ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಟ ವಿಜಯ್‌ ದೇವರಕೊಂಡಗೆ ಸಂಕಷ್ಟ: ಲೈಗರ್‌ ಚಿತ್ರದ ಬಂಡವಾಳ ಮೂಲದ ಬಗ್ಗೆ ಹಲವು ಗಂಟೆಗಳಿಂದ ಇಡಿ ವಿಚಾರಣೆ

|
Google Oneindia Kannada News

ಹೈದರಾಬಾದ್, ನವೆಂಬರ್‌ 30: ನಟ ವಿಜಯ್ ದೇವರಕೊಂಡ ಅವರನ್ನು ಇಂದು ಬೆಳಗ್ಗೆ 8 ಗಂಟೆಯಿಂದ ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸುತ್ತಿದ್ದು, ಅವರ ಚಿತ್ರ ಲೈಗರ್‌ಗೆ ಬಂಡವಾಳ ಹೂಡಿಕೆಯ ಮೂಲದ ಬಗ್ಗೆ ಪ್ರಶ್ನಿಸಲಾಗುತ್ತಿದೆ.

ಲೈಗರ್ ತೆಲುಗು ನಟನ ಹಿಂದಿ ಚೊಚ್ಚಲ ಚಿತ್ರವಾಗಿದೆ. ಸುಮಾರು ₹ 100 ಕೋಟಿ ಬಜೆಟ್‌ನಲ್ಲಿ ಇದನ್ನು ನಿರ್ಮಿಸಲಾಗಿದೆ ಎಂದು ವರದಿಯಾಗಿದೆ.

Breaking: ಗುಜರಾತ್ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಮಾಜಿ ಸಿಎಂ ವಿಜಯ್ ರೂಪಾನಿ Breaking: ಗುಜರಾತ್ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಮಾಜಿ ಸಿಎಂ ವಿಜಯ್ ರೂಪಾನಿ

ಅಮೆರಿಕನ್ ಬಾಕ್ಸಿಂಗ್ ದಂತಕಥೆ ಮೈಕ್ ಟೈಸನ್ ಸಹ ನಟಿಸಿರುವ ಈ ಚಿತ್ರವು ಯಶಸ್ವಿಯಾಗಿ ಪ್ರದರ್ಶನವಾಗಿಲ್ಲ. ವಿಮರ್ಶಕರು ಲೈಗರ್‌ ಚಿತ್ರಕ್ಕೆ ಒಮ್ಮತವನ್ನೂ ನೀಡಿರಲಿಲ್ಲ.

Liger Actor Vijay Deverakonda Spends The Day With Enforcement Directorate

ಲೈಗರ್ ನಿರ್ಮಾಪಕಿ ಚಾರ್ಮ್ ಕೌರ್ ಅವರನ್ನು ನವೆಂಬರ್ 17 ರಂದು ಜಾರಿ ನಿರ್ದೇಶನಾಲಯವು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ ಉಲ್ಲಂಘನೆ ಕುರಿತು ಪ್ರಶ್ನೆ ಮಾಡಿತ್ತು.

ತೆಲುಗು ಚಿತ್ರ ರಂಗದ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಲೈಗರ್‌ ಚಿತ್ರವನ್ನು ನಿರ್ದೇಶಿಸಿದ್ದಾರೆ. ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಣಗೊಂಡ ಈ ಚಿತ್ರವನ್ನು ಧರ್ಮ ಪ್ರೊಡಕ್ಷನ್ಸ್ ಮತ್ತು ಪುರಿ ಕನೆಕ್ಸ್ಟ್‌ ನಿರ್ಮಾಣ ಮಾಡಿದೆ.

ಈ ಚಿತ್ರದಲ್ಲಿ ವಿಜಯ್ ದೇವರಕೊಂಡ ಅವರು ಫೈಟರ್ ಕಾಣಿಸಿಕೊಂಡಿದ್ದಾರೆ. ಚಿತ್ರದ ಮುಖ್ಯ ತಾರಾಗಣದಲ್ಲಿ ಅನನ್ಯ ಪಾಂಡೆ, ರಮ್ಯಾ ಕೃಷ್ಣ ಮತ್ತು ರೋನಿತ್ ರಾಯ್ ಕಾಣಿಸಿಕೊಂಡಿದ್ದಾರೆ. ಅಮೆರಿಕನ್ ಬಾಕ್ಸರ್ ಮೈಕ್ ಟೈಸನ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.

Liger Actor Vijay Deverakonda Spends The Day With Enforcement Directorate

ಲೈಗರ್‌ ಚಿತ್ರವು 25 ಆಗಸ್ಟ್ 2022 ರಂದು ದೊಡ್ಡ ಪರದೆಗಳ ಮೇಲೆ ಬಿಡುಗಡೆಯಾಗಿತು. ಪ್ರೇಕ್ಷಕರಿಂದ ನಕಾರಾತ್ಮಕ ವಿಮರ್ಶೆಗಳು ಚಿತ್ರವು ಪಡೆದುಕೊಂಡಿತು. ಬಾಕ್ಸ್‌ ಆಫೀಸ್‌ ಕಲೆಕ್ಷನ್‌ನಲ್ಲಿಯೂ ಮಕಾಡೆ ಮಲಗಿತು.

ಲೈಗರ್‌ ಸಿನಿಮಾವನ್ನು ತಮಿಳು, ಮಲಯಾಳಂ ಹಾಗೂ ಕನ್ನಡ ಭಾಷೆಯಲ್ಲಿ ಡಬ್‌ ಮಾಡಲಾಗಿದೆ. ಡಿಸ್ನಿ-ಹಾಟ್‌ಸ್ಟಾರ್‌ ಒಟಿಟಿಯಲ್ಲಿ ಸ್ಟ್ರೀಮ್‌ ಆಗುತ್ತಿದೆ.

English summary
Actor Vijay Devarakonda is being interrogated by the Enforcement Directorate from 8 am today and is being questioned about the source of investment for his film Ligar. Ligar is the Telugu actor's Hindi debut. It was reportedly made on a budget of around ₹ 100 crore,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X