• search

ಹಕ್ಕು ಚ್ಯುತಿ ಎಂದರೇನು?, ಪ್ರಮುಖ ಅಂಶಗಳು

By Gururaj
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಬೆಂಗಳೂರು, ಜುಲೈ 25 : ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ರಫೆಲ್ ಯುದ್ಧ ವಿಮಾನ ಖರೀದಿ ವಿಚಾರದಲ್ಲಿ ಜಟಾಪಟಿ ನಡೆಯುತ್ತಿದೆ. ರಾಹುಲ್ ಗಾಂಧಿ ವಿರುದ್ಧ ಹಕ್ಕುಚ್ಯುತಿ ಮಂಡಿಸಲು ಬಿಜೆಪಿ ನಿರ್ಧರಿಸಿದೆ. ಪ್ರಧಾನಿ ಮೋದಿ ಮತ್ತು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಹಕ್ಕುಚ್ಯುತಿ ಮಂಡಿಸಲು ಕಾಂಗ್ರೆಸ್ ನಿರ್ಧರಿಸಿದೆ.

  ಹಕ್ಕುಚ್ಯುತಿ ಬಗ್ಗೆ ಕಳೆದ ವಾರದಿಂದ ಚರ್ಚೆ ನಡೆಯುತ್ತಿದೆ. ಹಾಗಾದರೆ ಹಕ್ಕುಚ್ಯುತಿ ಎಂದರೇನು? ಎಂಬ ಮಾಹಿತಿಯನ್ನು ನಾವು ನಿಮಗೆ ನೀಡುತ್ತಿದ್ದೇವೆ. ಜನರ ಸೇವೆಗಾಗಿ ಆಯ್ಕೆಯಾಗುವ ಜನಪ್ರತಿನಿಧಿಗಳಿಗೆ ವಿಶೇಷ ಸವಲತ್ತುಳನ್ನು ನೀಡಲಾಗುತ್ತದೆ. ಅವುಗಳಲ್ಲಿ ಹಕ್ಕುಚ್ಯುತಿ ನಿರ್ಣಯವೂ ಒಂದಾಗಿದೆ.

  ಮೋದಿ, ನಿರ್ಮಲಾ ಸೀತಾರಾಮನ್ ವಿರುದ್ಧ ಕಾಂಗ್ರೆಸ್‌ನಿಂದ ಹಕ್ಕುಚ್ಯುತಿ

  ತಮ್ಮ ಹಕ್ಕಿಗೆ ಚ್ಯುತಿ ತಂದಿದ್ದಾರೆ ಎಂದು ಯಾವುದೇ ಸಂಸದರು, ರಾಜ್ಯಸಭಾ ಸದಸ್ಯರು, ವಿಧಾನಸಭೆ ಮತ್ತು ಪರಿಷತ್ತಿನ ಸದಸ್ಯರು ಯಾರ ವಿರುದ್ಧ ಬೇಕಾದರೂ ಕ್ರಮ ಕೈಗೊಳ್ಳಬೇಕಾದ ಒಂದು ವಿಶೇಷ ಹಕ್ಕನ್ನು ಹಕ್ಕುಚ್ಯುತಿ ಎಂದು ಕರೆಯಬಹುದು.

  ರಾಹುಲ್ ಗಾಂಧಿ ವಿರುದ್ಧ ಬಿಜೆಪಿಯಿಂದ ಹಕ್ಕುಚ್ಯುತಿ ಮಂಡನೆ

  ಜನಪ್ರತಿನಿಧಿಗಳು ತಮ್ಮ ಕರ್ತವ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಲಿ ಎಂದು ಈ ಹಕ್ಕು ನೀಡಲಾಗಿದೆ. ಸಂಸದರು ಮತ್ತು ಶಾಸಕರು ಸಂವಿಧಾನ ನೀಡಿರು ಈ ಹಕ್ಕನ್ನು ವೈಯಕ್ತಿಕವಾಗಿ ಮತ್ತು ಸಾಮೂಹಿಕವಾಗಿಯೂ ಹೊಂದಿರುತ್ತಾರೆ...

  ಸಂವಿಧಾನದಲ್ಲಿ ಅವಕಾಶ ನೀಡಲಾಗಿದೆ

  ಸಂವಿಧಾನದಲ್ಲಿ ಅವಕಾಶ ನೀಡಲಾಗಿದೆ

  ಲೋಕಸಭೆಯ ರೂಲ್ ಬುಕ್ ಚಾಪ್ಟರ್ 20ರ ರೂಲ್ ನಂಬರ್ 222ರ ಪ್ರಕಾರ ಲೋಕಸಭಾ ಸದಸ್ಯರಿಗೆ, ರಾಜ್ಯಸಭೆಯ ರೂಲ್ ಬುಕ್ 16ರ 187ನೇ ನಿಯಮದ ಪ್ರಕಾರ ರಾಜ್ಯಸಭೆ ಸದಸ್ಯರಿಗೆ ಹಕ್ಕುಚ್ಯುತಿ ಮಂಡನೆ ಮಾಡಲು ಅವಕಾಶ ನೀಡಲಾಗಿದೆ.

  ಸಂಸದರು, ಶಾಸಕರ ಹಕ್ಕುಗಳನ್ನು ಮತ್ತು ಅವರಿಗೆ ಸಂವಿಧಾನ ನೀಡಿರುವ ರಕ್ಷಣಾ ವ್ಯವಸ್ಥೆಯನ್ನು ಯಾರಾದರೂ ಉಲ್ಲಂಘನೆ ಮಾಡಿದರೆ ಅಂತಹದ್ದನ್ನು ಹಕ್ಕುಚ್ಯುತಿ ಎಂದು ಹೇಳಲಾಗುತ್ತದೆ. ಇಂತಹ ಪ್ರಕರಣದಲ್ಲಿ ಸಂಸತ್ತು ಮತ್ತು ಶಾಸನ ಸಭೆಯ ಕಾನೂನಿನ ಪ್ರಕಾರ ಶಿಕ್ಷೆ ವಿಧಿಸಲೂ ಸಹ ಅವಕಾಶವಿದೆ.

  ಸಭಾ ನಾಯಕರ ಒಪ್ಪಿಗೆ ಬೇಕು

  ಸಭಾ ನಾಯಕರ ಒಪ್ಪಿಗೆ ಬೇಕು

  ಲೋಕಸಭೆ, ರಾಜ್ಯಸಭೆ, ವಿಧಾನಸಭೆ ಮತ್ತು ವಿಧಾನಪರಿಷತ್ತಿನಲ್ಲಿ ಹಕ್ಕುಚ್ಯುತಿ ಮಂಡನೆ ಮಾಡಲು ಸಭಾ ನಾಯಕರ ಒಪ್ಪಿಗೆ ಬೇಕು. ಹಕ್ಕುಚ್ಯುತಿ ಮಂಡಿಸುವ ಮೊದಲು ನೋಟಿಸ್ ನೀಡಬೇಕಾಗುತ್ತದೆ. ಈ ನೋಟಿಸ್‌ ಅನ್ನು ಸದನದಲ್ಲಿಯೇ ನೀಡಬೇಕು. ಮತ್ತು ಹಕ್ಕುಚ್ಯುತಿ ಮಂಡಿಸುವ ಸದಸ್ಯರು ಸಭಾ ನಾಯಕರಿಗೆ ಕಲಾಪದ ದಿನದ 10 ಗಂಟೆಯೊಳೆ ಮಾಹಿತಿ ನೀಡಬೇಕು.

  ಸಭಾ ನಾಯಕರು ಹಕ್ಕುಚ್ಯುತಿ ಮಂಡನೆಯ ಬಗ್ಗೆ ಮೊದಲ ನಿರ್ಧಾರವನ್ನು ಕೈಗೊಳ್ಳಲಿದ್ದಾರೆ. ಇದನ್ನು ಮಂಡಿಸಬಹುದೇ ಅಥವ ಹೆಚ್ಚಿನ ತನಿಖೆಗಾಗಿ ಹಕ್ಕು ಬಾಧ್ಯತಾ ಸಮಿತಿಗೆ ಒಪ್ಪಿಸಬೇಕೆ? ಎಂದು ಸಭಾ ನಾಯಕರು ತೀರ್ಮಾನ ಕೈಗೊಳ್ಳುತ್ತಾರೆ.

  ವಜಾಗೊಳ್ಳುವ ಹಕ್ಕುಚ್ಯುತಿಗಳೇ ಹೆಚ್ಚು

  ವಜಾಗೊಳ್ಳುವ ಹಕ್ಕುಚ್ಯುತಿಗಳೇ ಹೆಚ್ಚು

  ಸದನದಲ್ಲಿ ಮಂಡನೆಯಾಗುವ ಹಲವು ಹಕ್ಕುಚ್ಯುತಿಗಳು ಸಭಾ ನಾಯಕರ ಸಮ್ಮುಖದಲ್ಲಿಯೇ ವಜಾಗೊಳ್ಳುತ್ತವೆ. ಹಕ್ಕು ಬಾಧ್ಯತಾ ಸಮಿತಿಗೆ ಒಪ್ಪಿಸುವ ಪ್ರಕರಣಗಳು ಅಪರೂಪ.

  ಸಭಾ ನಾಯಕರು ಸದನದಲ್ಲಿರುವ ಪಕ್ಷಗಳ ಬಲಾಬಲ ನೋಡಿಕೊಂಡು 15 ಸದಸ್ಯರ ಹಕ್ಕು ಬಾಧ್ಯತಾ ಸಮಿತಿಯನ್ನು ರಚನೆ ಮಾಡುತ್ತಾರೆ. ಸಮಿತಿ ವಿಚಾರಣೆ ನಡೆಸಿ ವರದಿ ನೀಡುತ್ತದೆ. ಈ ವರದಿಯನ್ನು ಸದನದಲ್ಲಿ ಮಂಡಿಸಲಾಗುತ್ತದೆ. ಚರ್ಚೆ ನಡೆಸ ಬಳಿಕ ಸಭಾ ನಾಯಕರು ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳುತ್ತಾರೆ.

  ಶಿಕ್ಷೆ ನೀಡುವ ಅಧಿಕಾರವಿದೆ

  ಶಿಕ್ಷೆ ನೀಡುವ ಅಧಿಕಾರವಿದೆ

  ಜನರಿಂದ ಆಯ್ಕೆಯಾದ ಪ್ರತಿನಿಧಿಗಳು ಸದನಕ್ಕೆ ಯಾವುದೇ ಸದಸ್ಯರು ತಪ್ಪು ಮಾಹಿತಿ ನೀಡಿದರೆ, ಗೌರವ ಮತ್ತು ಅಧಿಕಾರದ ಬಗ್ಗೆ ತಿರಸ್ಕಾರ ತೋರಿಸಿದರೆ, ನಿಂದನೆಗಳನ್ನು ಮಾಡಿದರೆ ಹಕ್ಕುಚ್ಯುತಿ ಮಂಡನೆ ಮಾಡಬಹುದಾಗಿದೆ.

  ಹಕ್ಕುಚ್ಯುತಿ ನಿರ್ಣಯವನ್ನು ಯಾವುದೇ ವ್ಯಕ್ತಿ, ಸದನದ ಇತರೆ ಸದಸ್ಯರು, ಹೊರಗಿನ ವ್ಯಕ್ತಿಗಳ ವಿರುದ್ಧವೂ ಮಂಡಿಸಬಹುದಾಗಿದೆ. ವರದಿಯಲ್ಲಿ ತಪ್ಪು ಮಾಡಿರುವುದು ಸಾಬೀತಾದರೆ ಜೈಲು ಶಿಕ್ಷೆ ವಿಧಿಸಲು ಸಹ ಅವಕಾಶವನ್ನು ನೀಡಲಾಗಿದೆ.

  ಸದನದ ಒಳಗಿನ ಮಾತುಗಳು

  ಸದನದ ಒಳಗಿನ ಮಾತುಗಳು

  ಲೋಕಸಭೆ, ರಾಜ್ಯಸಭೆ, ವಿಧಾನಸಭೆ ಮತ್ತು ವಿಧಾನಪರಿಷತ್ತಿನಲ್ಲಿ ಯಾವುದೇ ಸದಸ್ಯರು ತಪ್ಪು ಮಾಹಿತಿ ನೀಡಿದರೆ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡುವಂತಿಲ್ಲ. ಆಗ ಬೇರೆ ಪಕ್ಷದವರು ಹಕ್ಕುಚ್ಯುತಿ ಮಂಡನೆ ಮಾಡಬಹುದಾಗಿದೆ.

  ಜನಪ್ರತಿನಿಧಿಗಳ ಹಕ್ಕನ್ನು ಉಲ್ಲಂಘಿಸಿದ ಅಥವ ಅವರನ್ನು ನಿಂದಿಸಿದ ಹೊರಗಿನ ವ್ಯಕ್ತಿಯನ್ನು ಸದಸಕ್ಕೆ ಕರೆಸಿ ಛೀಮಾರಿ ಹಾಕುವ, ಗಂಭೀರ ಪ್ರಕರಣಗಳು ಆದರೆ, ಜೈಲು ಶಿಕ್ಷೆ ವಿಧಿಸುವ ಅಧಿಕಾರವನ್ನು ಹಕ್ಕುಚ್ಯುತಿಯಲ್ಲಿ ನೀಡಲಾಗಿದೆ. ಸದನದ ಸದಸ್ಯರು ತಪ್ಪು ಮಾಡಿದರೆ ಬಹಿಷ್ಕಾರ ಹಾಕಲಾಗುತ್ತದೆ.

  ನ್ಯಾಯಾಲಯ ಪರಿಶೀಲನೆ ನಡೆಸಬಹುದು

  ನ್ಯಾಯಾಲಯ ಪರಿಶೀಲನೆ ನಡೆಸಬಹುದು

  ಸದನ ಅಥವ ಅದರ ಸದಸ್ಯನ ಹಕ್ಕುಗಳಿಗೆ ಚ್ಯುತಿ ಉಂಟಾಗಿದೆಯೇ ಎಂಬುದನ್ನು ನಿರ್ಧರಿಸುವ ಪರಮಾಧಿಕಾರ ಸಂಸತ್ತು ಅಥವ ಶಾಸನ ಸಭೆಗೆ ಮಾತ್ರ ಇರುತ್ತದೆ. ಈ ಪರಮಾಧಿಕಾರವನ್ನು ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡುವಂತಿಲ್ಲ.

  ಆದರೆ, ಸದನ ಕೈಗೊಂಡ ನಿರ್ಧಾರ ನ್ಯಾಯಸಮ್ಮತವಾಗಿದೆಯೇ?, ಇಲ್ಲವೇ? ಎನ್ನುವುದನ್ನು ನ್ಯಾಯಾಲಯ ಪರೀಶಿಲನೆ ನಡೆಸಹುದು ಎಂದು ಕೋರ್ಟ್‌ ಹೇಳಿದೆ. ಆದರೆ, ಯಾವುದೇ ವ್ಯಕ್ತಿಯ ಬಂಧನಕ್ಕೆ ಸದನ ಸೂಚನೆ ನೀಡಿದ್ದರೆ, ಅದರ ಸಿಂಧುತ್ವವನ್ನು ಕೋರ್ಟ್‌ನಲ್ಲಿ ಪ್ರಶ್ನಿಸಬಹುದಾಗಿದೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Debate going on about privilege motion in the nation after BJP and Congress fighting about Rafale fighter jet deal issue in the Parliament. What is the privilege motion? Here is a details.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more