ಅಮಿತ್ ಶಾ ಜಮ್ಮುವಿನಿಂದ ಲಾಲ್ ಚೌಕ್‌ವರೆಗೆ ನಡೆಯಲಿ: ರಾಹುಲ್ ಗಾಂಧಿ ಸವಾಲು
ಜಮ್ಮು ಮತ್ತು ಕಾಶ್ಮೀರದಲ್ಲಿ ಎಲ್ಲವೂ ಚೆನ್ನಾಗಿದೆ ಎನ್ನುವ ಶಾ ಅವರು ಭದ್ರತಾ ಪರಿಸ್ಥಿತಿ ನಿಜವಾಗಿಯೂ ಸುಧಾರಿಸಿದ್ದರೆ ಜಮ್ಮುವಿನಿಂದ ಶ್ರೀನಗರಕ್ಕೆ ಕಾಲಿಡಲಿ ಎಂದು ಸವಾಲು ಹಾಕಿದ್ದಾರೆ.
ಶ್ರೀನಗರ, ಜನವರಿ 30: ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರು ತಾವು ಮುನ್ನಡೆಸುತ್ತಿರುವ ಭಾರತ್ ಜೋಡೊ ಯಾತ್ರೆಯ ಅಂತಿಮ ಘಟ್ಟ ತಲುಪಿದ್ದು, ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಬಹಿರಂಗ ಸವಾಲು ಹಾಕಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಕಾನೂನು ಸುವ್ಯವಸ್ಥೆ ಕುರಿತು ಕಾಂಗ್ರೆಸ್‌ನ ರಾಹುಲ್ ಗಾಂಧಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ಇಲ್ಲಿ ಎಲ್ಲವೂ ಚೆನ್ನಾಗಿದೆ ಎನ್ನುವ ಶಾ ಅವರು ಭದ್ರತಾ ಪರಿಸ್ಥಿತಿ ನಿಜವಾಗಿಯೂ ಸುಧಾರಿಸಿದ್ದರೆ ಜಮ್ಮುವಿನಿಂದ ಲಾಲ್ ಚೌಕ್‌ಗೆ ಎಂದು ಸವಾಲು ಹಾಕಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಉದ್ದೇಶಿತ ಹತ್ಯೆಗಳು ಮತ್ತು ಬಾಂಬ್ ಸ್ಫೋಟಗಳು ಸಾಮಾನ್ಯ ಘಟನೆಯಾಗಿದೆ ಎಂದು ತಿಳಿಸಿದ ರಾಹುಲ್ ಗಾಂಧಿ, ಪರಿಸ್ಥಿತಿ ತುಂಬಾ ಉತ್ತಮವಾಗಿದ್ದರೆ ಬಿಜೆಪಿ ಜನರು ಜಮ್ಮುವಿನಿಂದ ಲಾಲ್ ಚೌಕ್‌ಗೆ ಏಕೆ ನಡೆಯುವುದಿಲ್ಲ?" ಎಂದು ಪ್ರಶ್ನಿಸಿದರು.
ಇತ್ತೀಚೆಗೆ ಭದ್ರತಾ ಲೋಪದಿಂದ ಗಾಂಧಿಯವರ ಭಾರತ್ ಜೋಡೋ ಯಾತ್ರೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕಾಯಿತು. ಪೊಲೀಸರು ಯಾವುದೇ ಭದ್ರತಾ ಲೋಪವಾಗಿಲ್ಲ ಎಂದು ತಿಳಿಸಿದರೆ, ಬಿಜೆಪಿಯು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರದು ಆಧಾರರಹಿತ ಹೇಳಿಕೆ ಎಂದು ಆರೋಪಿಸಿ ಗೇಲಿ ಮಾಡಿತು.
ಶ್ರೀನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಸ್ಥಿತಿ ತುಂಬಾ ಸುರಕ್ಷಿತವಾಗಿದ್ದರೆ ಅಮಿತ್ ಶಾ ಜಮ್ಮುವಿನಿಂದ ಲಾಲ್ ಚೌಕ್‌ಗೆ ಏಕೆ ನಡೆಯುವುದಿಲ್ಲ?" ಎಂದು ತಿಳಿಸಿದರು. ರಾಹುಲ್ ಗಾಂಧಿಯವರು ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರವೇಶಿಸಿದಾಗಿನಿಂದ ಅವರ ಭದ್ರತೆ ಲೋಪವು ಎಲ್ಲೆಡೆ ಸುದ್ದಿಯಾಗಿದೆ. ಭದ್ರತಾ ಲೋಪವಾಗಿಯೂ ರಾಹುಲ್ ಗಾಂಧಿ ಯಾವುದೇ ಅನಾಹುತಕ್ಕೆ ಕಾರಣರಾಗಿಲ್ಲ.

7 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲೂ ನಡಿಗೆ
ಭದ್ರತಾ ಲೋಪದ ಕಾರಣ ನೀಡಿ ಶುಕ್ರವಾರ ಕಾಂಗ್ರೆಸ್ ಯಾತ್ರೆಯನ್ನು ಸ್ಥಗಿತಗೊಳಿಸಿತ್ತು. ಯಾತ್ರೆಯು ಬನಿಹಾಲ್‌ನಿಂದ ಖಾಜಿಗುಂಡ್‌ಗೆ ದಾಟಿದಾಗ ಅಂದು ಅನಂತ್‌ನಾಗ್‌ಗೆ 16 ಕಿಮೀ ಕ್ರಮಿಸುವ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ರಾಹುಲ್ ಗಾಂಧಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಒಮರ್ ಅಬ್ದುಲ್ಲಾ, ಶೀತದ ವಾತಾವರಣ ಮತ್ತು 7 ಡಿಗ್ರಿ ಸೆಲ್ಸಿಯಸ್ ತಾಪಮಾನದ ಹೊರತಾಗಿಯೂ ಭಾರಿ ಜನಸಮೂಹದಿಂದ ಪಾಲ್ಗೊಂಡಿತ್ತು.

ಭದ್ರತಾ ವ್ಯವಸ್ಥೆಗಳು ಹದಗೆಟ್ಟಿವೆ
ರಾಹುಲ್ ಗಾಂಧಿಯವರ ಸುತ್ತಲಿನ ಭದ್ರತಾ ವ್ಯವಸ್ಥೆ ಜನರ ಗುಂಪನ್ನು ನಿಯಂತ್ರಿಸಲು ವಿಫಲವಾಗಿ ಯಾತ್ರೆಯನ್ನು ನಿಲ್ಲಿಸಲು ಅವರಿಗೆ ಸಲಹೆ ನೀಡಿತು. ಜಮ್ಮು ಮತ್ತು ಕಾಶ್ಮೀರ ಆಡಳಿತದ ಭದ್ರತಾ ವ್ಯವಸ್ಥೆಗಳು ಸಂಪೂರ್ಣವಾಗಿ ಹದಗೆಟ್ಟಿವೆ ಎಂದು ಕಾಂಗ್ರೆಸ್ ಆರೋಪಿಸಿತು. ಬಳಿಕ ಕಾಂಗ್ರೆಸ್ ರಾಷ್ಟ್ರಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದು ಸಮರ್ಪಕ ಭದ್ರತೆ ಒದಗಿಸಿ ಎಂದು ಮನವಿ ಮಾಡಿಕೊಂಡರು.

ಸಂಪೂರ್ಣ ಭದ್ರತೆ ಒದಗಿಸುತ್ತೇವೆ
ಜಮ್ಮು ಮತ್ತು ಕಾಶ್ಮೀರ ಪೊಲೀಸರು ಕಳಪೆ ಭದ್ರತೆ ಒದಗಿಸಲಾಗಿಲ್ಲ. ಇಲ್ಲಿ ಯಾವುದೇ ಭದ್ರತಾ ಲೋಪವಾಗಿಲ್ಲ. ನಾವು ಸಂಪೂರ್ಣ ಭದ್ರತೆಯನ್ನು ಒದಗಿಸುತ್ತೇವೆ. ಆಯೋಜಕರು ಗುರುತಿಸಿದ ಅಧಿಕೃತ ವ್ಯಕ್ತಿಗಳು ಮತ್ತು ಜನಸಂದಣಿಯನ್ನು ಮಾತ್ರ ಯಾತ್ರೆಯ ಮಾರ್ಗದ ಕಡೆಗೆ ಒಳಗೆ ಅನುಮತಿಸಲಾಗಿದೆ ಎಂದು ಪೊಲೀಸರು ಸರಣಿ ಟ್ವೀಟ್‌ಗಳಲ್ಲಿ ತಿಳಿಸಿದ್ದಾರೆ.

ಜನರು ಯಾತ್ರೆಗೆ ಸೇರು ವಿಚಾರ ತಿಳಿಸಿಲ್ಲ
ಈ ಕುರಿತು ಬಿಜೆಪಿಯ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಮಾತನಾಡಿ, ರಾಹುಲ್ ಗಾಂಧಿ ಅವರು ಅನಿಯಂತ್ರಿತ ಆರೋಪಗಳನ್ನು ಮಾಡುವ ಅಭ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ಅವರು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮತ್ತು ಭದ್ರತಾ ಏಜೆನ್ಸಿಗಳ ವಿರುದ್ಧ ಮಾಡಿರುವ ಹೇಳಿಕೆಗಳು ಆಧಾರರಹಿತವಾಗಿವೆ. ಬನಿಹಾಲ್‌ನಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಯಾತ್ರೆಗೆ ಸೇರುತ್ತಾರೆ ಎಂದು ಆಯೋಜಕರು ಪೊಲೀಸರಿಗೆ ಏಕೆ ತಿಳಿಸಲಿಲ್ಲ. ಭದ್ರತಾ ವ್ಯವಸ್ಥೆಯಲ್ಲಿ ಯಾವುದೇ ಲೋಪವಾಗಿಲ್ಲ ಮತ್ತು ಕಾಶ್ಮೀರ ಪೊಲೀಸರು ಅದನ್ನು ತಿಳಿಸಿದ್ದಾರೆ ಎಂದು ಅವರು ಹೇಳಿದ್ದಾರೆ.












Click it and Unblock the Notifications