ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧೋಕ್ಲಾಂನಿಂದ ಪಾಠ ಕಲಿತುಕೊಳ್ಳಿ, ಭಾರತಕ್ಕೆ ಚೀನಾ ತೀಕ್ಷ್ಣ ಪ್ರತಿಕ್ರಿಯೆ

By Sachhidananda Acharya
|
Google Oneindia Kannada News

ನವದೆಹಲಿ, ಆಗಸ್ಟ್ 30: ಧೋಕ್ಲಾಂ ಸೇನಾ ಜಮಾವಣೆಯಿಂದ ಭಾರತ ಹಿಂದೆ ಸರಿದಿರುವ ಬೆನ್ನಿಗೆ ಚೀನಾ ಮತ್ತೆ ಗುಟುರು ಹಾಕಿದೆ. ಈಗಲಾದರೂ ಪಾಠ ಕಲಿತುಕೊಳ್ಳಿ ಎಂದು ಚೀನಾ ಭಾರತವನ್ನು ಮತ್ತೆ ಕೆಣಕಿದೆ.

ಧೋಕ್ಲಾಂನಿಂದ ಭಾರತೀಯ ಸೇನೆ ಮಾತ್ರ ಹಿಂತೆಗೆತ : ಚೀನಾಧೋಕ್ಲಾಂನಿಂದ ಭಾರತೀಯ ಸೇನೆ ಮಾತ್ರ ಹಿಂತೆಗೆತ : ಚೀನಾ

70 ದಿನಗಳ ನಿರಂತರ ಸೇನಾ ಜಮಾವಣೆಯ ನಂತರ ಭಾರತ ಧೋಕ್ಲಾಂನಿಂದ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಂಡಿತ್ತು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ, ಇದರಿಂದ ಪಾಠ ಕಲಿತುಕೊಳ್ಳಿ ಎಂದು ಭಾರತಕ್ಕೆ ಹೇಳಿದೆ.

Learn from Doklam standoff: China tells India

"ಚೀನಾದ ಸೇನೆ ಯಾವತ್ತೂ ಜಾಗೃತವಾಗಿದೆ ಮತ್ತು ಕೊನೆಗೂ ತನ್ನ ಭೂಭಾಗವನ್ನು ಉಳಿಸಿಕೊಂಡಿದೆ. ಭಾರತ-ಚೀನಾ ಸೇನಾ ಜಮಾವಣೆಯ ನಂತರವೂ ಚೀನಾ ಸೇನೆ ತನ್ನ ಸಾರ್ವಭೌಮತ್ವವನ್ನು ಉಳಿಸಿಕೊಂಡಿದೆ," ಎಂದು ಸೇನೆಯ ಹಿರಿಯ ಕರ್ನಲ್ ವು ಕ್ವಯಾನ್ ಹೇಳಿದ್ದಾರೆ.

Recommended Video

Who Will Win If ώάŕ Starts Between India And China | Oneindia Kannada

ಗಡಿ ವಿವಾದ ಬಳಿಕ ಸೆ.3ರಂದು ಚೀನಾಕ್ಕೆ ಮೋದಿ ಭೇಟಿಗಡಿ ವಿವಾದ ಬಳಿಕ ಸೆ.3ರಂದು ಚೀನಾಕ್ಕೆ ಮೋದಿ ಭೇಟಿ

"ಚೀನಾ ಮತ್ತು ಭಾರತ ಗಡಿಯಲ್ಲಿ ಶಾಂತಿ ಮತ್ತು ಸ್ಥಿರತೆ ಬಹಳ ಮುಖ್ಯ. ಈ ಸೇನಾ ಜಮಾವಣೆ ನಂತರವಾದರೂ ಭಾರತ ಪಾಠ ಕಲಿತುಕೊಳ್ಳಲಿ ಎಂದು ನಾವು ಹೇಳುತ್ತಿದ್ದೇವೆ. ಅಂತರಾಷ್ಟ್ರೀಯ ಕಾನೂನುಗಳನ್ನು ಗೌರವಿಸಿ ಗಡಿಯಲ್ಲಿ ಶಾಂತಿ ಮತ್ತು ಸ್ಥಿರತೆ ಕಾಯ್ದುಕೊಳ್ಳಲು ಭಾರತ ಚೀನಾದೊಂದಿಗೆ ಜತೆಯಾಗಿ ಕೆಲಸ ಮಾಡಬೇಕು. ಈ ಮೂಲಕ ಎರಡೂ ದೇಶಗಳು ತಮ್ಮ ಸೇನೆಗಳು ಆರೋಗ್ಯಕರ ಬೆಳವಣಿಗೆಗೆ ಸಹಕರಿಸಬೇಕು," ಎಂದು ಹೇಳಿದ್ದಾರೆ.

English summary
China has told India to learn from the Doklam standoff. India and China managed to sort out the issue at Doklam following a 70 day standoff.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X