ಕೇರಳ: ಸ್ವಾಮೀಜಿಯ ಮರ್ಮಾಂಗ ಕತ್ತರಿಸಿದ ಪ್ರಕರಣಕ್ಕೆ ತಿರುವು

Posted By:
Subscribe to Oneindia Kannada

ಕೊಲ್ಲಂ, ಜೂನ್ 19: ಕೇರಳದ ಕಾನೂನು ವಿದ್ಯಾರ್ಥಿನಿಯೊಬ್ಬಳು ತನ್ನ ಮೇಲೆ ಎಂಟು ವರ್ಷಗಳಿಂದ ನಿರಂತರ ಅತ್ಯಾಚಾರ ಎಸಗುತ್ತಿದ್ದ ಆಶ್ರಮವಾಸಿಯೊಬ್ಬನ ಮರ್ಮಾಂಗವನ್ನು ಕತ್ತರಿಸಿ ಹಾಕಿದ ಕೇಸಿಗೆ ಈಗ ತಿರುವು ಸಿಕ್ಕಿದೆ.

ಕೊಲ್ಲಂನ ಪನ್ಮನ ಆಶ್ರಮದ ಗಂಗೇಶಾನಂದ ಸ್ವಾಮಿ ಅವರ ಜನನಾಂಗಕ್ಕೆ ಕತ್ತರಿ ಹಾಕಿದ್ದ ಯುವತಿ ಈಗ ಬೇರೆ ಕಥೆ ಹೇಳುತ್ತಿದ್ದಾಳೆ. ಸ್ವಾಮೀಜಿ ನನ್ನನ್ನು ಅತ್ಯಾಚಾರ ಮಾಡಿಲ್ಲ, ನಾನು ಪೊಲೀಸರ ಒತ್ತಡಕ್ಕೆ ಸಿಲುಕಿ ಬಲವಂತವಾಗಿ ಹೇಳಿಕೆ ನೀಡಿದೆ ಎಂದಿದ್ದಾಳೆ.

Kerala bobbitisation case: Law Student says She was never raped by godman

ಸ್ವಾಮೀಜಿಯ ವಕೀಲರಿಗೆ ಬರೆದಿರುವ ಪತ್ರದಲ್ಲಿ ಈ ಬಗ್ಗೆ ವಿವರಣೆ ನೀಡಿದ್ದು, ಪೊಲೀಸರ ಒತ್ತಡಕ್ಕೆ ಮಣಿದು, ಸ್ವಾಮೀಜಿ ಮೇಲೆ ಸುಳ್ಳು ಆರೋಪ ಮಾಡಬೇಕಾಯಿತು ಎಂದಿದ್ದಾಳೆ.

ಪತ್ರದಲ್ಲಿ ಏನಿದೆ?: ಸ್ವಾಮೀಜಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನೀಡಿಲ್ಲ. ನಾನು ಬಾಲ್ಯಾವಸ್ಥೆಯಲ್ಲಿದ್ದಾಗಲಿ, ಪ್ರೌಢಾವಸ್ಥೆಗೆ ಬಂದ ಮೇಲಾಗಲಿ ನನ್ನ ಮೇಲೆ ಅತ್ಯಾಚಾರ ನಡೆದಿಲ್ಲ. ಏಳೆಂಟು ವರ್ಷಗಳಿಂದ ನನ್ನ ಮೇಲೆ ಅತ್ಯಾಚಾರ ನಡೆದಿದೆ ಎಂಬುದು ಸುಳ್ಳು ಎಂದು ಯುವತಿ ಹೇಳಿದ್ದಾಳೆ. ಇದಕ್ಕೆ ಸ್ವಾಮಿ ಅವರ ಪರ ವಕೀಲರು ಕೋರ್ಟಿಗೆ ಸಲ್ಲಿಸಲು ಮುಂದಾಗಿದ್ದಾರೆ ಎಂದು ಎನ್ ಡಿಟಿವಿ ವರದಿ ಮಾಡಿದೆ.

ತಿರುವನಂತಪುರಂನ ಸ್ಥಳೀಯ ನ್ಯಾಯಾಲಯದಲ್ಲಿ ಮುಂದಿನ ತಿಂಗಳು ಈ ಕೇಸಿನ ವಿಚಾರಣೆ ನಡೆಯಲಿದೆ. ಇಡೀ ಪ್ರಕರಣದ ತನಿಖೆಯನ್ನು ಸ್ವತಂತ್ರ ತನಿಖಾ ತಂಡಕ್ಕೆ ವಹಿಸುವಂತೆ ಕೋರಿ ಅರ್ಜಿ ಸಲ್ಲಿಸಲಾಗುವುದು ಎಂದು ಮಹಿಳಾ ವಕೀಲೆ ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A 23-year-old law student who made headlines by chopping off the genitals of a 54-year-old self-styled godman now Goes Back On Rape Charge.Studentin her letter has said that she was never raped by the swami, a member of the Panmana Ashram in Kerala's Kollam.
Please Wait while comments are loading...