ಜಿಂಬಾಬ್ವೆಯಲ್ಲಿ ದಾಖಲೆ ಬರೆದ ಕರ್ನಾಟಕದ ರಾಹುಲ್

Written By:
Subscribe to Oneindia Kannada

ಹರಾರೆ, ಜೂನ್, 11: ಜಿಂಬಾಬ್ವೆಯಲ್ಲಿ ಕರ್ನಾಟಕದ ಕೆ ಎಲ್ ರಾಹುಲ್ ಹೊಸ ದಾಖಲೆ ಬರೆದಿದ್ದಾರೆ. ಪದಾರ್ಪಣೆಯ ಏಕದಿನ ಮತ್ತು ಟೆಸ್ಟ್ ನಲ್ಲಿ ಶತಕ ದಾಖಲಿಸಿದ ಶ್ರೇಯಕ್ಕೆ ರಾಹುಲ್ ಪಾತ್ರರಾಗಿದ್ದಾರೆ.

ಸಿಕ್ಸರ್ ಮೂಲಕ ಶತಕ ಸಿಡಿಸಿದ ರಾಹುಲ್ ಭಾರತದ ಪರ ಎರಡು ಪ್ರಕಾರದ ಪಂದ್ಯದಲ್ಲಿ ಪದಾರ್ಪಾಣೆ ಪಂದ್ಯದಲ್ಲೇ ಶತಕ ದಾಖಲಿಸಿದ ಸಾಧನೆ ಗೈದರು. ಜಿಂಬಾಬ್ವೆಯ 168 ರನ್‌ಗಳ ಗುರಿಯನ್ನು ಭಾರತ 42.3 ಓವರ್‌ಗಳಲ್ಲಿ ತಲುಪಿತು.[ಜಿಂಬಾಬ್ವೆ ಒಡಿಐ: ಕರುಣ್ ನಾಯರ್ ಸೇರಿ ಐವರಿಗೆ ಮೊದಲ ಅನುಭವ]

cricket

ಕೆ ಎಲ್‌ ರಾಹುಲ್‌ ಅಜೇಯ ಶತಕ (100ರನ್‌ - 115 ಎಸೆತ) ಗಳಿಸಿದರೆ ಅತ್ತ ಟೆಸ್ಟ್ ಪಂದ್ಯದಂತೆ ಆಡಿದ ಅಂಬಾಟಿ ರಾಯುಡು 120 ಎಸೆತಗಳಲ್ಲಿ 62 ರನ್‌ ಗಳಿಸಿ ತಾಳ್ಮೆ ಪ್ರದರ್ಶಿಸಿದರು.[ಜಿಂಬಾಬ್ವೆಯಲ್ಲಿ ಹೊಸ ದಾಖಲೆ ಬರೆಯಲು ಧೋನಿ ಸಜ್ಜು]

cricket

ಭಾರತದ ಪರ ಜಸ್‌ಪ್ರೀತ್‌ ಬುಮ್ರಾ 4 ವಿಕೆಟ್‌ ಕಬಳಿಸಿದರೆ, ಧವಳ್‌ ಕುಲಕರ್ಣಿ ಮತ್ತು ಬರಿಂದರ್‌ ಸ್ರಾನ್‌ ತಲಾ 2 ವಿಕೆಟ್‌ ಪಡೆದು ಜಿಂಬಾಬ್ವೆಯನ್ನು ಕಟ್ಟಿಹಾಕಿದರು. ಅಕ್ಷರ್‌ ಪಟೇಲ್‌ ಮತ್ತು ಯಜುವೇಂದ್ರ ಚಾಹಲ್‌ ಸಹಾ ತಲಾ ಒಂದು ವಿಕೆಟ್ ಪಡೆದುರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In what could be termed as a dream debut, opener KL Rahul became first batsman in India to slam a century on his maiden ODI match.With two just needed for India to win the 1st ODI against Zimbabwe, the 24-year-old Karnataka batsman smashed a six to reach the incredible milestone. He batted till the end to ensure a convincing victory for India in the short series.
Please Wait while comments are loading...