ನವಜಾತಶಿಶು ನೋಡಿ ಸಂತಸಪಟ್ಟ ನೌಕಾಪಡೆ ಅಧಿಕಾರಿಗಳು
ಬೆಂಗಳೂರು, ಆಗಸ್ಟ್ 21: 25 ವರ್ಷ ವಯಸ್ಸಿನ ಗರ್ಭಿಣಿ ಸಜಿತಾರನ್ನು ರಕ್ಷಿಸಿದ್ದ ನೌಕಾಪಡೆ ಅಧಿಕಾರಿಗಳು ಇಂದು ಬಿಡುವು ಮಾಡಿಕೊಂಡು, ಸಜಿತಾ ಹಾಗೂ ಅವರ ನವಜಾತ ಶಿಶು ನೋಡಲು ಬಂದಿದ್ದರು. ರಕ್ಷಕರನ್ನು ಕಂಡು ಸಜಿತಾ ಅವರಲ್ಲಿ ಮೂಡಿದ ಧನ್ಯತಾ ಭಾವ, ತಾಯಿ, ಮಗು ರಕ್ಷಿಸಿದ ಸಂತಸದಲ್ಲಿದ್ದ ನೌಕಾಪಡೆ ಸಿಬ್ಬಂದಿ, ಅಲ್ಲಿ ಸಂತಸದ ನಗುವೇ ತುಂಬಿತ್ತು.
ಆಗಸ್ಟ್ 17ರಂದು ತುಂಬು ಗರ್ಭಿಣಿ ಜೀವ ಉಳಿಸಿದ ಭಾರತೀಯ ಜಲ ಸೇನೆ ಅಧಿಕಾರಿಗಳಿಗೆ ಹಸಿ ಬಾಣಂತಿ ಸಜಿತಾ ಅವರ ಕುಟುಂಬ ವಿಶಿಷ್ಟ ರೀತಿಯಲ್ಲಿ 'ಥ್ಯಾಂಕ್' ಹೇಳಿತ್ತು.
ಅಂದು ತ್ವರಿತಗತಿಯ ಈ ಕಾರ್ಯಾಚಾರಣೆಯಿಂದಾಗಿ ಸಜಿತಾ ಅವರು ಅಗತ್ಯ ವೈದ್ಯಕೀಯ ನೆರವು ಪಡೆದು ಗಂಡು ಮಗುವಿಗೆ ಜನ್ಮ ನೀಡುವಂತಾಯಿತು.

ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಸಜಿತಾ ಅವರನ್ನು ರಕ್ಷಿಸಿದ ನೌಕಾಪಡೆ ತಂಡಕ್ಕೆ ಪೈಲಟ್ ಕಮಾಂಡರ್ ವಿಜಯ್ ಅವರಿಗೆ ಸಜಿತಾ ಅವರ ಕುಟುಂಬವು ತಮ್ಮ ನಿವಾಸದ ಮೇಲೆ ಬಿಳಿ ಬಣ್ಣದಲ್ಲಿ Thanks ಎಂದು ಬರೆದಿತ್ತು.
Kochi: Navy officials meet Sajita Jabeel,the pregnant lady who was airlifted in Aluva&later gave birth to baby.Commander Vijay Verma says,"It was a challenging rescue. The end-result,a baby being born,it's a joy like nothing else. A sense of personal satisfaction."#KeralaFloods pic.twitter.com/2PH3A9E7fh
— ANI (@ANI) August 21, 2018
ಇದು ಆ ಭಾಗದಲ್ಲಿ ಸಂಚರಿಸುವ ಯಾವುದೇ ಹೆಲಿಕಾಪ್ಟರ್ ಗೂ ಗೋಚರಿಸುವಂತಿತ್ತು. ಆದರೆ, ನೌಕಾಪಡೆ ಅಧಿಕಾರಿಗಳು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರಿಂದ ತಾಯಿ-ಮಗು ನೋಡಲು ಬರುವ ನಿರೀಕ್ಷೆಯಿರಲಿಲ್ಲ.
ಆದರೆ, ಕೊಚ್ಚಿಯ ಐಎನ್ ಎಚ್ಎಸ್ ಸಂಜೀವಿನಿ ಆಸ್ಪತ್ರೆಯಲ್ಲಿರುವ ಸಜಿತಾ ಹಾಗೂ ಮಗುವನ್ನು ನೋಡಲು ಪೈಲಟ್ ಕಮಾಂಡರ್ ವಿಜಯ್ ವರ್ಮ ಹಾಗೂ ತಂಡದವರು ಆಗಮಿಸಿ, ಕುಶಲೋಪರಿ ವಿಚಾರಿಸಿದರು.
ನಂತರ ಮಾತನಾಡಿದ ವಿಜಯ್ ವರ್ಮ, ಇದೊಂದು ಸವಾಲಿನ ರಕ್ಷಣಾ ಕಾರ್ಯಾಚರಣೆಯಾಗಿತ್ತು. ಕೊನೆಯಲ್ಲಿ ಸಕಲಕ್ಕೆ ಅಗತ್ಯ ವೈದ್ಯಕೀಯ ನೆರವು ಸಿಕ್ಕಿ, ಮಗು ಜನನವಾಯಿತು. ಇದಕ್ಕಿಂತ ಹೆಚ್ಚಿನ ಸಂತೋಷ ನಮ್ಮ ತಂಡಕ್ಕೆ ಬೇರೊಂದಿಲ್ಲ. ವೈಯಕ್ತಿಕವಾಗಿಯೂ ನನಗೆ ಜೀವ ರಕ್ಷಣೆ ಸಂತಸ ತಂದಿದೆ ಎಂದರು,












Click it and Unblock the Notifications