LIC: ತಾಂತ್ರಿಕ ದೋಷದಿಂದ ಹಿಂದಿ ಡಿಫಾಲ್ಟ್ ಆಗಿತ್ತು: ಟೀಕೆ ಬೆನ್ನಲ್ಲೆ ಎಲ್‌ಐಸಿ ಸಬೂಬು

ಬೆಂಗಳೂರು, ನವೆಂಬರ್ 19: ಭಾರತೀಯ ಜೀವ ವಿಮಾ ನಿಗಮ (LIC) ದ ವೆಬ್‌ಸೈಟ್ ಹಿಂದಿ ಹೇರಿಕೆಯ ಸಾಧನವಾಗಿದೆ. ಇಡೀ ವೆಬ್‌ಸೈಟ್‌ ತುಂಬೆಲ್ಲ ಹಿಂದಿ ಬಿಟ್ಟರೇ ಬೇರೆ ಯಾವುದೇ ಭಾಷೆಗಳಿಗೆ ಜಾಗವಿಲ್ಲದಂತಾಗಿತ್ತು. ಈ ಕುರಿತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸೇರಿದಂತೆ ಅನೇಕ ನಾಯಕರು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೆ ಸಬೂಬು ಹೇಳಿರುವ LIC ಇದು ತಾಂತ್ರಿಕ ಗ್ಲಿಚ್ ಎಂದು ಹೇಳಿದೆ.

ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ (LIC) ವೆಬ್‌ಸೈಟ್ ಮುಖಪುಟದಲ್ಲಿ ಹಿಂದಿಯನ್ನು ಡೀಫಾಲ್ಟ್ ಭಾಷೆಯಾಗಿ ಬಂದಿದೆ ಎಂದು ಆಗಿರುವ ಸಮಸ್ಯೆ ತಿಳಿಗೊಳಿಸಲು ಯತ್ನಿಸಿದೆ. ಹಿಂದಿ ಭಾಷೆಯಲ್ಲಿದ್ದ ಜಾಲತಾಣ ಕಂಡು ತೀವ್ರ ಟೀಕೆಗಳು ವ್ಯಕ್ತವಾದವು. ಈ ಕ್ರಮ ಸರಿಯಲ್ಲ ಎಂದು ತಮಿಳುನಾಡಿನಲ್ಲಿ ಆಕ್ರೋಶವನ್ನು ಸೃಷ್ಟಿಯಾಯಿತು.

LIC Website in Hindi LIC says is Technical Glitch after Faced Outrage by TN Govt

ದೇಶದ ಎಲ್ಲ ಜನಸಾಮಾನ್ಯರಿಂದ ಬೆಳೆದ ಕಂಪನಿಯೊಂದು ಈಗ ಅವರಿಗೆ ದ್ರೋಹ ಬಗೆಯಲು ಮುಂದಾಗಿದೆ ಅಂತಲೂ ಸಿಎಂ ಎಂ.ಕೆ.ಸ್ಟಾಲಿನ್ ಕರೆದಿದ್ದಾರೆ. ಹಿಂದಿ ಹೇರಿಕೆಗೆ ಎಲ್‌ಐಸಿ ವೆಬ್‌ಸೈಟ್ ಒಂದು ಸಾಧನವಾಗಿದೆ ಎಂದುಅ ಅವರು ದೂರಿದ್ದಾರೆ. ಅವರು ಸೇರಿದಂತೆ ಅನೇಕ ರಾಜಕೀಯ ನಾಯಕರು ಹಿಂದಿ ಹೇರಿಕೆ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ.

ಭಾಷೆ ಬರದವರಿಗೆ ಹಿಂದಿ ಡಿಫಾಲ್ಟ್ ತೆಗೆಯಲು ಕಷ್ಟ

ನಮ್ಮ ವೆಬ್‌ಸೈಟ್‌ನಲ್ಲಿ ಇಂಗ್ಲಿಷ್ ಬದಲಿಗೆ ಹಿಂದಿ ಡೀಫಾಲ್ಟ್ ಆಗಿ ಪ್ರದರ್ಶನ ಕಂಡಿದೆ. ಇದು ಬಳಕೆದಾರರಿಗೆ ತುಸು ಸಮಸ್ಯೆ ಉಂಟು ಮಾಡಿದೆ. ಒಂದು ವೇಳೆ ಜಾಲತಾಣದಲ್ಲಿ ನಿಮಗೆ ಹಿಂದಿ ಗೊತ್ತಾಗದಿದ್ದರೆ ಭಾಷೆ ಬದಲಾವಣೆ, ಹಿಂದಿ ಡಿಫಾಲ್ಟ್ ತೆಗೆಯಲು ಬಾರದೇ ಸಮಸ್ಯೆ ಆಗುತ್ತದೆ.

ದೇಶದ ಬಹುಪಾಲು ಕೊಡುಗೆದಾರರಿಂದ ಬೆಳೆದ ಸಂಸ್ಥೆ ಇದೀಗ ಅವರಿಗೇ ದ್ರೋಹ ಮಾಡಲು ಹೊರಟಿದೆ. ಇದೊಂದು ಭಾಷಾ ದಬ್ಬಾಳಿಕೆ ಎಂದು ಸಿಎಂ ಎಂ.ಕೆ.ಸ್ಟಾಲಿನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೆ ಎಲ್‌ಐಸಿ ಎಚ್ಚೆತ್ತುಕೊಂಡಂತಿದೆ.

ನಿರಂಕುಶಾಧಿಕಾರ ಬಹುಕಾಲ ಉಳಿಯಲ್ಲ

ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಸಹ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಹಿಂದಿ ಭಾಷೆಯೇ ಆಗಲಿ ಯಾವುದನ್ನೆ ಆಗಲಿ ಬಲವಂತವಾಗಿ ಹೇರುವ ಕೆಲಸ ಆಗಬಾರದು. ಇದರಿಂದ ಅಭಿವೃದ್ಧಿ ಅಸಾಧ್ಯ ಎಂಬುದನ್ನು ಕೇಂದ್ರ ಸರ್ಕಾರ ಅರ್ಥ ಮಾಡಿಕೊಂಡಂತಿಲ್ಲ. ನಿರಂಕುಶಾಧಿಕಾರ ಬಹುಕಾಲ ಉಳಿಯಲ್ಲ ಎಂದು ಅವರು ದೂರಿದರು.

ಎಲ್‌ಐಸಿಯ ಈ ನಡವಳಿಕೆ ಉದ್ದೇಶಪೂರ್ವಕವಾಗಿಯೇ ಆಗಿದೆ. ಬೇಕಂತಲೇ ಹಿಂದಿ ಹೇರಿಕೆ ಮಾಡಲಾಗಿದೆ. ರಾಜಕೀಯ, ನಾಡು, ಭಾಷೆ, ಸಂಸ್ಕೃತಿ, ರಾಜಕೀಯ ಹೀಗೆ ಪ್ರತಿಯೊಂದರಲ್ಲಿ ದೇಶ ವೈವಿಧ್ಯತೆ ಹೊಂದಿದೆ. ಹೀಗಿದ್ದರು ಕೇಂದ್ರ ಸರ್ಕಾರವು ಹಿಂದಿ ಹೇರಳು ಪ್ರಯತ್ನಿಸುತ್ತಿರುವುದನ್ನು ಎಐಎಡಿಎಂಕೆ ನಾಯಕ ಎಡಪ್ಪಾಡಿ ಕೆ ಪಳನಿಸ್ವಾಮಿ (ಇಪಿಎಸ್) ಅವರು ಖಂಡಿಸಿದರು.

ಹಿಂದಿ ಹೇರಿಕೆ ಯಾವಾಗಲೂ ಕೇಂದ್ರ ಸ್ವಾಮ್ಯದ ಸಂಸ್ಥೆಗಳಿಂದಲೇ ಆಗುತ್ತಿದೆ ಎಂದು ಎಐಎಡಿಎಂಕೆ ವಕ್ತಾರ ಕೋವೈ ಸತ್ಯನ್ ಅವರು ತಿಳಿಸಿದ್ದಾರೆ. ಮಂಗಳವಾರ ನೋಡ ನೋಡುತ್ತಿದ್ದಂತೆ ಇದೊಂದು ಅಭಿಯಾನದಂತೆ ಶುರುವಾಯಿತು. ಅನೇಕ ತಮಿಳು ನಾಡು ನಾಯಕರು ಸಾಮಾಜಿಕ ಜಾಲತಾಣದಲ್ಲಿ ಇದೆಲ್ಲದರ ಬಗ್ಗೆ ಪ್ರತಿಕ್ರಿಯಿಸಿ, ವೆಬ್‌ಸೈಟ್ ಮುಖಪುಟ ಪೋಸ್ಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+