar. The two leaders will now make media statements on the talks held between them. Here are the list of documents signed during the State Visit of Chinese President Xi Jinping to India
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more