Liquor Price Hike: ಲಿಕ್ಕರ್ ದರ ಶೇ. 10-15ರಷ್ಟು ಏರಿಕೆ, ಅಬಕಾರಿ ಜಾಲತಾಣ ಬಂದಾಗಿದ್ದೇಕೆ?
Liquor Price Hike: ಕರ್ನಾಟಕದಲ್ಲಿ ಮದ್ಯದ ದರ ಹೆಚ್ಚಳ ಮಾಡಲಾಗಿದೆ. ಈ ಕುರಿತು ಅಧಿಕೃತ ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೆ ಕಾಂಗ್ರೆಸ್ ಆಡಳಿತದ ತೆಲಂಗಾಣ ರಾಜ್ಯ ಸರ್ಕಾರದ ಬೆಲೆ ಏರಿಕೆಯಿಂದ ಜನರು ಹೈರಾಣಾಗಿದ್ದಾರೆ. ರಾಜ್ಯ ಸರ್ಕಾರಕ್ಕೆ ಈ ಬಾರಿ ಆದಾಯ ಹೆಚ್ಚಾಗಲಿದೆ. ಲಿಕ್ಕರ್ ಹಾಗೂ ಬೀಯರ್ ಬೆಲೆ ಏರಿಕೆಯಾಗಿದ್ದು, ಅಧಿಕೃತ ವೆಬ್‌ಸೈಟ್‌ನಲ್ಲಿ ಹೊಸ ಬೆಲೆ ಅಪ್ಲೋಡ್ ಮಾಡಲಾಗುತ್ತಿದೆ. ಹೀಗಾಗಿ ಜಾಲತಾಣ ಭಾನುವಾರ ಲಭ್ಯವಾಗಿಲ್ಲ ಎನ್ನಲಾಗಿದೆ.
ಕರ್ನಾಟಕದಲ್ಲಿ ಸರ್ಕಾರ ಮದ್ಯ ಬೆಲೆ ಹೆಚ್ಚಿಸಿ ಮೇ 15 ಜಾರಿಗೆ ತಂದಿದೆ. ತೆಲಂಗಾಣದಲ್ಲೂ ಇದೇ ಮಾದರಿ ಅನುಸರಿಸಲಾಗುತ್ತಿದೆ. ಹೀಗಾಗಿಯೇ ಭಾನುವಾರ ಅಬಕಾರಿ ಇಲಾಖೆಯ ವೆಬ್‌ಸೈಟ್ ತೆರೆದುಕೊಳ್ಳಲಿಲ್ಲ. ಇದು ಪರಿಷ್ಕೃತ ದರವನ್ನು ಸಾಫ್ಟ್‌ವೇರ್‌ನಲ್ಲಿ ಅಪ್ಡೇಟ್ ಮಾಡುವ ಸೂಚನೆ ಇದಾಗಿದೆ. ಹೊಸ ದರ ಸಾರ್ವಜನಿಕಗೊಳಿಸಲು ವೆಬ್‌ಸೈಟ್ ಅನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಈ ಕುರಿತು ಇಲಾಖೆ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ ಬೆಲೆ ಏರಿಕೆ ಬಗ್ಗೆ ಇನ್ನೂ ಅಧಿಕೃತ ಆದೇಶ ಹೊರ ಬಿದ್ದಿಲ್ಲ. ಅದಕ್ಕು ಮೊದಲೇ ಎಲ್ಲ ತಯಾರಿ ಮಾಡಿಕೊಳ್ಳಲಾಗುತ್ತಿದೆ.

ತೆಲಂಗಾಣದಲ್ಲಿ ಇಂದಿನಿಂದಲೇ (ಮೇ 19) ಮದ್ಯದ ಬೆಲೆಗಳು ಗಣನೀಯವಾಗಿ ಏರಿಕೆ ಆಗಲಿವೆ. ದರ ಪರಿಷ್ಕರಣೆ ಬಳಿಕ ಒಂದು ಪೂರ್ಣ ಬಾಟಲಿಗೆ ಸುಮಾರು 40 ರೂಪಾಯಿ, ಅರ್ಧ ಬಾಟಲಿಗೆ 20 ರೂಪಾಯಿ ಮತ್ತು ಕ್ವಾರ್ಟರ್ ಬಾಟಲ್ (ನಿಪ್)ಗೆ ಎಂದು ಜನಪ್ರಿಯವಾಗಿ ಕರೆಯಲಾಗುತ್ತದೆ) ಗೆ ₹10 ಆಗಿರಬಹುದು.
ಸರ್ಕಾರಕ್ಕೆ 150 ಕೋಟಿ ರೂ. ಆದಾಯ
ದರ ನಿಗದಿ ಸಮಿತಿಯು ಈಗಾಗಲೇ ಮದ್ಯದ ಮೇಲೆ ಶೇಕಡಾ 10 ರಿಂದ 15ರಷ್ಟು ಬೆಲೆ ಏರಿಕೆಗೆ ಸೂಚಿಸಲಾಗಿದೆ. ಆದರೆ ಈ ಬಗ್ಗೆ ಮುಖ್ಯಮಂತ್ರಿಯವರ ಅಧಿಕೃತ ಅನುಮೋದನೆ ದೊರೆಯಬೇಕಿದೆ. ಅವರು ಪರಿಗಣಿಸಿ ಒಪ್ಪಿಗೆ ನೀಡುವುದು ಬಾಕಿ ಇದೆ ಎಂದು ತಿಳಿದು ಬಂದಿದೆ. ಲಿಕ್ಕರ್ ದರ ಏರಿಕೆಯಿಂದ ಅಬಕಾರಿ ಇಲಾಖೆ ಭೊಕ್ಕಸಕ್ಕೆ ಮಾಸಿಕವಾಗಿ ರೂಪಾಯಿ 150 ಕೋಟಿಗಳಷ್ಟು ಅಧಿಕ ಆದಾಯ ಬರಲಿದೆ ಎಂದು ಊಹಿಸಲಾಗಿದೆ.

ಬೆಲೆ ಏರಿಸದಿದ್ದರೆ ಪೂರೈಕೆ ಸ್ಟಾಪ್
ಈ ಹಿಂದೆಯು ಸರ್ಕಾರ ಬಿಯರ್ ಬೆಲೆ ಏರಿಕೆ ಮಾಡಿತ್ತು. ಅದಾದ ಬಳಿಕ ಸದರಿ ಬೇಸಿಗೆ ವೇಳೆ ಬಿಯರ್ ದರವನ್ನು ಹೆಚ್ಚಿಸಿದೆ. ದುಬಾರಿ ಬೆಲೆ ಏರಿಕೆ ಕಾಲದಲ್ಲಿರುವ ಮದ್ಯ ಪೂರೈಕೆ ದಾರರು ಸಹ ಸರ್ಕಾರಕ್ಕೆ ಆಗ್ರಹಿಸಿದ್ದರು. ದರ ಹೆಚ್ಚಳ ಮಾಡದಿದ್ದರೆ ನಾವು ಪೂರೈಕೆ ನಿಲ್ಲಿಸುವಾಗಿ ಮದ್ಯದ ಬ್ರ್ಯಾಂಡ್ ಹಾಗೂ ಬಿಯರ್ ಬ್ರ್ಯಾಂಡ್‌ಗಳ ಕಂಪನಿಗಳು ಒತ್ತಾಯಿಸಿದ್ದವು.
ಇದರೊಂದಿಗೆ ವೈನ್ ಬೆಲೆ ಏರಿಕೆ ಆಗುತ್ತಾ, ವೈನ್ ಡೀಲರ್‌ಗಳಿಗೂ ದರ ಹೆಚ್ಚಳ ಬಗ್ಗೆ ಹೇಳಿದ್ದೇನು? ಎಂಬುದರ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಅಲ್ಲದೇ ಈಗಾಗಲೇ ಕೋಟ್ಯಂತರ ಬಾಟಲಿ ಮದ್ಯ ತಯಾರಾಗಿರುತ್ತದೆ. ಈ ಹೊಸ ದರ ಅಸ್ತಿತ್ವದಲ್ಲಿರುವ ದಾಸ್ತಾನಿಗೆ ಅನ್ವಯಿಸುತ್ತಾ? ಇಲ್ಲ ಹೊಸ ದಾಸ್ತಾನಿಗೆ ಅನ್ವಯಿಸುತ್ತಾ ಎಂಬುದನ್ನು ಸರ್ಕಾರ ಸ್ಪಷ್ಟವಾಗಿ ತಿಳಿಸಬೇಕಿದೆ. ಇಷ್ಟೆಲ್ಲ ಬೆಲೆ ಏರಿಕೆ ಬೆಳವಣಿಗೆ ಮಧ್ಯ ಮದ್ಯದ ಬೇಡಿಕೆಯು ಹೆಚ್ಚಾಗುತ್ತಿದೆ. ಬೆಲೆ ಏರಿಕೆ ಬಿಸಿ ತಮಗೇನು ತಟ್ಟಿಯೇ ಇಲ್ಲ ಎಂಬಂತೆ ಎಂದಿನಂತೆ ಸೇವಿಸುತ್ತಿದ್ದಾರೆ.
ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆಗೆ ಖಂಡನೆ ವ್ಯಕ್ತ
ರಾಜ್ಯ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸಲು ರಾಜ್ಯ ಅಬಕಾರಿ ಇಲಾಖೆಯ ಆದಾಯದ ಮೇಲೆ ಹೆಚ್ಚು ಅವಲಂಬಿತವಾಗಿದೆ ಎಂದು ಭಾರತ ರಾಷ್ಟ್ರ ಸಮಿತಿ (BRS) ಪಕ್ಷದ ಹಿರಿಯ ನಾಯಕ ಮತ್ತು ಮಾಜಿ ಸಚಿವ ಟಿ. ಹರೀಶ್ ರಾವ್ ಲೇವಡಿ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಗ್ಯಾರಂಟಿ ಹೆಸರಿನಲ್ಲಿ ಜನರನ್ನು ದೋಚುತ್ತಿವೆ ಎಂದು ಬೆಲೆ ಏರಿಕೆ ನಡೆ ಖಂಡಿಸಿದರು.
ಮದ್ಯದ ಆದಾಯವನ್ನು ಹೆಚ್ಚಿಸುವ ಮೂಲಕ ತನ್ನ ಎಲ್ಲಾ ಪ್ರಯತ್ನಗಳನ್ನು ಮಾಡುವ ಮೂಲಕ ಸರ್ಕಾರವು ಬಿಯರ್ ಮತ್ತು ಬಾರ್‌ಗಳನ್ನು ಮಾತ್ರ ಅವಲಂಬಿಸಿ ರಾಜ್ಯವನ್ನು ಆಳುತ್ತಿದೆಯೇ" ಎಂದು ಅವರು ತಿಳಿದುಕೊಳ್ಳಲು ಪ್ರಯತ್ನಿಸಿದರು ಮತ್ತು ಕಾಂಗ್ರೆಸ್ ಆಡಳಿತಕ್ಕೆ ಬಂದ ರಾಜ್ಯಗಳಲ್ಲಿ ಮದ್ಯದ ಬೆಲೆ ಏರಿಕೆ ಮಾಡಲಾಗಿದೆ. ಅಬಕಾರಿ ಇಲಾಖೆಗೆ ಆದಾಯ ಹೇರಿಕೆ ಮಾಡಲಾಗಿದೆ. ಈ ಮೂಲಕ ಗ್ಯಾರಂಟಿ ನೀಡಿದ ಕಾಂಗ್ರೆಸ್ ಒಂದು ಕಡೆ ಉಚಿತ ಯೋಜನೆ ನೀಡಿ ಮತ್ತೊಂದು ಕಡೆ ಬೆಲೆ ಏರಿಕೆ ಬರೆ ಹಾಕುತ್ತಿದೆ ಎಂದು ಸಾರ್ವಜನಿಕರು ಖಂಡಿಸಿದ್ದಾರೆ.
ಮಾರಾಟ ಶೇ. 13ರಷ್ಟು ಹೆಚ್ಚಳ
ಇನ್ನೂ ಕರ್ನಾಟಕದಲ್ಲಿ ಮದ್ಯದ ಬೆಲೆ ಏರಿಕೆ ನಂತರ (ಮೇ 15ರ ಬಳಿಕ) ಲಿಕ್ಕರ್ ಮಾರಾಟದಲ್ಲಿ ಶೇಕಡಾ 13ರಷ್ಟು ಬೆಳವಣಿಗೆ ಆಗಿದೆ. ದರ ಎಷ್ಟೇ ಹೆಚ್ಚಾದರೂ ಸಹಿತ ಕುಡಿಯುವುದನ್ನು ಬಿಟ್ಟಿಲ್ಲ. ಕಡಿಮೆಯೂ ಆಗಿಲ್ಲ. ಎಂದಿನಂತೆ ಮದ್ಯ ಸೇವಿಸುತ್ತಿದ್ದಾರೆ. ಹೀಗಾಗಿ ಬೆಲೆ ಹೆಚ್ಚಾದರೂ ಜನರ ಖರೀದಿ ಸಹ ಹೆಚ್ಚಾಗಿದ್ದು ಕಂಡು ಬಂದಿದೆ.












Click it and Unblock the Notifications