ಏನಿದು ಶಶಿ ತರೂರ್ ಟ್ವೀಟ್: ಫಲಿತಾಂಶಕ್ಕೂ ಮುನ್ನವೇ ಸೋಲೊಪ್ಪಿಕೊಂಡಿತೇ ಕಾಂಗ್ರೆಸ್!?

ನವದೆಹಲಿ, ಮೇ 13: ಆರನೇ ಹಂತದ ಲೋಕಸಭಾ ಚುನಾವಣೆಯ ಮತದಾನ ಮುಗಿದ ಕೂಡಲೇ, ಕಾಂಗ್ರೆಸ್ ಮುಖಂಡ ಶಶಿ ತರೂರ್ ಮಾಡಿರುವ ಟ್ವೀಟ್, ಹಲವು ಪ್ರಶ್ನೆಯನ್ನು ಹುಟ್ಟುಹಾಕಿದೆ.

ಶಶಿ ತರೂರ್ ಅವರ ಟ್ವೀಟ್, ಕಾಂಗ್ರೆಸ್ ಚುನಾವಣೆಯಲ್ಲಿ ಉತ್ತಮ ಸಾಧನೆಯನ್ನು ಮಾಡುವ ಸಾಧ್ಯತೆ ಕಮ್ಮಿಯಿದೆಯಾ ಎನ್ನುವ ಅನುಮಾನ ಅವರಿಗೆ ಕಾಡುತ್ತಿದೆಯಾ ಎನ್ನುವಂತಿದೆ. ತರೂರ್ ಟ್ವೀಟಿಗೆ ಬಂದಿರುವ ಕಾಮೆಂಟುಗಳು ಕೂಡಾ ಅದೇ ರೀತಿಯಿದೆ.

'ಹಿಂದೊಮ್ಮೆ ವಿಶ್ವಕಪ್ ಕ್ರಿಕೆಟಿನ ರಿಸಲ್ಟ್ ಬಗ್ಗೆ ವಾದಿಸಿದ್ದೆವು, ಭಾರತಕ್ಕೆ ಸ್ವದೇಶದಲ್ಲಿ ಅಲ್ಲದಿದ್ದರೂ ಇಂಗ್ಲೆಂಡಿನಲ್ಲಿ ಅಚ್ಚೇದಿನ್ ಬರಲಿ ಎಂದು ಆಶಿಸೋಣ' ಎಂದು ಶಶಿ ತರೂರ್ ಟ್ವೀಟ್ ಮಾಡಿದ್ದಾರೆ. ಈ ಬಾರಿಯ ವಿಶ್ವಕಪ್ ಇಂಗ್ಲೆಂಡ್ ನಲ್ಲಿ ಆಡಲಾಗುತ್ತಿದೆ.

Lets hope “achhe din” come for India in England if not at home: Shashi Tharoor tweet

ಕೇರಳದ ರಾಜಧಾನಿ ತಿರುವನಂತಪುರಂನ ಕಾಂಗ್ರೆಸ್ ಅಭ್ಯರ್ಥಿಯೂ ಆಗಿರುವ ತರೂರ್ ಅವರ ಟ್ವೀಟ್, ಕಾಂಗ್ರೆಸ್ ಆಶಾದಾಯಕ ಫಲಿತಾಂಶ ಬರುವ ನಂಬಿಕೆಯನ್ನು ಕಳೆದುಕೊಂಡಿದೆಯಾ ಎಂದು ಪ್ರಶ್ನಿಸುವಂತಿದೆ.

'ಹೃದಯದಲ್ಲಿನ ಮಾತು ಬಾಯಿಯಿಂದ ಕೊನೆಗೂ ಹೊರಬಿತ್ತು, ತರೂರ್ ಅವರ ಟ್ವೀಟ್, ಎಲ್ಲಕ್ಕಿಂತ ದೊಡ್ಡ ಎಕ್ಸಿಟ್ ಪೋಲ್', 'ಕಾಂಗ್ರೆಸ್ ಸೋಲು ಒಪ್ಪಿಕೊಳ್ಳುತ್ತಿರುವ ಮೊದಲ ಸೂಚನೆಯಿದು' ಈ ರೀತಿ ಕೆಣಕುವ ಉತ್ತರಗಳು ತರೂರ್ ಅವರಿಗೆ ಟ್ವೀಟಿಗೆ ಬರುತ್ತಿದೆ.

ಶಶಿ ತರೂರ್ ಅವರ ವಿರುದ್ದ ಬಿಜೆಪಿಯಿಂದ ಕೆ ರಾಜಶೇಖರನ್, ಸಿಪಿಐನಿಂದ ಸಿ ದಿವಾಕರನ್ ಸ್ಪರ್ಧಿಸಿದ್ದಾರೆ. ಮೇ 23ಕ್ಕೆ ಚುನಾವಣಾ ಫಲಿತಾಂಶ ಹೊರಬೀಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+