ಪ್ಯಾನ್ ಕಾರ್ಡ್ ಸರಿಯಾಗಿದೆಯೇ ಚೆಕ್ ಮಾಡಲು ಹೀಗೆ ಮಾಡಿ

Subscribe to Oneindia Kannada

ನವದೆಹಲಿ, ಆಗಸ್ಟ್ 8: ಜುಲೈ 27ರ ವರೆಗೆ 11.44 ಲಕ್ಷ ನಕಲಿ ಪ್ಯಾನ್ ಕಾರ್ಡ್ ಗಳನ್ನು ಸರಕಾರ ಪತ್ತೆ ಹಚ್ಚಿದ್ದು ಅವುಗಳನ್ನು ನಿಷ್ಕ್ರಿಯ ಮಾಡಿದೆ. ನಿಯಮದ ಪ್ರಕಾರ ಒಬ್ಬರು ವ್ಯಕ್ತಿ ಒಂದೇ ಪ್ಯಾನ್ ಸಂಖ್ಯೆ ಹೊಂದಲು ಅವಕಾಶ ಇರುವುದರಿಂದ ಸರಕಾರ ಈ ಕ್ರಮ ಕೈಗೊಂಡಿದೆ.

11.44 ಲಕ್ಷ ಪ್ಯಾನ್ ಕಾರ್ಡ್ ರದ್ದು: ಕೇಂದ್ರ ಸರ್ಕಾರ ಘೋಷಣೆ

ನಿಮ್ಮ ಪ್ಯಾನ್ ಕಾರ್ಡ್ ರದ್ದಾಗಿಲ್ಲ, ಸಕ್ರಿಯವಾಗಿದೆ ಎಂಬುದನ್ನು ಪರಿಶೀಲನೆ ಮಾಡಬಹುದು. ಆದಾಯ ತೆರಿಗೆ ಇಲಾಖೆಯ ವೆಬ್‍ಸೈಟ್‍ಗೆ ಭೇಟಿ ನೀಡಿ ನಿಮ್ಮ ಪ್ಯಾನ್ ಸಕ್ರಿಯವಾಗಿದೆ ಎಂಬುದನ್ನು ಪರಿಶೀಲಿಸಲು ಹೀಗೆ ಮಾಡಿ..

Know your PAN: How to check your PAN’s activation

ಮೊದಲಿಗೆ ಈ ಲಿಂಕ್ ಕ್ಲಿಕ್ ಮಾಡಿ.

ಅಲ್ಲಿ ಕೇಳಿದ ಮಾಹಿತಿಗಳನ್ನು ತುಂಬಿಸಿ. ನಂತರ 'Submit' ಬಟನ್ ಒತ್ತಿ. ಆಗ ನಿಮ್ಮ ಮೊಬೈಲ್ ನಂಬರ್ ಗೆ OTP (ಪಾಸ್ವರ್ಡ್) ಬರುತ್ತದೆ.

ನಿಮ್ಮ ಪ್ಯಾನ್, ಆಧಾರ್ ಲಿಂಕ್ ಆಗಿದೆಯೇ? ಪರೀಕ್ಷಿಸಲು ಹೀಗೆ ಮಾಡಿ

ಈ ಪಾಸ್ವರ್ಡ್ ಹಾಕಿ 'Validate' ಬಟನ್ ಒತ್ತಿದರೆ ನಿಮ್ಮ ಪ್ಯಾನ್ ಕಾರ್ಡ್ ನ ಸಕ್ರಿಯತೆ ತಿಳಿಯುತ್ತದೆ. ಒಂದೊಮ್ಮೆ ನಿಮ್ಮ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ನೋಂದಣಿಯಾಗಿದ್ದರೆ, ಅಲ್ಲಿ ಬೇರೆ ಸಂದೇಶ ಕಾಣಿಸಿಕೊಳ್ಳುತ್ತದೆ ಮತ್ತು ಹೆಚ್ಚಿನ ಮಾಹಿತಿ ನೀಡುವಂತೆ ಪ್ರಶ್ನೆ ಕೇಳಲಾಗುತ್ತದೆ.

There is no last day for link Aadhaar to PAN | Oneindia Kannada

ಪುನಃ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿದ ನಂತರ ಪ್ಯಾನ್‍ಕಾರ್ಡ್ ಸಕ್ರಿವಾಗಿರುವ ಬಗ್ಗೆ ಸಂದೇಶ ಕಾಣಿಸುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Know your PAN: As on July 27, 11,44,211 fake PANs have been identified and deleted or de-activated in cases where multiple PANs were found allotted to one person. Here is the way to check your PAN's activation.
Please Wait while comments are loading...