'ಸುಮ್ಮನೆ ಸಂಸ್ಕೃತವನ್ನೇ ರಾಷ್ಟ್ರ ಭಾಷೆ ಮಾಡಿಬಿಡಿ, ಯಾರದೂ ವಿರೋಧ ಇರಲ್ಲ'

ನವದೆಹಲಿ, ಜೂನ್ 6: ತ್ರಿಭಾಷಾ ಸೂತ್ರದ ಅಡಿಯಲ್ಲಿ ಹಿಂದಿಯನ್ನು ಕಡ್ಡಾಯವಾಗಿ ಒಂದು ಭಾಷೆಯಾಗಿ ಕಲಿಸಬೇಕು ಎಂಬ ವಿವಾದ ಹೊಸ ತಿರುವು ಪಡೆದಿದೆ. ಪರಿಶಿಷ್ಟ ಪಂಗಡದ ರಾಷ್ಟ್ರೀಯ ಆಯೋಗದ ಅಧ್ಯಕ್ಷ ನಂದ್ ಕುಮಾರ್ ಸಾಯಿ ಹೊಸ ಬೇಡಿಕೆಯನ್ನು ಸರಕಾರದ ಮುಂದಿಟ್ಟಿದ್ದಾರೆ. ಹಲವು ಭಾರತೀಯ ಭಾಷೆಗಳ ಉಗಮವೇ ಸಂಸ್ಕೃತದಿಂದ ಆಗಿದೆ. ಆದ್ದರಿಂದ ಅದನ್ನೇ ಅಧಿಕೃತ ಭಾಷೆ ಮಾಡಿ ಎಂದಿದ್ದಾರೆ.

ಇನ್ನು ದಕ್ಷಿಣದ ರಾಜ್ಯಗಳು ಹಿಂದಿಯಂತೆ ಸಂಸ್ಕೃತಕ್ಕೆ ವಿರೋಧ ಮಾಡಲು ಸಾಧ್ಯವಿಲ್ಲ. "ನೀವು ಇಂಗ್ಲಿಷ್ ಕಲಿಯಲು ಇಷ್ಟಪಟ್ಟರೆ ಅದು ಒಳ್ಳೆಯದು. ಆದರೆ ನಿಮ್ಮ ಸ್ವಂತ ಭಾಷೆಯನ್ನು ಕಲಿಯಬೇಕು ಹಾಗೂ ಗೌರವಿಸಬೇಕು. ಅದು ಸಂಸ್ಕೃತ. ಆ ಭಾಷೆ ಪರಿಪೂರ್ಣವಾದುದು. ಆದರೆ ಇಂಗ್ಲಿಷ್ ಭಾಷೆ ತಾರ್ಕಿಕವಾಗಿ ಇಲ್ಲ" ಎಂದಿದ್ದಾರೆ.

ಸಾಯಿ ಮಾತನಾಡಿ, ಸಂಸ್ಕೃತವು ಅಧಿಕೃತ ಭಾಷೆಯಾಗಿ ಮಾಡಿಕೊಳ್ಳುವುದು ಭಾರತಕ್ಕೆ ಒಳ್ಳೆಯದು. ತಮಿಳು, ಕನ್ನಡ, ತೆಲುಗು, ಮಲಯಾಳಂ ಮತ್ತು ಹಿಂದಿಗೆ ಸಂಸ್ಕೃತಕ್ಕೆ ಬಹಳ ಹತ್ತಿರವಾದುದು. ಆದ್ದರಿಂದ ಸಂಸ್ಕೃತವನ್ನು ಎಲ್ಲರಿಗೂ ಕಡ್ಡಾಯಗೊಳಿಸಬೇಕು. ಜತೆಗೆ ಇತರ ಭಾಗದಲ್ಲಿರುವ ಜನರು ಇದಕ್ಕೆ ವಿರೋಧಿಸುವುದಿಲ್ಲ ಎಂದಿದ್ದಾರೆ.

Let Sanskrit become official national language; NCST chairman

ಎಲ್ಲ ಸರಕಾರಿ ಶಾಲೆಗಳಲ್ಲೂ ಹಿಂದಿಯನ್ನು ಕಡ್ಡಾಯವಾಗಿ ಕಲಿಸಬೇಕು ಎಂದು ರಾಷ್ಟ್ರೀಯ ಶಿಕ್ಷಣ ನೀತಿ ಕರಡಿನಲ್ಲಿ ತ್ರಿ ಭಾಷಾ ಸೂತ್ರದಡಿ ಶಿಫಾರಸು ಮಾಡಲಾಗಿತ್ತು. ಆ ನಂತರ ಅದನ್ನು ಮಾರ್ಪಡಿಸಲಾಯಿತು. ತಮಿಳುನಾಡು ಸೇರಿದಂತೆ ಇತರ ರಾಜ್ಯಗಳಲ್ಲಿ ಈ ಶಿಫಾರಸಿಗೆ ವಿರೋಧ ವ್ಯಕ್ತವಾಯಿತು.

ಸಾಯಿ ಅವರು ಕೇಂದ್ರ ಸರಕಾರದ ಪೌರತ್ವ ತಿದ್ದುಪಡಿ ಕಾಯ್ದೆ ಮಸೂದೆಗೂ ವಿರೋಧ ವ್ಯಕ್ತಪಡಿಸಿದ್ದಾರೆ. ಆ ಮಸೂದೆ ಅನ್ವಯ ಮುಸ್ಲಿಮ್ ಬಾಹುಳ್ಯದ ಬಾಂಗ್ಲಾದೇಶ್, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಹಿಂದೂಗಳು, ಸಿಖ್ಖರು, ಕ್ರಿಶ್ಚಿಯನ್ನರು, ಬೌದ್ದರು, ಜೈನರು ಹಾಗೂ ಪಾರ್ಸಿಗಳಿಗೆ ಭಾರತದ ಪೌರತ್ವ ನೀಡುವ ಪ್ರಸ್ತಾವ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+