Bishan Singh Bedi: ಭಾರತ ತಂಡದ ಮಾಜಿ ಸ್ಪಿನ್ನರ್ ಬಿಶನ್ ಸಿಂಗ್ ಬೇಡಿ ನಿಧನ

ಭಾರತದ ಮಾಜಿ ಸ್ಪಿನ್ನರ್ ಬಿಶನ್ ಸಿಂಗ್ ಬೇಡಿ 77 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಕ್ರಿಕೆಟ್‌ನಲ್ಲಿ ತಮ್ಮ ಬೌಲಿಂಗ್ ಮೂಲಕ ಹಲವು ದಾಖಲೆಗಳನ್ನು ಬರೆದಿದ್ದರು. ದಂತಕಥೆ ಸ್ಪಿನ್ನರ್ 67 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ ಮತ್ತು 266 ವಿಕೆಟ್‌ಗಳನ್ನು ಪಡೆದಿದ್ದಾರೆ. ಅಲ್ಲದೆ 10 ಏಕದಿನ ಪಂದ್ಯಗಳಲ್ಲಿ ಏಳು ವಿಕೆಟ್ ಕಬಳಿಸಿದ್ದಾರೆ.

1944 ರಲ್ಲಿ ಅಮೃತಸರದಲ್ಲಿ ಜನಿಸಿದ ಬಿಶನ್ ಸಿಂಗ್ ಬೇಡಿ, ದೇಶೀಯ ಕ್ರಿಕೆಟ್‌ನಲ್ಲಿ ದೆಹಲಿ ತಂಡಕ್ಕಾಗಿ ಆಡಿದರು, 370 ಪಂದ್ಯಗಳಲ್ಲಿ 1,560 ವಿಕೆಟ್‌ಗಳೊಂದಿಗೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಪ್ರಮುಖ ವಿಕೆಟ್‌ ಟೇಕರ್‌ ಆಗಿದ್ದರು.

Legendary Indian Spinner Bishan Singh Bedi, Aged 77, Passes Away

1966 ರಲ್ಲಿ ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನವನ್ನು ಪ್ರಾರಂಭಿಸಿದರು. 1975 ರ ವಿಶ್ವಕಪ್‌ನಲ್ಲಿ ಭಾರತದ ಮೊದಲ ಏಕದಿನ ಗೆಲುವಿನಲ್ಲಿ ಅವರ ಕೊಡುಗೆ ಅತ್ಯಂತ ಗಮನಾರ್ಹವಾಗಿದೆ. ಆ ಪಂದ್ಯದಲ್ಲಿ 12 ಓವರ್ ಬೌಲಿಂಗ್ ಮಾಡಿದ್ದ ಅವರು ಕೇವಲ 8 ರನ್ ನೀಡಿ ಒಂದು ವಿಕೆಟ್ ಪಡೆದು, ಭಾರತ ತಂಡದ ಗೆಲುವಿಗೆ ಕೊಡುಗೆ ನೀಡಿದ್ದರು.

ನಾಯಕನಾಗಿ ಇತಿಹಾಸ ಬರೆದ ಬೇಡಿ

ಬಿಶನ್ ಸಿಂಗ್ ಬೇಡಿ ಅವರು ಭಾರತ ತಂಡದಲ್ಲಿ ನಾಯಕತ್ವದ ಪಾತ್ರವನ್ನು ವಹಿಸಿದರು ಮತ್ತು ಇಂಗ್ಲೆಂಡ್ ವಿರುದ್ಧದ ಭಾರತದ ಐತಿಹಾಸಿಕ 1971 ಸರಣಿ ವಿಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ನಾಯಕ ಅಜಿತ್ ವಾಡೇಕರ್ ಗಾಯಗೊಂಡು ಹೊರಗುಳಿದ ಬಳಿಕ ತಂಡವನ್ನು ಮುನ್ನಡೆಸಿದ ಬಿಶನ್ ಸಿಂಗ್ ಬೇಡಿ ಅವರು ಐತಿಹಾಸಿಕ ಸರಣಿ ಗೆಲುವಿಗೆ ಕಾರಣರಾದರು.

ಪ್ರಸಿದ್ಧ ಸ್ಪಿನ್ನರ್ ಇಂಗ್ಲಿಷ್ ಕೌಂಟಿಯಲ್ಲಿ ಅತ್ಯಂತ ಯಶಸ್ವಿ ಸಾಗರೋತ್ತರ ಆಟಗಾರರಲ್ಲಿ ಒಬ್ಬರಾಗಿದ್ದರು. ಅವರು ನಾರ್ಥಾಂಪ್ಟನ್‌ಶೈರ್‌ಗಾಗಿ 102 ಪಂದ್ಯಗಳನ್ನು ಆಡಿದ್ದು ಮತ್ತು 434 ವಿಕೆಟ್‌ಗಳನ್ನು ಪಡೆದರು, ಕೌಂಟಿ ಕ್ರಿಕೆಟ್‌ನಲ್ಲಿ ಭಾರತೀಯ ಆಟಗಾರನೊಬ್ಬ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯಾಗಿ ಇನ್ನೂ ಉಳಿದುಕೊಂಡಿದೆ.

ಎರಪಳ್ಳಿ ಪ್ರಸನ್ನ, ಬಿಎಸ್ ಚಂದ್ರಶೇಖರ್ ಮತ್ತು ಎಸ್. ವೆಂಕಟರಾಘವನ್ ಅವರೊಂದಿಗೆ ಬೇಡಿ ಅವರು ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಮಾರಕವಾದ ಸ್ಪಿನ್ ದಾಳಿಯನ್ನು ಸಂಘಟಿಸುತ್ತಿದ್ದರು. ಇದು ವಿಶ್ವಾದ್ಯಂತ ಸ್ಪಿನ್ ಬೌಲಿಂಗ್ ಹೆಚ್ಚಾಗಲು ಕಾರಣವಾಯಿತು.

1969-70ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ ಬೇಡಿ 21 ವಿಕೆಟ್‌ಗಳೊಂದಿಗೆ ಸರಣಿಯನ್ನು ಮುಗಿಸಿದರು. ಇಂಗ್ಲೆಂಡ್ ವಿರುದ್ಧ 25 ವಿಕೆಟ್, ವೆಸ್ಟ್ ಇಂಡೀಸ್ ವಿರುದ್ಧ 18, ಇಂಗ್ಲೆಂಡ್ ವಿರುದ್ಧ 22 ಮತ್ತೆ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ 25 ಮತ್ತು 31 ವಿಕೆಟ್ ಪಡೆದ ಅವರು ಶ್ರೇಷ್ಠ ಸ್ಪಿನ್ನರ್ ಎಂದು ಗುರುತಿಸಿಕೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+