ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಫಿನಾಡಿನ ನೀಲಿ ಕುರುಂಜಿ ಹೂ ಇದೀಗ ಪ್ರವಾಸಿಗರ ಆಕರ್ಷಣೆ; ವಿಶೇಷತೆ ಇಲ್ಲಿದೆ ನೋಡಿ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಅಕ್ಟೋಬರ್‌, 01: ಕಾಫಿನಾಡಿನಲ್ಲಿ ಅರಳಿ ನಿಂತಿರುವ ಅಪರೂಪದ ಹೂವೊಂದು ಇಲ್ಲಿನ ಪ್ರಕೃತಿ ಸೌಂದರ್ಯದ ಶ್ರೀಮಂತಿಕೆಯನ್ನು ಇಮ್ಮಡಿಗೊಳಿಸಿದೆ. 12 ವರ್ಷಗಳಿಗೊಮ್ಮೆ ಅರಳುವ ಈ ಹೂವು ಕಾಫಿನಾಡಿನ ಸೌಂದರ್ಯದ ದಿಕ್ಕನ್ನೇ ಬದಲಿಸಲಿದೆ. ಕಣ್ಣು ಹಾಯಿಸಿದಲೆಲ್ಲಾ ಕಾಣುವ ಅಪರೂಪದ ನೀಲಿ ಕುರುಂಜಿ ನೋಡುಗರ ಕಣ್ಮನ ಸೆಳೆಯುವರ ಜೊತೆಗರ ಪ್ರವಾಸಿಗರನ್ನು ಕೈ ಬೀಸಿ ತನ್ನತ್ತ ಕರೆಯುತ್ತಿದೆ.

ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಚಿಕ್ಕಮಗಳೂರಿನ ಗಿರಿ-ಪರ್ವತ ಶ್ರೇಣಿಗಳ ಸಾಲು ನೀಲಿ ರೂಪ ಪಡೆದುಕೊಳ್ಳುತ್ತಿವೆ. ಬೆಟ್ಟ-ಗುಡ್ಡಗಳೆಲ್ಲಾ ನೀಲಿಯಾಗಿ ಕಂಗೊಳಿಸುತ್ತಿವೆ. ರಸ್ತೆಯ ಪಕ್ಕದಲ್ಲಿ ಅರಳಿ ನಿಂತಿರುವ ಕುರುಂಜಿ ಪ್ರವಾಸಿಗರನ್ನು ಕೈ ಬೀಸಿ ತನ್ನತ್ತ ಕರೆಯುತ್ತಿದೆ. ಪಶ್ಚಿಮ ಘಟ್ಟಗಳ ಪ್ರಕೃತಿಯಲ್ಲಿ ವಿವಿಧ ಬಗೆಯ ನಿಗೂಢಗಳು ಬಹಳಷ್ಟು ಇವೆ. ಅವುಗಳಲ್ಲಿ ಕುರುಂಜಿ ಸಸ್ಯವೂ ಒಂದಾಗಿದೆ. ಸಸ್ಯ ವಿಜ್ಞಾನದಲ್ಲಿ ಕುರುಂಜಿಗೆ 'ಸ್ಟ್ರೋಬಿಲಾಂಥಿಸ್' ಎಂಬ ಹೆಸರು ಇದೆ. 70ಕ್ಕೂ ಹೆಚ್ಚು ಪ್ರಬೇಧಗಳು (ಕುಂತಿಯಾನಸ್, ಬಾರ್ಬೇಟಸ್, ಸೆಸಿಲಿಸ್, ಕನ್ಸಾಗ್ವಿನಿಯಸ್) ಪಶ್ಚಿಮ ಘಟ್ಟಗಳಲ್ಲಿ ಕಂಡುಬರುತ್ತವೆ. 2, 4, 7, 12 ಹಾಗೂ 16 ವರ್ಷಗಳಿಗೊಮ್ಮೆ ಅರಳುವುದು ಈ ಸಸ್ಯ ಪುಷ್ಪಗಳ ವಿಶೇಷ ಎಂದು ತಜ್ಞರು ಹೇಳುತ್ತಾರೆ.

ಚಿಕ್ಕಮಗಳೂರು: 14 ವರ್ಷದ ಬಳಿಕ ತುಂಬಿದ ವಿಷ್ಣು ಸಮುದ್ರ ಕೆರೆಚಿಕ್ಕಮಗಳೂರು: 14 ವರ್ಷದ ಬಳಿಕ ತುಂಬಿದ ವಿಷ್ಣು ಸಮುದ್ರ ಕೆರೆ

 ಗಿರಿ ಶ್ರೇಣಿಯಲ್ಲಿ ಅರಳುವ ನೀಲ ಕುರುಂಜಿ ಪುಷ್ಪ

ಗಿರಿ ಶ್ರೇಣಿಯಲ್ಲಿ ಅರಳುವ ನೀಲ ಕುರುಂಜಿ ಪುಷ್ಪ

ಚಿಕ್ಕಮಗಳೂರು ಜಿಲ್ಲೆಯ ಗಿರಿಶ್ರೇಣಿಯಲ್ಲಿ ಈಗ ನೀಲ ಕುರುಂಜಿ ಪುಷ್ಪಗಳು ಅರಳಿದ್ದು, ಬೆಟ್ಟದ ಬಹುಭಾಗವನ್ನು ಈಗ ನೀಲಿಯಾಗಿ ಪರಿವರ್ತಿಸಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಈ ಗಿರಿ ಶ್ರೇಣಿಯಲ್ಲಿ ಅರಳಿರುವ ಹೂವುಗಳನ್ನು ಸ್ಟ್ರೋಬಿಲಾಂಥಸ್ ಸೆಸಿಲಿಸ್ ಎನ್ನುತ್ತಾರೆ. ನೀಲ ಕುರುಂಜಿ ಸಸ್ಯಗಳು 12 ವರ್ಷಗಳಿಗೊಮ್ಮೆ ಹೂ ಬಿಡುತ್ತವೆ. ಈ ಭಾಗದಲ್ಲಿ ಈ ಹೂವಿಗೆ 'ಹಾರ್ಲೆ', 'ಗುರಿಕಿ' ಅಂತಲೂ ಕರೆಯುತ್ತಾರೆ. ಏಕಕಾಲದಲ್ಲಿ ಬೆಟ್ಟದ ತುಂತಾ ಅರಳುವುದು ಈ ಹೂವಿನ ವಿಶೇಷವಾಗಿದೆ. ಈ ಪುಷ್ಪ ವೈಭವವನ್ನು ಕಣ್ತುಂಬಿಕೊಳ್ಳಲು ದೇಶ, ವಿದೇಶಗಳ ಪ್ರವಾಸಿಗರು ಕಾಫಿನಾಡಿಗೆ ಭೇಟಿ ನೀಡುತ್ತಿದ್ದಾರೆ.

 ಶಿಖರಗಳಿಗೆ ತಲುಪುವ ಮಾರ್ಗಗಳು

ಶಿಖರಗಳಿಗೆ ತಲುಪುವ ಮಾರ್ಗಗಳು

ದಕ್ಷಿಣ ಭಾರತದ ಅತಿ ಎತ್ತರ ಶಿಖರದ ಮುಳ್ಳಯ್ಯನ ಗಿರಿ ಸಾಲು, ಸೀತಾಳಯ್ಯನ ಗಿರಿ ಪ್ರದೇಶ, ಬಾಬಾಬುಡನ್ ಗಿರಿ ಭಾಗ, ಮಹಲ್ ಕಡೆ ಹೂವುಗಳು ಅರಳಿವೆ. ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುವ ನಾಡಿನ ಈ ಉತ್ತುಂಗ ಶಿಖರ ಚಿಕ್ಕಮಗಳೂರಿನಿಂದ 26 ಕಿಲೋ ಮೀಟರ್‌ ದೂರದಲ್ಲಿ ಇದೆ. ಈ ಕಳೆದ ವರ್ಷವೂ ಗಿರಿಶ್ರೇಣಿಯ ಕೆಲವೆಡೆ ಹೂವು ಅರಳಿತ್ತು. ಮೂಡಿಗೆರೆ ತಾಲೂಕಿನ ದೇವರುಂದ ಭಾಗದಲ್ಲೂ ಅರಳಿದ್ದವು. ನೀಲಿ ಕುರಂಜಿ ಪುಷ್ಪ ಲೋಕ ಅರಳಿದೆ, ನನ್ನ ನೋಡಲು ಬರುವಿರೇನು ಎಂದು ಕರೆಯುತ್ತಿರುವಂತಿದೆ.

ಚಿಕ್ಕಮಗಳೂರಿನಲ್ಲಿ ಭಾರಿ ಮಳೆಯಿಂದ 391 ಕೋಟಿ ರೂಪಾಯಿ ನಷ್ಟಚಿಕ್ಕಮಗಳೂರಿನಲ್ಲಿ ಭಾರಿ ಮಳೆಯಿಂದ 391 ಕೋಟಿ ರೂಪಾಯಿ ನಷ್ಟ

 12 ವರ್ಷಕೊಮ್ಮೆ ಅರಳುವ ನೀಲಿ ಕುರುಂಜಿ

12 ವರ್ಷಕೊಮ್ಮೆ ಅರಳುವ ನೀಲಿ ಕುರುಂಜಿ

ಪಶ್ಚಿಮಘಟ್ಟ ಅರಣ್ಯ ವ್ಯಾಪ್ತಿಯ ಸಾಲಿನಲ್ಲಿ ಮಾತ್ರ ಅರಳುವ ಈ ಹೂವು, ಇದೀದ ಕಾಫಿನಾಡಿನ ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಅರಳಿ ನಿಂತಿದೆ. ಮುಳ್ಳಯ್ಯನಗಿರಿ, ಮಲ್ಲಂದೂರಿನ ಕಲ್ಲುಬಂಡೆಗುಡ್ಡ ಸುತ್ತಲೂ ಹುಲುಸಾಗಿ ಅರಳಿ ನಿಂತಿದೆ. ಪಶ್ವಿಮಘಟ್ಟ ಸಂರಕ್ಷಿತ ಪ್ರದೇಶ ಆಗಿರುವುದರಿಂದ ಈ ಹೂವು ಇನ್ನೂ ಜೀವಂತವಾಗಿದ್ದು, ಪ್ರತಿ 12 ವರ್ಷಕೊಮ್ಮೆ ಕಾಫಿನಾಡನ್ನು ಭೂ ಲೋಕದ ಸ್ವರ್ಗವನ್ನನ್ನಾಗಿಸುತ್ತದೆ.

 ಕುರುಂಜಿ ಹೂವಿನ ಧಾರ್ಮಿಕ ಇತಿಹಾಸ ಏನು?

ಕುರುಂಜಿ ಹೂವಿನ ಧಾರ್ಮಿಕ ಇತಿಹಾಸ ಏನು?

ಈ ಹೂವಿಗೆ ಧಾರ್ಮಿಕವಾಗಿಯೂ ಇತಿಹಾಸವಿದೆ. ಸುಬ್ರಹ್ಮಣ್ಯ ವೆಳ್ಳಿನ ಮದುವೆ ಆಗುವಾಗ ಈ ಹೂವಿನ ಮಾಲೆ ಹಾಕಿದ್ದರಿಂದ ಈ ಗುರ್ಗಿಯನ್ನ ಪ್ರೇಮದ ಸಂಕೇತವಾಗಿ ಕೇರಳ, ತಮಿಳುನಾಡಿಗರು ಪ್ರೇಮದ ಹೂ ಅಂತಲೂ ಕರೆಯುತ್ತಾರೆ. ಆದ್ದರಿಂದ ಈ ಹೂವು ಅರಳಿದ ಕೂಡಲೇ ಮೊದಲು ಸುಬ್ರಹ್ಮಣ್ಯನಿಗೆ ಅರ್ಪಿಸುತ್ತಾರೆ. ಮಳೆ, ಗಾಳಿ, ನೀರು, ಬೆಳಕು ಹಾಗೂ ಪ್ರಕೃತಿಯ ಸಮತೋಲನ ಆಗಿದ್ದಾಗ ಮಾತ್ರ ಹೂ ಅರಳಲಿದೆ. ಈ ಹೂವುಗಳು ಅರಳಿ ನಿಂತಾಗ ಇದರ ಕಾಂಡದಲ್ಲಿ ಔಷಧಿಯ ಗುಣಗಳಿದ್ದು, ಇದನ್ನು ವಿವಿಧ ಖಾಯಿಲೆಗಳು ಗುಣ ಆಗಲು ಬಳಸುತ್ತಾರೆ.

 ಕುರುಂಜಿ ಹೂವಿನ ಧಾರ್ಮಿಕ ಇತಿಹಾಸ ಏನು?

ಕುರುಂಜಿ ಹೂವಿನ ಧಾರ್ಮಿಕ ಇತಿಹಾಸ ಏನು?

ಈ ಹೂವಿಗೆ ಧಾರ್ಮಿಕವಾಗಿಯೂ ಇತಿಹಾಸವಿದೆ. ಸುಬ್ರಹ್ಮಣ್ಯ ವೆಳ್ಳಿನ ಮದುವೆ ಆಗುವಾಗ ಈ ಹೂವಿನ ಮಾಲೆ ಹಾಕಿದ್ದರಿಂದ ಈ ಗುರ್ಗಿಯನ್ನ ಪ್ರೇಮದ ಸಂಕೇತವಾಗಿ ಕೇರಳ, ತಮಿಳುನಾಡಿಗರು ಪ್ರೇಮದ ಹೂ ಅಂತಲೂ ಕರೆಯುತ್ತಾರೆ. ಆದ್ದರಿಂದ ಈ ಹೂವು ಅರಳಿದ ಕೂಡಲೇ ಮೊದಲು ಸುಬ್ರಹ್ಮಣ್ಯನಿಗೆ ಅರ್ಪಿಸುತ್ತಾರೆ. ಮಳೆ, ಗಾಳಿ, ನೀರು, ಬೆಳಕು ಹಾಗೂ ಪ್ರಕೃತಿಯ ಸಮತೋಲನ ಆಗಿದ್ದಾಗ ಮಾತ್ರ ಹೂ ಅರಳಲಿದೆ. ಈ ಹೂವುಗಳು ಅರಳಿ ನಿಂತಾಗ ಇದರ ಕಾಂಡದಲ್ಲಿ ಔಷಧಿಯ ಗುಣಗಳಿದ್ದು, ಇದನ್ನು ವಿವಿಧ ಖಾಯಿಲೆಗಳು ಗುಣ ಆಗಲು ಬಳಸುತ್ತಾರೆ.

ಒಟ್ಟಾರೆ ಕಾಫಿನಾಡಿನಲ್ಲಿ ಒಂದೊಂದು ಕಾಲದಲ್ಲೂ ಒಂದೊಂದು ರೀತಿಯ ಸೌಂದರ್ಯ ಮನೆ ಮಾಡಿರುತ್ತದೆ. ಈವರೆಗೆ ಹಸಿರಿನಿಂದ ಕಂಗೊಳಿಸುವ ಬೆಟ್ಟಗುಡ್ಡಗಳನ್ನು ನೋಡಿದ್ದ ನಾವು-ನೀವು, ಇನ್ಮುಂದೆ ನೀಲಿ ಬೆಟ್ಟಗಳನ್ನು ನೋಡಬೇಕು ಅಂದರೆ ಕಾಫಿನಾಡಿಗೆ ಬರಲೇಬೇಕು. ತಿಂಗಳ ಕಾಲ ಅರಳಿ ನಿಲ್ಲುವ ಇಲ್ಲಿನ ಸೌಂದರ್ಯಕ್ಕೆ ಸರಿಸಾಟಿ ಮತ್ತೊಂದಿಲ್ಲ ಅನ್ನುವುದಂತೂ ಸತ್ಯವಾಗಿದೆ.

English summary
Kurinji flower blooming in Chikkamagalur district brought richness of nature beauty. Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X