ನಿತ್ಯ 5 ಕಿಮೀ ದಟ್ಟ ಕಾಡಿನಲ್ಲಿ ಚಾರಣ: ಇಬ್ಬರು ಮಕ್ಕಳಿಗೆ ಶಿಕ್ಷಣ ಕಲಿಸಲು ಶಿಕ್ಷಕ ಜೀವನ್ ಸಾಹಸಕ್ಕೆ ಸಲಾಂ!

ಕೊಲ್ಲಾಪುರ: ಮಕ್ಕಳ ಭವಿಷ್ಯ ನಿರ್ಮಿಸುವ, ಸಮಾಜ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು ಎಂದು ನಾವು ನೆನ್ನೆಯ ಶಿಕ್ಷಕರ ದಿನಾಚರಣೆ ಸ್ಮರಿಸುತ್ತೇವೆ. ನಿಜಕ್ಕೂ ಇಲ್ಲೊಬ್ಬ ಶಿಕ್ಷಕರು ಜೀವ ಪಣಕ್ಕಿಟ್ಟು ನಿತ್ಯ ಶಾಲೆಗೆ ಬರುವ ಪರಿಪಾಟಲು ನೋಡಿದರೆ ಇಂಥವರಿಂದ, ಇಂಥವರಿಗಾಗಿ ಶಿಕ್ಷಕರ ದಿನಾಚರಣೆಗೂ ಒಂದು ಮೆರಗು ಬರುತ್ತದೆ. ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ನಿತ್ಯ 5ಕಿಲೋ ಮೀಟರ್ ಟ್ರೆಕಿಂಗ್ ಮೂಲಕ ಬಂದು ಕುಗ್ರಾಮದ ಇಬ್ಬರೇ ಇಬ್ಬರು ವಿದ್ಯಾರ್ಥಿನಿಯರಿಗೆ ಪಾಠ ಬೋಧಿಸುತ್ತಾರೆ.

ಹೌದು, ಜಿಲ್ಲಾ ಪರಿಷತ್ ಶಿಕ್ಷಕ ಜೀವನ್ ಮಿಥಾರಿ ಎಂಬುವವರು ನಿತ್ಯ ಕಿಲೋ ಮೀಟರ್‍‌ ಗಟ್ಟಲೇ ದಟ್ಟ ಕಾಡಿನಲ್ಲಿ ನಡೆದು ಬಂದು ಪಾಠ ಮಾಡಿ ಹೋಗುತ್ತಾರೆ. ಕೊಲ್ಲಾಪುರದ ಕವಲ್ಟೆಕ್ ಧಂಗರವಾಡ ಗ್ರಾಮದ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ. ಮೂರು ಮನೆಗಳಿರುವ ಈ ಕುಗ್ರಾಮಕ್ಕೆ ಯಾರೊಬ್ಬರು ಬಂದು ಪಾಠ ಮಾಡಲು ಮನಸ್ಸು ಮಾಡಿರಲಿಲ್ಲ. ಆದರೆ ಇಲ್ಲೊಬ್ಬ ಜೀವನ್ ಅವರು ಈ ಜವಾಬ್ದಾರಿ ವಹಿಸಿಕೊಂಡು ಇತರರಿಗೆ ಸ್ಪೂರ್ತಿಯಾಗಿದ್ದಾರೆ.

Kolhapur Teacher Jeevan is Treks 5 Km Through Dense Forest Daily to Teach 2 Students in Remote Village

8, 5 ವರ್ಷದ ಇಬ್ಬರು ವಿದ್ಯಾರ್ಥಿಗಳಿಗೆ ಪಾಠ

ವಿದ್ಯಾರ್ಥಿಗಳ ಭವಿಷ್ಯ ದೃಷ್ಠಿಯಿಂದ ಪ್ರತಿದಿನ ಕರಡಿ, ಚಿರತೆ, ತೋಳ, ಕಾಡು ನಾಯಿ, ಕಾಡೆಮ್ಮೆ ಮತ್ತು ಇತರ ಪ್ರಾಣಿಗಳಿರುವ ಹಾದಿಯಲ್ಲಿ 5 ಕಿ.ಮೀ. ನಡೆದುಕೊಂಡು ಬಂದು ಇಬ್ಬರೂ ಸಹೋದರಿಯರಿಗೆ ಪಾಠ ಮಾಡುತ್ತಾರೆ. ಅದರಲ್ಲಿ ಒಬ್ಬಳಿಗೆ ಎಂಟು ವರ್ಷದ ಮತ್ತು ಇನ್ನೊಬ್ಬಳಿಗೆ ಐದು ವರ್ಷ. ಐದನೇ ವರ್ಷದವಳು ಅಧಿಕೃತವಾಗಿ ಶಾಲೆ ಪ್ರವೇಶಿಸಿಲ್ಲ.

ಗಮನಿಸಬೇಕಾದ ವಿಷಯವೆಂದರೆ ಧಂಗರವಾಡಾ ಸಣ್ಣ ಹಳ್ಳಿ. ಮೂರು ಮನೆಗಳ ಹೊರತಾಗಿ ಮತ್ತೊಂದು ಮನೆ ಇಲ್ಲ. ಇಲ್ಲಿ ವಿದ್ಯುತ್ ಸಂಪರ್ಕವೇ ಇಲ್ಲ. ಗುಡ್ಡದ ಮೇಲಿನ ಈ ಹಳ್ಳಿ ಪ್ರದೇಶವನ್ನು ಕೊಲ್ಲಾಪುರ ಜಿಲ್ಲೆಯಲ್ಲಿ ಅತ್ಯಂತ ಮಳೆ ಬೀಳುವ ಸ್ಥಳವೆಂದು ಗುರುತಿಸಲಾಗಿದೆ. ಇಲ್ಲಿಗೆ ಸೈಕಲ್ ಮೂಲಕವು ತೆರಳಲು ಆಗುವುದಿಲ್ಲ.

28 ಕಿ.ಮೀ ಬೈಕ್‌ನಲ್ಲಿ ಬಂದು, 5ಕಿಮಿ ಚಾರಣ!

ಜಿಲ್ಲಾ ಶಿಕ್ಷಕರ ಬ್ಯಾಂಕಿನ ಮಾಜಿ ಅಧ್ಯಕ್ಷರಾದ ಮಿಥಾರಿ ಸ್ವಯಂಪ್ರೇರಿತವಾಗಿ ಈ ಕೆಲಸ ಒಪ್ಪಿಕೊಂಡಿದ್ದು, ಕಳೆದ 13 ವರ್ಷಗಳಿಂದ ನಿತ್ಯ ಐದು ಕಿ.ಮೀ. ನಡೆದುಕೊಂಡು ಹೋಗಿಯೇ ಪಾಠ ಮಾಡಿಕೊಂಡು ಬರುತ್ತಾರೆ. ಅವರು ಚಾರಣ ಕೈಗೊಳ್ಳುವ ಕಾಡಿನ ಪ್ರವೇಶ ಪಾಯಿಂಟ್‌ನಿಂದ ಸುಮಾರು 28 ಕಿ.ಮೀ. ದೂರದ ಕೇಲ್ ಗ್ರಾಮದಿಂದ ಬೈಕ್‌ನಲ್ಲಿ ಬರುತ್ತಾರೆ. ಬಳಿಕ ಬೈಕ್ ಒಂದು ಬದಿಗೆ ಇಟ್ಟು ಅಲ್ಲಿಂದ ಕಾಡಿನಲ್ಲಿ ನಡೆದು ಕುಗ್ರಾಮಕ್ಕೆ ತೆರಳುತ್ತಾರೆ.

ಸವಾಲಿನ ಮಧ್ಯ ಜೀವನ್ ನಿತ್ಯ ಸಂಚಾರ ಹೇಗಿರುತ್ತೆ ಗೊತ್ತಾ?

ಮಾಧ್ಯಮ ಪ್ರತಿನಿಧಿಯೊಬ್ಬರು ಇವರೊಂದಿಗೆ ತೆರಳಿ ಇವರ ನಿತ್ಯದ ಕಾಯಕವನ್ನು ಕಣ್ಣಾರೆ ಕಂಡಿದ್ದಾರೆ. ಭಾರೀ ಮಳೆ ಹಿನ್ನೆಲೆ ಎರಡು ರೇನ್ ಕೋರ್ಟ್ ಹಾಕಿಕೊಂಡು, ಬೈಕ್ ಬದಿಗೆ ಹಚ್ಚಿ ಹೆಲ್ಮೆಟ್ ಹಾಕಿಕೊಂಡೆ ಜೀವನ್ ಅವರು ಕಾಡಿನೊಳಕ್ಕೆ ನಡೆದು ಹೋಗುತ್ತಾರೆ. 3 ಕಿ.ಮೀ ಕಡಿದಾದ ಇಳಿಜಾರಿನಲ್ಲಿ ನಡೆಯಬೇಕು. ಜಾರುವ ಹಾದಿಯಲ್ಲಿ ಎಚ್ಚರಿಕೆ ಹೆಜ್ಜೆ ಇಟ್ಟು ಮುನ್ನಡೆಯುತ್ತಾರೆ. ಜಾರಿ ಬಿದ್ದರು ಹೆಲ್ಮೆಟ್ ರಕ್ಷಿಸುತ್ತದೆ ಎಂದು ಅವರು ಹೇಳುತ್ತಾರೆ. ಕಾಡಿನಲ್ಲಿ ಆಗಾಗ ಕಾಡು ನಾಯಿ, ಇತರ ಪ್ರಾಣಿಗಳ ಸಪ್ಪಳ ಆಗುತ್ತಲೇ ಇರುತ್ತದೆ. ಅವುಗಳಿಂದ ಆದಷ್ಟು ಅಂತರ ಕಾಯ್ದುಕೊಂಡು ಮುನ್ನಡೆಯುತ್ತೇನೆ. ಈ ಹಿಂದೊಮ್ಮೆ ಕಾಡೆಮ್ಮೆಗಳ (ಗೌರ್‌) ಹಿಂಡು ಹಾದಿಯಲ್ಲಿ ನಿಂತ ಪರಿಣಾಮ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ತಾಳ್ಮೆಯಿಂದ ಕಾದು ಶಾಲೆಗೆ ಹೋಗಿದ್ದೇನೆ ಎಂದು ಅವರು ನೆನಪಿಸಿಕೊಂಡರು. ಅಲ್ಲದೇ ಶಾಲೆಯ ಹಿಂದೆ 200 ಮೀ ಹಿಂದೆ ಚಿರತೆ ಒಡಾಡಿದ್ದು ಕ್ಯಾಮೆರಾದಲ್ಲಿ ಸೆರೆಯಾಗಿತ್ತು ಎಂದು ಜೀವನ್ ತಿಳಿಸಿದ್ದಾರೆ.

ನಾನು ಶಾಲೆಗೆ ಸಮೀಪಿಸುತ್ತಿದ್ದಂತೆ ಜೋರು ಧ್ವನಿಯಲ್ಲಿ ಮಕ್ಕಳನ್ನು ಕರೆಯುತ್ತೇನೆ. ವಿದ್ಯಾರ್ಥಿಗಳು ಐದು ನಿಮಿಷಗಳಲ್ಲಿ ಬಂದು ಕೂರುತ್ತಾರೆ. ವರದಿಗಾರರ ಮುಂದೆ ಆವತ್ತು ಕೂಗುತ್ತಿದ್ದಂತೆ ಸ್ವರಾ ದಾಗ್ಡು ಬೊಡಕೆ ಮತ್ತು ಅವಳ ಸಹೋದರಿ ರೇಷ್ಮಾ ಸಹೋದರಿಯರು ಬರಿಗಾಲಿನಲ್ಲಿ ಶಾಲೆ ಒಳಗೆ ಬಂದರು. ರಾಷ್ಟ್ರಗೀತೆ ಹಾಡಿದರು. ಎಂಟು ವರ್ಷದ ಸ್ವರಾಳ ಗಣಿತ ಪಾಠ ಆರಂಭಿಸಿದಳು. ಮುಂದಿನ ವರ್ಷ ರೇಷ್ಮಾ ಒಂದನೇ ತರಗತಿ ಪ್ರವೇಶ ಪಡೆಯುತ್ತಾಳೆ ಎಂದು ಜೀವನ್ ಅವರು ವಿದ್ಯಾರ್ಥಿಗಳನ್ನು ಪರಿಚಯಿಸಿದರು.

ಕುಗ್ರಾಮದ ಶಾಲೆಯಲ್ಲಿ 2001 ರಿಂದ ಐದು ವಿದ್ಯಾರ್ಥಿಗಳಿಗಿಂತ ಹೆಚ್ಚು ವಿದ್ಯಾರ್ಥಿಗಳ ಹಾಜರಾತಿ ಇಲ್ಲ. ಮೂರು ಮನೆಗಳಿರುವ ಪುಟ್ಟ ಹಳ್ಳಿಯಲ್ಲಿ ಒಟ್ಟು ಒಂಬತ್ತು ಮಂದಿ ಇದ್ದಾರೆ. ಕೃಷಿ, ಜಾನುವಾರು ಸಾಕಣೆಯೇ ಇವರ ಜೀವನಾಧಾರವಾಗಿದೆ. ಒಟ್ಟಾರೆಯಾಗಿ ಇಬ್ಬರು ಮಕ್ಕಳಿಗಾಗಿ ಶಿಕ್ಷಕರು ನಿತ್ಯ ಜೀವ ಪಣಕ್ಕಿಟ್ಟು ಪಾಠ ಬೋಧನೆ ಮಾಡುವ ಅವರ ಗುಣ, ನಡೆಗೆ ಸಾರ್ವಜನಿಕ ಮೆಚ್ಚುಗೆಗೆ ಪಾತ್ರವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+