ಆಸಿಡ್ ಸುರಿದು ನಾಯಿಯ ಕಣ್ಣು ಸುಟ್ಟ ಕಳ್ಳಮುದುಕ

kochi-thief-throws-acid-at-neighbours-pomeranian-dog-ricky-arrestted
ಕೊಚ್ಚಿ, ಮಾರ್ಚ್ 12: ಇದು ನಿಜಕ್ಕೂ ಕ್ರೌರ್ಯದ ಪರಮಾವಧಿ. ಸಾಮಾನ್ಯವಾಗಿ ಪ್ರೇಮ ವೈಫಲ್ಯ ಅಥವಾ ಕೌಟುಂಬಿಕ ಕಲಹಗಳನ್ನು ನೆಪವಾಗಿಟ್ಟುಕೊಂಡು ದುರ್ಜನರು ದ್ವೇಷ ಸಾಧನೆಗೆಂದು ಆಸಿಡ್ ಎರಚುವುದನ್ನು ಕಂಡುಕೇಳಿದ್ದೇವೆ.

ಆದರೆ ನಿನ್ನೆ ಮಂಗಳವಾರ ಬೆಳಗ್ಗೆ ನಗರದ ವ್ಯಟ್ಟಿಲ ಪ್ಯಾರಡೈಸ್ ರಸ್ತೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಮುದುಕನೊಬ್ಬ ತನ್ನ ನೆರೆಮನೆಯ ನಾಯಿಯ ಮೇಲೆ ಆಸಿಡ್ ಎರಚಿದ್ದಾನೆ. ಈ ಘಾಟಿ ಮುದುಕ ಸುತ್ತಮುತ್ತಲ ಮನೆಗಳಲ್ಲಿ ಯಾರೂ ಇಲ್ಲದ ವೇಳೆ ಕಿಟಕಿ ಬಾಗಿಲುಗಳನ್ನು ಮುರಿದು ಕಳವು ಮಾಡುವುದನ್ನು ಕಾಯಕವಾಗಿಸಿಕೊಂಡಿದ್ದ.

ಇಂತಿಪ್ಪ ಮುದುಕನಿಗೆ ನೆರೆಮನೆಯವರು ಸಾಕಿದ್ದ 2 ವರ್ಷದ ಮಿಶ್ರ ತಳಿ (ಪೊಮೆರೇನಿಯನ್ ಹೆಸರು ರಿಕಿ) ನಾಯಿ ಕಂಟಕವಾಗಿತ್ತು. ಇವನ ಈ ಕಳ್ಳ ಕೆಲಸಗಳಿಗೆ ಅದು ಅಡ್ಡಿಪಡಿಸುತ್ತಿತ್ತು. ಮುದುಕ ಯಾವುದಾದರೂ ಮನೆಯ ಕಳವಿಗೆ ಹೋದರೆ ಈ ನಾಯಿ ಒಂದೇ ಸಮನೆ ಬೊಗಳುತ್ತಿತ್ತು. ಇದರಿಂದ ಮನೆಯವರು ಎಚ್ಚರಗೊಳ್ಳುತ್ತಿದ್ದರು. ಹಾಗಾಗಿ ಈ ನಾಯಿ ಇವನ ವೃತ್ತಿಗೆ ಅಡ್ಡಿಯುಂಟುಮಾಡುತ್ತಿತ್ತು.

ನಾಯಿಯ ಈ ವರ್ತನೆಯಿಂದ ಕೋಪಗೊಂಡ ಆ ಕಳ್ಳ ಮಂಗಳವಾರ ಬೆಳಗಿನ ಜಾವ ಮಲಗಿದ್ದ ನಾಯಿಯ ಮೇಲೆ ಆಸಿಡ್ ಸುರಿದಿದ್ದಾನೆ. ಇದರಿಂದ ನಾಯಿಯ ಎರಡೂ ಕಣ್ಣುಗಳು ಹೋಗಿದ್ದು, ದೇಹದ ಬಹುಭಾಗ ಸುಟ್ಟುಹೋಗಿದೆ. ನಾಯಿಯ ಆಕ್ರಂದನದಿಂದ ಎಚ್ಚರಗೊಂಡ ಮನೆಯವರು ಹೊರಗೆ ಬಂದು ನೋಡಿದಾಗ ನಾಯಿಯ ದೇಹ ಸುಟ್ಟಿರುವುದು ಕಂಡುಬಂದಿದೆ.

ತಕ್ಷಣ ನಾಯಿಯನ್ನು ಪಾನಂಪಿಳ್ಳೈಯ ನಗರದಲ್ಲಿರುವ ಪಶುಚಿಕಿತ್ಸಾಲಯಕ್ಕೆ ಕರೆದೊಯ್ದು, ಟ್ರೀಟ್ ಮೆಂಟ್ ಕೊಡಿಸಿದ್ದಾರೆ. ಈ ಮಧ್ಯೆ ಕುಕೃತ್ಯವೆಸಗಿದ ಮುದುಕನನ್ನು ಪತ್ತೆ ಹಚ್ಚಿ ಪೊಲೀಸರಿಗೆ ದೂರು ನೀಡಿದ್ದಾರೆ. 67ವರ್ಷದ ಈ ಖದೀಮನನ್ನು ಬಂಧಿಸಿ, ಠಾಣೆಗೆ ಕರೆದೊಯ್ದಿದ್ದಾರೆ (ಪಿಟಿಐ).

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+