LIC Propaganda Tool: ಹಿಂದಿಮಯವಾದ ಎಲ್‌ಐಸಿ ಜಾಲತಾಣ, ಭಾಷಾ ಹೇರಿಕೆ ವಿರುದ್ಧ MK ಸ್ಟಾಲಿನ್ ಗರಂ
ಬೆಂಗಳೂರು, ನವೆಂಬರ್ 19: ಕೇಂದ್ರ ಸರ್ಕಾರ ಪ್ರಮುಖ ಪರೀಕ್ಷೆಗಳು, ಆಡಳಿತ, ಶಿಕ್ಷಣ ಸೇರಿದಂತೆ ಒಂದಲ್ಲ ಒಂದು ರೀತಿಯಲ್ಲಿ ಹಿಂದಿ ಹೇರಿಕೆ ಮಾಡುವ ಆರೋಪ ಎದುರಿಸಿತ್ತು. ಇದೀಗ ತನ್ನ ವ್ಯಾಪ್ತಿಯ LIC (ಜೀವನ್ ವಿಮಾ ನಿಗಮ)ಯಲ್ಲಿ ಸಹ ಹಿಂದೆಯನ್ನು ಮಾಡುತ್ತಿರುವ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಕೇಂದ್ರದ ವಿರುದ್ಧ ಕೆಂಡವಾಗಿದ್ದಾರೆ.
ಈ ಕುರಿತು ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ ಟ್ವಿಟ್ ಮಾಡಿರುವ ಅವರು, ಜೀವನ್ ವಿಮಾ ನಿಗಮ (LIC) ವೆಬ್‌ಸೈಟ್ ಸಂಪೂರ್ಣ ಹಿಂದಿಮಯವಾಗಿದ್ದನ್ನು ಖಂಡಿಸಿದ್ದಾರೆ. ಈ ಅಧಿಕೃತ ಜಾಲತಾಣದಲ್ಲಿ ಹಿಂದಿ ಹೇರಿಕೆಯು ಪ್ರಚಾರ ಸಾಧನವಾಗಿ ಬಳಕೆ ಆಗುತ್ತಿದೆ. ವೆಬ್‌ಸೈಟ್ ತುಂಬೆಲ್ಲ ಹಿಂದಿಯೇ ಕಾಣಿಸುತ್ತದೆ ಎಂದು ಅವರು ಫೋಟೋ ಸಮೇತರಾಗಿ ಆಕ್ರೋಶ ಹೊರ ಹಾಕಿದ್ದಾರೆ.

ಹಿಂದಿ ಹೇರಿಕೆ ನಿಲ್ಲಿಸಿ: ಎಂಕೆ ಸ್ಟಾಲಿನ್ ಗುಡುಗು
ದೇಶದ ಜನರಲ್ಲಿ ಹಿಂದಿ ಹೇರಿಕೆಗೆ ಎಲ್‌ಐಸಿ ವೆಬ್‌ಸೈಟ್ ಅನ್ನು ಸಾಧನವೆಂಬಂತೆ ಬಳಕೆ ಮಾಡಲಾಗುತ್ತಿದೆ. ಇಂಗ್ಲಿಷ್ ಅನ್ನು ಆಯ್ಕೆ ಮಾಡುವ ಆಯ್ಕೆಯನ್ನು ಸಹ ಹಿಂದಿಯಲ್ಲಿ ಪ್ರದರ್ಶಿಸಲಾಗಿದೆ ಎಂದು ಎಲ್‌ಐಸಿ ವೆಬ್‌ಸೈಟ್ ಫೋಟೋ ಸಹ ಪೋಸ್ಟ್ ಮಾಡಿದ್ದಾರೆ. ಪೋಸ್ಟನಲ್ಲಿ #ಹಿಂದಿ ಹೇರಿಕೆ ನಿಲ್ಲಿಸಿ ಎಂಬ ಹ್ಯಾಷ್ ಟ್ಯಾಗ್ ಹಾಕಿದ್ದಾರೆ.
ಭಾರತದ ವೈವಿಧ್ಯತೆಯನ್ನು ತುಳಿದಿದ್ದರು ಸಹ ದೇಶದ ಜನರಲ್ಲಿ ಬಲವಂತವಾಗಿ ಸಾಂಸ್ಕೃತಿಕ ಹಾಗೂ ಹಿಂದಿ ಭಾಷೆಯ ಹೇರಿಕೆಯ ಮಾಡುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಎಲ್ಐಸಿ ಕಂಪನಿಯು ಎಲ್ಲಾ ಭಾರತೀಯರ ಪ್ರೋತ್ಸಾಹದಿಂದ ಬೆಳೆದು ಬಂದ ಸಂಸ್ಥೆಯಾಗಿದೆ.

ಹೀಗೆ ಸಹಕಾರದಲ್ಲಿ ಬೆಳೆದ ಈ ಕಂಪನಿಯು ತನ್ನ ಕೊಡುಗೆದಾರರಿಗೆ/ಗ್ರಾಹಕರಿಗೆ ದ್ರೋಹ ಬಗೆಯುವ ಧೈರ್ಯ ಮಾಡಿದರೆ ಹೇಗೆ? ಎಂದು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಪ್ರಶ್ನೆ ಮಾಡಿದ್ದಾರೆ. ಈ ಕೂಡಲೇ ಈ ಭಾಷಾ ದೌರ್ಜನ್ಯವನ್ನು ತಕ್ಷಣವೇ ಹಿಂಪಡೆಯಬೇಕು. ಇಲ್ಲವಾದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅವರು ಆಗ್ರಹಿಸಿದ್ದಾರೆ.
2.1 ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (LICI) 1956 ರ ಅಡಿಯಲ್ಲಿ ರಚಿತವಾದ ಶಾಸನಬದ್ಧ ನಿಗಮವಾಗಿದೆ. ಇದು ಭಾರತ ಸರ್ಕಾರದ ಸಂಪೂರ್ಣ ಸ್ವಾಮ್ಯದಲ್ಲಿದೆ. ಸರ್ಕಾರವೇ ಇದರ ಮಾಲೀಕತ್ವ ವಹಿಸಿಕೊಂಡು ವರ್ಷಗಳಾಗಿವೆ.
The LIC website has been reduced to a propaganda tool for Hindi imposition. Even the option to select English is displayed in Hindi!
— M.K.Stalin (@mkstalin) November 19, 2024
This is nothing but cultural and language imposition by force, trampling on India's diversity. LIC grew with the patronage of all Indians. How… pic.twitter.com/BxHzj28aaX
ಸರ್ಕಾರ ಅಥವಾ ಇತರ ಬೇರೆ ಬೇರೆ ಅಧಿಕೃತ ಜಾಲತಾಣಗಳು ಆಂಗ್ಲ ಇಂಗ್ಲೀಷ್ ಭಾಷೆಗೆ ಆದ್ಯತೆ ನೀಡಿವೆ. ಬಳಿಕ ಹಿಂದಿ ಸೇರಿದಂತೆ ಆಯಾ ಸ್ಥಳೀಯ ಭಾಷೆಗಳಿಗೆ ಅವಕಾಶ ನೀಡಿವೆ. ಆದರೆ ಕೋಟ್ಯಾಂತರ ಜನರು ಜೀವನ್ ವಿಮಾ ನಿಗಮದಲ್ಲಿ ಹಣ ಇಟ್ಟಿದ್ದಾರೆ. ಅಪಾರ ಸಂಖ್ಯೆಯ ಜನರಿಂದ ಎಲ್‌ಐಸಿ ಈ ಹಂತಕ್ಕೆ ಬಂದಿದೆ. ಇದೀಗ ತನ್ನ ವೆಬ್‌ಸೈಟ್‌ನಲ್ಲಿ ಹಿಂದಿಗೆ ಅಗ್ರ ಸ್ಥಾನ ನೀಡುವ ಮೂಲಕ ಅವರೆಲ್ಲರ ಮೇಲೆ ಹಿಂದಿ ಹೇರಿಕೆಗೆ ಮುಂದಾಗಿದೆ.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications