ಗುದ್ದೋಡು ತೀರ್ಪು: ನ್ಯಾಯಾಲಯದ ಒಳಗೆ ಏನಾಯಿತು?
ನವದೆಹಲಿ, ಮೇ. 6: ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ನ್ಯಾಯಾಲಯ 5 ವರ್ಷಗಳ ಶಿಕ್ಷೆ ವಿಧಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ. ಇದೀಗ ಬಾಂಬೆ ಹೈ ಕೋರ್ಟ್ ಎರಡು ದಿನಗಳ ಮಧ್ಯಂತರ ಜಾಮೀನು ನೀಡಿದೆ.
ತೀರ್ಪು ನೀಡುವ ವೇಳೆ ನಡೆದ ಘಟನಾವಳಿಗಳೇನು? ಸಲ್ಮಾನ್ ಅವರ ಮೇಲೆ ದಾಖಲಾಗಿದ್ದ ಸೆಕ್ಷನ್ ಗಳು ಯಾವವು? ಒಟ್ಟು ಎಷ್ಟು ವರ್ಷ ಶಿಕ್ಷೆ ನೀಡಬಹುದಿತ್ತು? ಎಂಬುದೆಲ್ಲದಕ್ಕೆ ಇಲ್ಲಿದೆ ಉತ್ತರ.[ಸಲ್ಮಾನ್ ಗೆ ರಕ್ಷೆ ನೀಡಿದ 'ಬೀಯಿಂಗ್ ಹ್ಯೂಮನ್']
13 ವರ್ಷಗಳ ಕಾಲ ನಡೆದ ಪ್ರಕರಣದ ಅಂತಿಮ ತೀರ್ಪು ಬುಧವಾರ ಹೊರಬಿದ್ದಿತು. ಪ್ರಕರಣದಲ್ಲಿ ಬಾಲಿವುಡ್ ನಟ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿತು. ಒಟ್ಟಿನಲ್ಲಿ ಸಂಜಯ್ ದತ್ ನಂತರ ಮತ್ತೊಬ್ಬ ನಾಯಕ ನಟ ಜೈಲು ಸೇರುವಂತಾಗಿದೆ. ಸದ್ಯ ಎರಡು ದಿನ ಮಾತ್ರ ಸಲ್ಮಾನ್ ಖಾನ್ ನಿರಾಳ. ತೀರ್ಪು ನೀಡಿರುವ ಕೆಳ ನ್ಯಾಯಾಲಯ ಅದಕ್ಕೆ ಸ್ಪಷ್ಟ ಕಾರಣಗಳನ್ನು ತಿಳಿಸಿಲ್ಲ ಎಂಬ ಆಧಾರದ ಮೇಲೆ ಖಾನ್ ಗೆ ಜಾಮೀನು ಸಿಕ್ಕಿದ್ದು ಇನ್ನೆರಡು ದಿನದ ನಂತರ ಪರಿಸ್ಥಿತಿ ಸಂಪೂರ್ಣ ಬದಲಾಗಲಿದೆ. ಶುಕ್ರವಾರ ಬಾಂಬೆ ಹೈ ಕೋರ್ಟ್ ಪ್ರಕರಣದ ವಿಚಾರಣೆ ನಡೆಸಲಿದೆ. (ಪಿಟಿಐ ಚಿತ್ರಗಳು)

ಶಾಂತಚಿತ್ತನಾಗಿದ್ದ ಬಾಲಿವುಡ್ ನಾಯಕ
ನ್ಯಾಯಾಲಯ ಶಿಕ್ಷೆ ತೀರ್ಪು ಪ್ರಕಟ ಮಾಡುವ ವೇಳೆ ಸಲ್ಮಾನ್ ಖಾನ್ ಶಾಂತಚಿತ್ತರಾಗಿ ನಿಂತಿದ್ದರು. ತೀರ್ಪು ಘೋಷಣೆ ಯಾಗುತ್ತಿದ್ದಾಗಲೂ ಸಲ್ಮಾನ್ ಖಾನ್ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.[ನಮಗೆ ಪರಿಹಾರ ಸಿಕ್ಕರೆ ಸಾಕು]

ನ್ಯಾಯಾಧೀಶರು ಏನು ಉಲ್ಲೇಖ ಮಾಡಿದರು?
ಅಪಘಾತ ಸಂಭವಿಸುವ ವೇಳೆ ಸಲ್ಮಾನ್ ಖಾನ್ ವಾಹನ ಚಲಾಯಿಸುತ್ತಿದ್ದರು ಎಂದು ನ್ಯಾಯಾಧೀಶರು ಉಲ್ಲೇಖ ಮಾಡಿದ್ದರು. ಬಾಲಿವುಡ್ ಸ್ಟಾರ್ ಬಳಿ ಚಾಲನಾ ಪರವಾನಗಿ ಇರಲಿಲ್ಲ. ಅಲ್ಲದೇ ಸಲ್ಮಾನ್ ಕುಡಿದು ವಾಹನ ಚಲಾಯಿಸುತ್ತಿದ್ದರು ಎಂದು ನ್ಯಾಯಾಧೀಶರು ತಿಳಿಸಿದರು.[ಮಧ್ಯಂತರ ಜಾಮೀನು ಮಂಜೂರು]

' ಇಲ್ಲ' ಎಂದ ಸಲ್ಮಾನ್ ಖಾನ್
ನ್ಯಾಯಾಲಯ ನಿಮ್ಮನ್ನು ತಪ್ಪಿತಸ್ಥ ಎಂದು ಭಾವಿಸುತ್ತದೆ ಎಂದಾಗ ಸಲ್ಮಾನ್ 'ಇಲ್ಲ' ಎಂದು ಹೇಳಿದರು. ಅಲ್ಲದೇ ನನ್ನ ಮೇಲಿನ ಆರೋಪಗಳು ಸುಳ್ಳು. ನಾನು ವಾಹನ ಚಾಲನೆ ಮಾಡುತ್ತ ಇರಲಿಲ್ಲ ಎಂದು ಖಾನ್ ಹೇಳಿದರು.[ರೇಷ್ಮಾ ಶೆಟ್ಟಿ , ಶೇರಾ ಕಂಡರೆ ಸಲ್ಮಾನ್ ಗೇಕೆ ಭಯ ಭಕ್ತಿ]

ಹಳೆ ಪ್ರಕರಣಗಳ ಉಲ್ಲೇಖ
ನ್ಯಾಯಾಲಯ ಅಂತಿಮ ನಿರ್ಧಾರ ನೀಡುವ ವೇಳೆ ಅಲಿಸ್ಟೇರ್ ಪೆರೇರಾ ಮತ್ತು ನಿಖಿಲ್ ನಂದಾ ಪ್ರಕರಣದ ತೀರ್ಪನ್ನು ಉಲ್ಲೇಖ ಮಾಡಿತು. ತೀರ್ಪು ಹೊರಬೀಳುತ್ತಿದ್ದಂತೆ ಸಲ್ಮಾನ್ ಖಾನ್ ಅವರನ್ನು ನ್ಯಾಯಾಂಗ ಬಂಧನಕ್ಕೆ ವಹಿಸಲಾಯಿತು.[ಸಲ್ಮಾನ್ ಗೆ ರಕ್ಷೆ ನೀಡಿದ 'ಬೀಯಿಂಗ್ ಹ್ಯೂಮನ್']

ಸರ್ಕಾರಿ ವಕೀಲರ ಅಂತಿಮ ವಾದ
ಸಲ್ಮಾನ್ ಖಾನ್ ಕಾರು ಚಾಲಕ ಅಶೋಕ್ ಸಿಂಗ್ ಮೇಲೆ ಸುಳ್ಳು ಸಾಕ್ಷಿ ಮೊಕದ್ದಮೆ ದಾಖಲಿಸುವಂತೆ, ಜತೆಗೆ ನಟನಿಗೆ ಅತಿ ಹೆಚ್ಚು ಪ್ರಮಾಣದ ಶಿಕ್ಷೆ ವಿಧಿಸಬೇಕು ಎಂದು ಸರ್ಕಾರಿ ವಕೀಲರು ಕೇಳಿಕೊಂಡರು.

ಅಂತಿಮ ತೀರ್ಪಿತ್ತ ನ್ಯಾಯಾಲಯ
ಸಲ್ಮಾನ್ ಒಬ್ಬ ಜನಪ್ರಿಯ ವ್ಯಕ್ತಿ. ಜತೆಗೆ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಾರೆ ಮತ್ತು ಮಾಡುತ್ತಿದ್ದಾರೆ ಹಾಗಾಗಿ ಕನಿಷ್ಠ ಶಿಕ್ಷೆ ವಿಧಿಸಲಾಗುತ್ತಿದೆ ಎಂದು ನ್ಯಾಯಾಲಯ ತಿಳಿಸಿದ ನ್ಯಾಯಾಲಯ 5 ವರ್ಷ ಜೈಲು ಶಿಕ್ಷೆ ಮತ್ತು 25 ಸಾವಿರ ರೂ ದಂಡ ವಿಧಿಸಿತು.[ಎಲುಬಿಲ್ಲದ ನಾಲಿಗೆಯ ಅಭಿಜಿತ್‌ಗೆ ಟ್ವಿಟ್ಟಿಗರ ತಿರುಗುಬಾಣ]

ಅಡ್ಡಾದಿಡ್ಡಿ ವಾಹನ ಚಲಾವಣೆ
* ಭಾರತೀಯ ದಂಡಸಂಹಿತೆಯ 304 ರ ಭಾಗ 2 (ಮಾನವ ಕೊಲೆ, ಆದರೆ ಉದ್ದೇಶ ಪೂರ್ವಕ ಅಲ್ಲ) ಇದು 10 ವರ್ಷಗಳ ಜೈಲು ಶಿಕ್ಷೆಗೆ ಕಾರಣವಾಗಬಹುದಿತ್ತು. *ಸೆಕ್ಷನ್ 279: ನಿರ್ಲಕ್ಷ್ಯ ತನ ಮತ್ತು ಅಡ್ಡಾದಿಡ್ಡಿ ವಾಹನ ಚಲಾವಣೆ(ಆರು ತಿಂಗಳು ಜೈಲು)[ಸಲ್ಮಾನ್ ಶಿಕ್ಷೆ ಟ್ವಿಟ್ಟರ್ ನಲ್ಲಿ ಜನತೆ ಕೊಟ್ಟ ತೀರ್ಪೇನು?]

ಸಾರ್ವಜನಿಕ ಆಸ್ತಿಗೆ ಧಕ್ಕೆ
* ಸೆಕ್ಷನ್ 337 ಮತ್ತು 338 (ಸಾರ್ವಜನಿಕ ಆಸ್ತಿ ಪಾಸ್ತಿ ಮತ್ತು ಜೀವಕ್ಕೆ ಹಾನಿ ಮಾಡುವುದು) ಎರಡು ವರ್ಷ ಶಿಕ್ಷೆ ಸಾಧ್ಯತೆ. * ಸೆಕ್ಷನ್ 427 ಇದು ಸಹ ಸಾರ್ವಜನಿಕ ಆಸ್ತಿ ಹಾನಿಗೆ ಸಂಬಂಧಿಸಿದೆ. * ಮೋಟಾರು ವಾಹನ ಕಾಯ್ದೆ ಅನ್ವಯ ಖಾನ್ ಮೇಲೆ ಪರವಾನಗಿ ರಹಿತ ಚಾಲನೆ, ವಿಪರೀತ ವೇಗ ಸೆಕ್ಷನ್ ಗಳು ದಾಖಲಾಗಿದ್ದವು.[ಸಲ್ಮಾನ್ ರನ್ನು ಜೈಲಿಗೆ ಕಳಿಸಿದ ಹೀರೋ ಈ ಬಾಡಿಗಾರ್ಡ್]
-
ಕೊಹ್ಲಿ ಭಾಯ್ಗೆ ಮೈದಾನದಲ್ಲಿ ಕೆಣಕ್ಬೇಡಿ, ತುಂಬಾ ಸಮಯ ನಿಲ್ಲಲು ಬಿಡಬೇಡಿ; ಎಸ್ಆರ್ಎಚ್ ಸಹ ಆಟಗಾರರಿಗೆ ಇಶಾನ್ ಎಚ್ಚರಿಕೆ ಸಂದೇಶ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ












Click it and Unblock the Notifications