ಭಾರತೀಯ ರೈಲ್ವೆಯ ಕ್ಲೋನ್ ರೈಲು ಯೋಜನೆ ಬಗ್ಗೆ ತಿಳಿಯಿರಿ
ನವದೆಹಲಿ, ಸೆಪ್ಟೆಂಬರ್ 08: ಭಾರತೀಯ ರೈಲ್ವೆ ಸೆಪ್ಟೆಂಬರ್ 12ರಿಂದ 80 ವಿಶೇಷ ರೈಲುಗಳನ್ನು ಓಡಿಸುವುದಾಗಿ ಘೋಷಣೆ ಮಾಡಿದೆ. ಇದರ ಜೊತೆಗೆ 'ಕ್ಲೋನ್ ರೈಲು' ಯೋಜನೆಯನ್ನು ಘೋಷಣೆ ಮಾಡಿದೆ.
ಕೋವಿಡ್ ಲಾಕ್ ಡೌನ್ ಬಳಿಕ ಭಾರತೀಯ ರೈಲ್ವೆ 230 ವಿಶೇಷ ರೈಲುಗಳನ್ನು ಓಡಿಸುತ್ತಿದೆ. ಶನಿವಾರದಿಂದ ಈಗಿರುವ ರೈಲುಗಳ ಜೊತೆ 80 ಹೆಚ್ಚುವರಿ ರೈಲುಗಳನ್ನು ಓಡಿಸುವುದಾಗಿ ಘೋಷಿಸಿದೆ.
ರೈಲ್ವೆ ಬೋರ್ಡ್ ಮುಖ್ಯಸ್ಥ ವಿ. ಕೆ. ಯಾದವ್ ಮತ್ತೊಂದು ಘೋಷಣೆ ಮಾಡಿದ್ದಾರೆ. "ಯಾವುದಾದರೂ ರೈಲಿಗೆ ಭಾರಿ ಬೇಡಿಕೆ ಇದ್ದರೆ, ಹೆಚ್ಚು ಪ್ರಯಾಣಿಕರು ವೈಟಿಂಗ್ ಲಿಸ್ಟ್‌ನಲ್ಲಿ ಇದ್ದರೆ ಆ ಮಾರ್ಗದಲ್ಲಿ ಕ್ಲೋನ್ ರೈಲು ಓಡಿಸಲಾಗುತ್ತದೆ" ಎಂದು ಹೇಳಿದ್ದಾರೆ.

ಪ್ರಸ್ತುತ ಸಂಚಾರ ನಡೆಸುತ್ತಿರುವ ಎಲ್ಲಾ ರೈಲುಗಳನ್ನು ಇಲಾಖೆ ಪರಿಶೀಲನೆ ನಡೆಸುತ್ತಿದೆ. ಯಾವ ರೈಲಿಗೆ ಹೆಚ್ಚು ಬೇಡಿಕೆ ಇದೆ ಎಂದು ಮಾಹಿತಿಯನ್ನು ಸಂಗ್ರಹ ಮಾಡುತ್ತಿದೆ.
ಕ್ಲೋನ್ ರೈಲಿನ ವಿಶೇಷತೆಗಳು
* ಈಗಿರುವ ರೈಲಿಗೆ ಪರ್ಯಾಯವಾಗಿ ಅದೇ ಮಾರ್ಗದಲ್ಲಿ ಸಂಚಾರ
* ಭಾರಿ ಬೇಡಿಕೆ ಇದ್ದು, ಹೆಚ್ಚು ಪ್ರಯಾಣಿಕರು ವೈಟಿಂಗ್ ಲಿಸ್ಟ್‌ನಲ್ಲಿ ಇದ್ದರೆ ಮಾತ್ರ ಸಂಚಾರ
* ವೈಟಿಂಗ್ ಲಿಸ್ಟ್‌ನಲ್ಲಿರುವ ಪ್ರಯಾಣಿಕರಿಗೆ ಮಾತ್ರ ಸಂಚಾರಕ್ಕೆ ಅವಕಾಶ
* ನಾಲ್ಕು ಗಂಟೆ ಮೊದಲು ವೈಟಿಂಗ್ ಲಿಸ್ಟ್ ಪ್ರಯಾಣಿಕರಿಗೆ ಮಾಹಿತಿ
* 15 ದಿನಗಳಲ್ಲಿ ಈ ಕುರಿತು ಆದೇಶ ಪ್ರಕಟ












Click it and Unblock the Notifications