ವಿಡಿಯೋ: ಕೋಲ್ಕತಾದಲ್ಲಿ ಎಲ್ ಐಸಿ ಕಟ್ಟಡದಲ್ಲಿ ಬೆಂಕಿ ಆಕಸ್ಮಿಕ

Posted By:
Subscribe to Oneindia Kannada
ಕೋಲ್ಕತಾದಲ್ಲಿ ಎಲ್ ಐಸಿ ಕಟ್ಟಡದಲ್ಲಿ ಬೆಂಕಿ ಆಕಸ್ಮಿಕ | Oneindia kannada

ಕೋಲ್ಕತಾ, ಅಕ್ಟೋಬರ್ 19: ಕೋಲ್ಕತಾದ ಮಧ್ಯಭಾಗದಲ್ಲಿರುವ ಜೀವ ವಿಮಾ ನಿಗಮದ(ಎಲ್‌ಐಸಿ) ಕಟ್ಟಡದಲ್ಲಿ ಗುರುವಾರ ಬೆಂಕಿ ಹೊತ್ತಿಕೊಂಡಿದೆ.

ಜವಾಹರ ಲಾಲ್‌ ನೆಹರು ರಸ್ತೆಯಲ್ಲಿರುವ ಕಟ್ಟಡದ ಸರ್ವರ್ ರೂಮಿನಲ್ಲಿ ಮೊದಲಿಗೆ ಬೆಂಕಿ ಕಾಣಿಸಿಕೊಂಡಿದೆ.

Kolkata: Massive Fire breaks out at LIC building on Jawahar Lal Nehru road

ಘಟನಾ ಸ್ಥಳಕ್ಕೆ 10 ಅಗ್ನಿ ಶಾಮಕ ದಳದ ವಾಹನಗಳು ಹಾಗೂ ಸಿಬ್ಬಂದಿ ಆಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

19 ಅಂತಸ್ತಿನ ಕಟ್ಟಡದ 17ನೇ ಅಂತಸ್ತಿನಲ್ಲಿರುವ ಜೀವಸುಧಾ ಕಟ್ಟಡದಲ್ಲಿ ಬೆಳಗ್ಗೆ 10 ಗಂಟೆ ಸುಮಾರಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿತು. ತಕ್ಷಣವೇ ಘಟನಾ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಹತ್ತಕ್ಕೂ ಹೆಚ್ಚು ವಾಹನಗಳನ್ನು ಬಳಸಿ ಬೆಂಕಿಯನ್ನು ನಂದಿಸಿದರು.

ಯಾವುದೇ ರೀತಿಯ ಪ್ರಾಣಹಾನಿ ಸಂಭವಿಸಿಲ್ಲ. ಕೆಲವು ದಾಖಲೆ, ಪುಸ್ತಕಗಳು ಬೆಂಕಿಗೆ ಆಹುತಿಯಾಗಿವೆ ಎಂದು ಎಸ್‍ಬಿಐನ ಕೋಲ್ಕತ್ತಾ ವಿಭಾಗದ ಅಧಿಕಾರಿ ಪಿ.ಪಿ.ಸೇನ್ ಗುಪ್ತ ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kolkata: Massive Fire breaks out at LIC building on Jawahar Lal Nehru road

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ