ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಲೂ ಪುತ್ರನಿಗೆ ಬಂಪರ್, ಡಿಸಿಎಂ ಪಟ್ಟ?

By Mahesh
|
Google Oneindia Kannada News

ಪಾಟ್ನ, ನ.20: ಬಿಹಾರ ರಾಜಕೀಯದಲ್ಲಿ ಎಲ್ಲವೂ ಸಾಧ್ಯ. ಅದರಲ್ಲೂ ನೀವು ಲಾಲೂ ಪ್ರಸಾದ್ ಯಾದವ್ ಅವರ ಕುಟುಂಬಸ್ಥರಾಗಿದ್ದಾರೆ ಅಧಿಕಾರ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ನಿತೀಶ್ ಕುಮಾರ್ ಅವರು ಐದನೇ ಬಾರಿಗೆ ಸಿಎಂ ಪಟ್ಟ ಅಲಂಕರಿಸಲು ಸಿದ್ಧರಾಗುತ್ತಿರುವ ಬೆನ್ನಲ್ಲೇ ಲಾಲೂ ಅವರ ಪುತ್ರ ತೇಜಸ್ವಿ ಅವರಿಗೆ ಡಿಸಿಎಂ ಸ್ಥಾನ ಕೈಗೆಟುಕುತ್ತಿದೆ.

ಆರ್​ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಇಬ್ಬರು ಮಕ್ಕಳು ಮಹಾಮೈತ್ರಿಕೂಟದ ನಾಯಕ ನಿತೀಶ್ ಕುಮಾರ್ ಅವರ ಸಂಪುಟ ಸೇರುವುದು ನಿಚ್ಚಳವಾಗಿದೆ. ತೇಜಸ್ವಿ ಯಾದವ್ ಮತ್ತು ತೇಜ್ ಪ್ರತಾಪ್ ಯಾದವ್ ಅವರು ಶುಕ್ರವಾರ ಮಧ್ಯಾಹ್ನ ನಿತೀಶ್ ಸಂಪುಟ ಸೇರಲಿದ್ದಾರೆ ಎಂದು ಆರ್ ಜೆ ಡಿ ಹೇಳಿದೆ. [ಬಿಹಾರ: ನಿತೀಶ್ ಹ್ಯಾಟ್ರಿಕ್, ನಡೆಯಲಿಲ್ಲ ಮೋದಿ ಟ್ರಿಕ್]

Tejaswi Yadav, Lalu Yadav's First Timer Son, May be Deputy Chief Minister at 26

ಕೇವಲ 9ನೇ ತರಗತಿ ವಿದ್ಯಾರ್ಹತೆ ಹೊಂದಿರುವ ತೇಜಸ್ವಿ ಯಾದವ್ ಅವರು 26ವರ್ಷ ವಯಸ್ಸಿಗೆ ಉಪಮುಖ್ಯಮಂತ್ರಿಯಾಗುವ ಯೋಗ ಬಂದಿದೆ. ಲಾಲು ಆಪ್ತ ಅಬ್ದುಲ್ ಬಾರಿ ಸಿದ್ದಿಕಿ ಅವರಿಗೆ ಹಣಕಾಸು ಖಾತೆ ಸಿಗುವ ಸಾಧ್ಯತೆ ಇದೆ. ನವೆಂಬರ್ 20ರಂದು ನಿತೀಶ್ ಕುಮಾರ್ 5ನೇ ಬಾರಿಗೆ ಬಿಹಾರ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಈ ಸಮಾರಂಭದಲ್ಲಿ ಪಾಲ್ಗೊಳ್ಳಲು ಕರ್ನಾಟಕದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಜೆ ಜಾರ್ಜ್ ತೆರಳಿದ್ದಾರೆ. ಪ್ರಧಾನಿ ಮೋದಿ ಅವರ ಪ್ರತಿನಿಧಿಯಾಗಿ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು ಹಾಜರಿರಲಿದ್ದಾರೆ.

ನಿತೀಶ್ ಕುಮಾರ್ ಅವರ ಸಂಪುಟಕ್ಕೆ ಆರ್ ಜೆ ಡಿ ಹಾಗೂ ಜೆಡಿಯು ಕಡೆಯಿಂದ ತಲಾ 12 ಸಚಿವರು ಹಾಗೂ ಕಾಂಗ್ರೆಸ್ಸಿನಿಂದ ನಾಲ್ವರು ಸಂಪುಟ ಸೇರಲಿದ್ದಾರೆ.

English summary
Tejaswi Prasad Yadav won his first election on the day he turned 26. Two weeks later, he is set to become Bihar's deputy chief minister, say sources. What qualifies the political rookie, who has only finished class 9, for the post is his last name.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X