ಮುಂಬೈ ಕೊಳೆಗೇರಿಯಿಂದ 'ಫಾರೆಸ್ಟ್ ಎಸೆನ್ಷಿಯಲ್ಸ್‌ನ' ಮಾಡೆಲ್ ಪಟ್ಟಕ್ಕೆ ಏರಿದ 14 ವರ್ಷದ ಮಲೀಶಾ ಖಾರ್ವಾ
ನವದೆಹಲಿ, ಮೇ. 22: ಮುಂಬೈನ ಧಾರಾವಿ ಕೊಳೆಗೇರಿಯಿಂದ ಬಂದಿರುವ 14 ವರ್ಷದ ಮಲೀಶಾ ಖಾರ್ವಾ ಎಂಬ ಬಾಲಕಿ ಐಷಾರಾಮಿ ಆಯುರ್ವೇದ ಸೌಂದರ್ಯ ಬ್ರ್ಯಾಂಡ್ ಫಾರೆಸ್ಟ್ ಎಸೆನ್ಷಿಯಲ್ಸ್‌ನ ಹೊಸ ಅಭಿಯಾನದ 'ದಿ ಯುವತಿ ಕಲೆಕ್ಷನ್' ನ ಮಾಡೆಲ್ ಆಗಿ ಆಯ್ಕೆಯಾಗಿದ್ದಾರೆ. ಈ ಬಾಲಕಿಗೆ ಈಗಾಗಲೇ ಇನ್‌ಸ್ಟಾಗ್ರಾಮ್ ನಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ.
ಹಾಲಿವುಡ್ ನಟ ರಾಬರ್ಟ್ ಹಾಫ್‌ಮನ್ ಅವರು 2020 ರಲ್ಲಿ ತಮ್ಮ ಸ್ಟೆಪ್ ಅಪ್ 2 ಚಿತ್ರದ ಪಾತ್ರಕ್ಕೆ ಹುಡುಕುವಾಗ ಮುಂಬೈನಲ್ಲಿ ಮಲೀಶಾ ಖಾರ್ವಾ ಅವರನ್ನು ನೋಡಿದ್ದರು. ಬಳಿಕ ಆಕೆಗಾಗಿ 'ಗೋ ಫಂಡ್ ಮಿ' ಎಂಬ ಪೇಜ್ ಕ್ರಿಯೇಟ್ ಮಾಡಿದ್ದರು. ಇಂದು 14 ವರ್ಷದ ಮಲೀಶಾ ಖಾರ್ವಾ Instagram ನಲ್ಲಿ 225,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ.

ಮಲೀಶಾ ಖಾರ್ವಾ ಆಗಾಗ್ಗೆ ತಮ್ಮ ಪೋಸ್ಟ್‌ಗಳಿಗೆ ಪ್ರಿನ್ಸೆಸ್ ಫ್ರಂದ ಸ್ಲಂ ಎಂಬ ಹ್ಯಾಶ್‌ಟ್ಯಾಗ್ ಬಳಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ, ಅವರು ಅನೇಕ ಮಾಡೆಲಿಂಗ್ ಇವೆಂಟ್‌ಗಳಲ್ಲಿ ಪಾಲ್ಗೊಂಡಿದ್ದಾರೆ. ಜೊತೆಗೆ "ಲೈವ್ ಯುವರ್ ಫೇರಿಟೇಲ್" ಎಂಬ ಕಿರುಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗ, ಆಕೆಯನ್ನು ಫಾರೆಸ್ಟ್ ಎಸೆನ್ಷಿಯಲ್ಸ್‌ನ ಹೊಸ ಅಭಿಯಾನದ 'ಯುವತಿ ಕಲೆಕ್ಷನ್' ಮಾಡೆಲ್ ಆಗಿ ಆಯ್ಕೆ ಮಾಡಲಾಗಿದ್ದು, ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ಏಪ್ರಿಲ್‌ನಲ್ಲಿ, ಫಾರೆಸ್ಟ್ ಎಸೆನ್ಷಿಯಲ್ಸ್ ಬ್ರ್ಯಾಂಡ್ ತನ್ನ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವನ್ನು ಹಂಚಿಕೊಂಡಿದೆ. ವಿಡಿಯೋದಲ್ಲಿ ಅದು ಮಲೀಶಾ ತನ್ನ ಪ್ರಚಾರದ ಫೋಟೋಗಳನ್ನು ಹೊಂದಿರುವ ಅಂಗಡಿಗೆ ಪ್ರವೇಶಿಸುವುದನ್ನು ನೋಡಬಹುದು.
ಈ ವಿಡಿಯೋ ಶೀಘ್ರದಲ್ಲೇ ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ. 5 ಮಿಲಿಯನ್ ವೀಕ್ಷಣೆ ಮತ್ತು 406,000 ಕ್ಕೂ ಹೆಚ್ಚು ಲೈಕ್‌ಗಳನ್ನು ಸಂಗ್ರಹಿಸಿದೆ. ಇಂಟರ್ನೆಟ್ ಬಳಕೆದಾರರು ಮಲೀಶಾ ಅವರನ್ನು ಶ್ಲಾಘಿಸಿದ್ದಾರೆ.

ಇನ್ನು, ವೋಗ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ, ಫಾರೆಸ್ಟ್ ಎಸೆನ್ಷಿಯಲ್ಸ್‌ನ ಸಂಸ್ಥಾಪಕಿ ಮತ್ತು ಮುಖ್ಯ ವ್ಯವಸ್ಥಾಪಕ ನಿರ್ದೇಶಕಿ ಮೀರಾ ಕುಲಕರ್ಣಿ, "ನಮ್ಮ 'ಯುವತಿ ರಿಚುವಲ್ ಬಾಕ್ಸ್' ಮೂಲಕ, ನಾವು ಮಲೀಶಾ ಅವರ ಕನಸುಗಳನ್ನು ಬೆಂಬಲಿಸುವುದು ಮಾತ್ರವಲ್ಲದೆ ಯುವ ಮನಸ್ಸುಗಳನ್ನು ಸಶಕ್ತಗೊಳಿಸಲು ಪ್ರಾಜೆಕ್ಟ್ ಪಾಠಶಾಲಾಗೆ ಕೊಡುಗೆ ನೀಡುತ್ತಿದ್ದೇವೆ" ಎಂದು ಹೇಳಿದ್ದಾರೆ.












Click it and Unblock the Notifications