ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾನೂನು ತೊಡಕು: ಅಮೆರಿಕದ ಲಸಿಕೆ ಭಾರತಕ್ಕಿನ್ನೂ ದೊರೆತಿಲ್ಲ

|
Google Oneindia Kannada News

ನವದೆಹಲಿ, ಜುಲೈ 28: ಕಾನೂನು ಬಿಕ್ಕಟ್ಟಿನಿಂದಾಗಿ ಅಮೆರಿಕ ಸೇರಿದಂತೆ ಅಭಿವೃದ್ಧಿ ಹೊಂದಿರುವ ದೇಶಗಳಿಂದ ಕೊರೊನಾ ಲಸಿಕೆ ಭಾರತವನ್ನು ತಲುಪಿಲ್ಲ.

ಕೆಲವೇ ದಿನಗಳ ಹಿಂದಷ್ಟೇ ಲಕ್ಷಾಂತರ ಡೋಸ್‌ಗಳನ್ನು ದಕ್ಷಿಣ ಕೊರಿಯಾ, ಭೂತಾನ್, ಬಾಂಗ್ಲಾದೇಶಕ್ಕೆ ಅಮೆರಿಕ ನೀಡಿದೆ. ಆದರೆ ಹಲವು ಕಾನೂನು ಅಗತ್ಯಗಳನ್ನು ಪೂರೈಸಲು ಸಾಧ್ಯವಾಗದೇ ಇರುವುದರಿಂದ ಭಾರತಕ್ಕೆ ಇದುವರೆಗೂ ಲಸಿಕೆಗಳನ್ನು ಪೂರೈಸಲು ಸಾಧ್ಯವಾಗಿಲ್ಲ ಎಂದು ಕೋವ್ಯಾಕ್ಸ್ ಮಾಹಿತಿ ನೀಡಿದೆ.

ಭಾರತದಲ್ಲಿ 2.87 ಕೋಟಿ ಡೋಸ್ ಲಸಿಕೆ ಇನ್ನೂ ಬಳಕೆಯಾಗಿಲ್ಲ ಭಾರತದಲ್ಲಿ 2.87 ಕೋಟಿ ಡೋಸ್ ಲಸಿಕೆ ಇನ್ನೂ ಬಳಕೆಯಾಗಿಲ್ಲ

ಈ ದೇಶಗಳ ಲಸಿಕೆಗಳಿಗೆ ಸ್ಥಳೀಯವಾಗಿ ಪ್ರಾಯೋಗಿಕ ಪರೀಕ್ಷೆ ನಡೆಸುವ ನಿಯಮಗಳನ್ನು ಭಾರತ ಸಡಿಲಗೊಳಿಸಿದ್ದರೂ ಕೂಡ, ಫೈಜರ್ ಹಾಗೂ ಮಾಡೆರ್ನಾ ಕಂಪನಿಗಳು ಕಾನೂನು ರಕ್ಷಣೆ ನೀಡಬೇಕೆಂದು ತಿಳಿಸಿದ್ದವು.

 ಲಸಿಕೆ ಕಂಪನಿ ಜತೆ ಮಾತುಕತೆ ನಡೆಸಲು ತಂಡ ರಚನೆ

ಲಸಿಕೆ ಕಂಪನಿ ಜತೆ ಮಾತುಕತೆ ನಡೆಸಲು ತಂಡ ರಚನೆ

ಲಸಿಕಾ ತಯಾರಿಕಾ ಕಂಪನಿಗಳ ಜತೆ ಮಾತುಕತೆ ನಡೆಸಲು ಅಧಿಕಾರಿಗಳ ತಂಡಗಳನ್ನು ರಚಿಸಲಾಗಿದೆ. ಈ ತಂಡವು ಫೈಜರ್, ಮಾಡೆರ್ನಾ ಹಾಗೂ ಜಾನ್ಸನ್ ಆಂಡ್ ಜಾನ್ಸನ್ ಜತೆ ನಿರಂತರವಾಗಿ ಮಾತುಕತೆ ನಡೆಸುತ್ತಿದ್ದು, ಲಸಿಕೆ ಪೂರೈಕೆಗೆ ತೊಡಕಾಗಿರುವ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದೆ.

 ಭಾರತದ ಕಂಪನಿಗಳಿಗೂ ಪರಿಹಾರ

ಭಾರತದ ಕಂಪನಿಗಳಿಗೂ ಪರಿಹಾರ

ವಿದೇಶಿ ಲಸಿಕೆಗಳಿಗೆ ನಷ್ಟ ಪರಿಹಾರ ನೀಡುವುದೇ ಆಗಿದ್ದಲ್ಲಿ ಭಾರತದ ತಯಾರಕರಿಗೂ ಇದೇ ನಿಯಮ ಅನ್ವಯವಾಗಲಿದೆ ಎಂದು ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಪ್ರತಿಪಾದಿಸಿದೆ.

 ಜವಾಬ್ದಾರಿ ವಹಿಸಿಕೊಳ್ಳಲು ಸಿಪ್ಲಾ ಒಪ್ಪಿಗೆ ನೀಡಿತ್ತು

ಜವಾಬ್ದಾರಿ ವಹಿಸಿಕೊಳ್ಳಲು ಸಿಪ್ಲಾ ಒಪ್ಪಿಗೆ ನೀಡಿತ್ತು

ಮಾಡೆರ್ನಾದ ಸಹಭಾಗಿ ಸಿಪ್ಲಾ ಹಲವು ಜವಾಬ್ದಾರಿಗಳನ್ನು ನಿಭಾಯಿಸುವುದಾಗಿ ಒಪ್ಪಿಕೊಂಡಿತ್ತು. ಆದರೆ ಅಮೆರಿಕ ಕಂಪನಿ ಈ ಪ್ರಸ್ತಾಪವನ್ನು ತಳ್ಳಿ ಹಾಕಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸರ್ಕಾರ ಯಾರಿಗೂ ನಷ್ಟ ಪರಿಹಾರ ನೀಡಲು ಸಾಧ್ಯವಿಲ್ಲ, ಆದರೆ, ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ತುರ್ತು ಬಳಕೆಗೆ ಅನುಮೋದನೆ

ತುರ್ತು ಬಳಕೆಗೆ ಅನುಮೋದನೆ

ಜೂನ್ ತಿಂಗಳಲ್ಲಿ ಮಾಡೆರ್ನಾ ಲಸಿಕೆಗೆ ತುರ್ತು ಬಳಕೆಗೆ ಅನುಮೋದನೆ ನೀಡಲಾಗಿತ್ತು. ಆದರೆ, ಫೈಜರ್ ಹಾಗೂ ಜಾನ್ಸನ್ ಆಂಡ್ ಜಾನ್ಸನ್ ಭಾರತದಲ್ಲಿ ಬಳಸಲು ಅನುಮತಿ ಕೋರಿಲ್ಲ.

English summary
wo months after India dropped local-trial rules for COVID-19 vaccines approved by developed countries, not a single dose has arrived as New Delhi dithers over legal protection sought by companies like Pfizer (PFE.N) and Moderna (MRNA.O).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X