ಆಮ್ ಆದ್ಮಿ ಪಕ್ಷದ 30 ದಿನಗಳಲ್ಲಿ 21 ಸಾಧನೆಗಳು
ನವದೆಹಲಿ, ಫೆ 5: ಅಧಿಕಾರಕ್ಕೆ ಬಂದ ಕೇವಲ ಮೂವತ್ತು ದಿನಗಳಲ್ಲಿ ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ಸರಕಾರ ಹಲವು ಜನಪ್ರಿಯ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ.
ಹಲವು ಅಡೆತಡೆಗಳ ನಡುವೆಯೂ ಆಪ್ ಸರಕಾರದ ಪ್ರಮುಖ 21 ಸಾಧನೆಗಳು ಮತ್ತು ಪ್ರಮುಖ ನಿರ್ಧಾರಗಳ ಪಟ್ಟಿ ಕೆಳಗಿನಂತಿದೆ:
1. ವಿಐಪಿ ಸಂಪ್ರದಾಯಕ್ಕೆ ವಿದಾಯ ಹೇಳಿ, ಕಾರುಗಳಿಗೆ ಕೆಂಪುದೀಪ ಬಳಕೆಗೆ ನಿರ್ಬಂಧ.
2. ಪಕ್ಷದ ಯಾವುದೇ ಸಚಿವರು ಅಥವಾ ಶಾಸಕರು ದೊಡ್ಡ ಬಂಗಲೆ ಬಳಸುತ್ತಿಲ್ಲ.
3. ದೆಹಲಿಯ ಜನತೆಗೆ ಹೊರೆಯಾಗಿದ್ದ ವಿದ್ಯುತ್ ಬಿಲ್ಲಿನಲ್ಲಿ ಶೇ.50ರಷ್ಟು ಕಡಿತ. (ಒಂದೇ ತಿಂಗಳಲ್ಲಿ ಕೇಜ್ರಿವಾಲ್ ಸರಕಾರದ 15 ಎಡವಟ್ಟುಗಳು)
4. ಪ್ರತಿ ಮನೆಗೂ 700 ಲೀಟರ್ ಕುಡಿಯುವ ನೀರು.
5. 15 ವರ್ಷದಿಂದ ಯಾವುದೇ ಸರಕಾರ ಮಾಡದ ಮೂರು ವಿದ್ಯುತ್ ಕಂಪೆನಿ ವಿರುದ್ದ CAG ಲೆಕ್ಕ ಪರಿಶೋಧನೆಗೆ ಆದೇಶ.

7. ಚಿಲ್ಲರೆ ವ್ಯಾಪಾರದಲ್ಲಿ FDI ಅನುಮತಿ ಹಿಂಪಡೆತ.
8. ಮಿಲೇನಿಯಂ ಡಿಪೋವನ್ನು ಸ್ಥಳಾಂತರಿಸಿ ಯಮುನಾ ನದಿ ದಂಡೆ ರಕ್ಷಣೆ.
9. ಸರಕಾರೀ ಕಚೇರಿಯಲ್ಲಿನ ಭ್ರಷ್ಟಾಚಾರವನ್ನು ತಡೆಯಲು ಸಹಾಯವಾಣಿ.
10. ಖಾಸಗಿ ಶಾಲೆಯಲ್ಲಿನ ಡೋನೇಷನ್ ಹಾವಳಿ ತಡೆಯಲು ಸಹಾಯವಾಣಿ.
11. ದೆಹಲಿ ನಗರ ವ್ಯಾಪ್ತಿಯಲ್ಲಿನ ಸರಕಾರೀ ಶಾಲೆಗಳಲ್ಲಿನ ಸಮಸ್ಯೆಗಳ ಪರಿಶೀಲನೆ.
12. ನಗರದಲ್ಲಿ ವ್ಯಾಪಕವಾಗಿ ಹರಡಿರುವ ಟ್ಯಾಂಕರ್ ನೀರು ದಂಧೆ ನಿಯಂತ್ರಣ.
13. ನಗರದ ಸರಕಾರೀ ಶಾಲೆಗಳಿಗೆ ಒಂದು ಲಕ್ಷ ರೂಪಾಯಿ ದೇಣಿಗೆ.
14. ಜನ ಲೋಕಪಾಲ್ ವಿಧೇಯಕ್ಕೆ ಆಂಗೀಕಾರ.
15. CNG ಮತ್ತು PNG ಅನಿಲಗಳ ಮೇಲೆ ತಲಾ ಹದಿನೈದು ಮತ್ತು ಐದು ರೂಪಾಯಿ ಇಳಿಕೆ.
16. ಶೀಲಾ ದೀಕ್ಷಿತ್ ವಿರುದ್ದ ತನಿಖೆಗೆ ಅನುಮತಿ ಕೋರಿ ರಾಷ್ಟ್ರಪತಿಗಳಿಗೆ ಮನವಿ ಪತ್ರ.
17. ಮುಂದಿನ ಅಧಿವೇಶನದಲ್ಲಿ ಸ್ವರಾಜ್ ಮಸೂದೆ ಜಾರಿ ಮಾಡಲು ಆಮ್ ಆದ್ಮಿ ಪಕ್ಷದ ಪೂರ್ವ ತಯಾರಿ.
18. ಎಲ್ಲಾ ಆಸ್ಪತ್ರೆಗಳಲ್ಲಿ ಆಸಿಡ್ ಮತ್ತು ಅತ್ಯಾಚಾರಕ್ಕೆ ಒಳಗಾದವರಿಗೆ ತ್ವರಿತ ಮತ್ತು ಉಚಿತ ಚಿಕಿತ್ಸೆ.
19. ನಿರಾಶ್ರಿತರಿಗಾಗಿ 145ಕ್ಕೂ ಹೆಚ್ಚು ನಿರಾಶ್ರಿತ ತಾಣ. (ಕೇಜ್ರಿವಾಲ್ ಸರಕಾರ ಉರುಳಿಸಲು 20 ಕೋಟಿ ಆಮಿಷ)
20. ದೆಹಲಿಯ ವ್ಯಾಪಾರಿಗಳಿಗೆ ತೆರಿಗೆ ಸರಳೀಕರಣ.
21. ಸಾರಾಯಿ ಮಾಫಿಯದವರೊಂದಿಗೆ ಹೋರಾಡುವಾಗ ಸಾವನ್ನಪ್ಪಿದ ಪೊಲೀಸರೊಬ್ಬರಿಗೆ ಒಂದು ಕೋಟಿ ರೂಪಾಯಿ ಪರಿಹಾರ.












Click it and Unblock the Notifications