• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಿಕಿ ಚಾಲೆಂಜಿನ ನಕ್ಕುನಗಿಸುವ ವೈರಲ್ ವಿಡಿಯೋಗಳನ್ನು ನೋಡಿ

|

ಬೆಂಗಳೂರು, ಆಗಸ್ಟ್ 1: ಕೆನಡಾದ ಸಂಗೀತಗಾರ ಡ್ರೇಕ್‌ನ ಇತ್ತೀಚೆಗೆ ಬಿಡುಗಡೆ ಮಾಡಿರುವ ಸ್ಕಾರ್ಪಿಯನ್ ಮ್ಯೂಸಿಕ್ ಆಲ್ಬಂನ 'ಇನ್ ಮೈ ಫೀಲಿಂಗ್ಸ್' ಹಾಡು ಬಲು ಜನಪ್ರಿಯವಾಗಿದೆ.

ಈ ಹಾಡಿಗೆ ಕಾಮಿಡಿಯನ್ ಶಿಗ್ಗಿ ರಸ್ತೆಯಲ್ಲಿ ಡ್ಯಾನ್ಸ್ ಮಾಡಿ ಇನ್‌ಸ್ಟಾಗ್ರಾಂಗೆ ಹಾಕಿದ್ದ ವಿಡಿಯೋ ವೈರಲ್ ಆಗಿತ್ತು. ಬಳಿಕ ಅಮೆರಿಕದ ಫುಟ್ಬಾಲ್ ಆಟಗಾರ ಓಡೆಲ್ ಬೆಕಮ್ ಜೂನಿಯರ್ ಕಾರ್‌ನ ಹೊರಗೆ ನರ್ತಿಸಿದ ವಿಡಿಯೋವನ್ನು ಸ್ವತಃ ರೆಕಾರ್ಡ್ ಮಾಡಿಕೊಂಡಿದ್ದರು.

ಕೀಕಿ ಚಾಲೆಂಜ್ ವೈರಲ್ ವಿಡಿಯೋ ವಿರುದ್ಧ ಪೊಲೀಸ್ ವಾರ್ನಿಂಗ್!

ನಟ ವಿಲ್‌ ಸ್ಮಿತ್ ಕೂಡ ಕಿಕಿ ಚಾಲೆಂಜ್‌ನ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದರು. ಬ್ಯೂಡಪೆಸ್ಟ್ ಸೇತುವೆ ಮೇಲೆ ನರ್ತಿಸಿದ್ದ ಸ್ಮಿತ್ ವಿಡಿಯೋ ಅಷ್ಟೇ ಜನಪ್ರಿಯತೆ ಪಡೆದುಕೊಂಡಿತ್ತು.

ಈಗ ಈ ವಿಡಿಯೋಗಳು ಜಾಗತಿಕವಾಗಿ ಜನಪ್ರಿಯತೆ ಪಡೆದುಕೊಂಡಿವೆ. ಚಲಿಸುವ ಕಾರಿನಿಂದ ಇಳಿದು ನರ್ತಿಸಿ ಅದನ್ನು ಚಿತ್ರೀಕರಿಸಿಕೊಳ್ಳುವ ಗೀಳು ವ್ಯಾಪಕವಾಗಿದೆ.

ಕಿಕಿ ಚಾಲೆಂಜ್‌ನಿಂದ ಈಗಾಗಲೇ ಅನೇಕ ಅವಘಡಗಳು ಸಂಭವಿಸಿವೆ. ಅದು ಅಪಾಯಕಾರಿ ಎಂದು ಪೊಲೀಸರು ಜನರಿಗೆ ಎಚ್ಚರಿಕೆ ನೀಡುತ್ತಿದ್ದಾರೆ.

ಕಿಕಿ ನೃತ್ಯ ಮಾಡಿದ ನಿವೇದಿತಾ ಗೌಡ ವಿರುದ್ಧ ದೂರು

ಈ ಕಿಕಿ ಚಾಲೆಂಜ್‌ನ ವಿಡಿಯೋಗಳು ಕೆಲವು ಮಜಾ ನೀಡಿದರೆ, ಇನ್ನು ಕೆಲವರು ಅದರಿಂದಾಗ ದುರ್ಘಟನೆಯ ನೋವನ್ನು ಅನುಭವಿಸಿ ಒದ್ದಾಡುತ್ತಿದ್ದಾರೆ.

ಕಾರ್‌ನಿಂದ ಇಳಿದು ಇನ್ ಮೈ ಫೀಲಿಂಗ್ಸ್ ಹಾಡಿಗೆ ಕುಣಿಯುವ ಕೆಲವು ತಮಾಷೆಯ ವಿಡಿಯೋಗಳು ಇಲ್ಲಿವೆ.

ಕಿಕಿ ಡು ಯು ಲವ್ ಮಿ?

ಕಿಕಿ ಡು ಯು ಲವ್‌ ಮಿ ಎಂಬ ಹಾಡಿಗೆ ನರ್ತಿಸುವ ವಿಡಿಯೋ ಜತೆ, ಈ ತಮಾಷೆಯ ವಿಡಿಯೋ ವೈರಲ್ ಆಗಿದೆ. ದಾರಿ ಬದಿಯಲ್ಲಿ ಹೋಗುತ್ತಿದ್ದ ಹಸುವಿನ ಪಕ್ಕದಲ್ಲಿಯೇ ಕಾರು ಓಡಿಸಿಕೊಂಡು ಏಂಜೆಲ್ ಲಿಪಾರ್ಟ್ ಈ ವಿಡಿಯೋ ಚಿತ್ರೀಕರಿಸಿದ್ದಾರೆ. ನಮ್ಮ ಭಾರತದ ಹಸುಗಳಾಗಿದ್ದರೆ ರಸ್ತೆಗೆ ಅಡ್ಡ ನಿಂತು ಕಾರು ಹೋಗಲು ಬಿಡುತ್ತಿರಲಿಲ್ಲವೇನೋ

ಡ್ಯಾನ್ಸ್ ಮಾಡಲು ಹೋಗಿ...

ಕೆಲವು ತಲೆಹರಟೆಗಳಿಗೆ ಸರಿಯಾದ ಬೆಲೆ ತೆರಬೇಕಾಗುತ್ತದೆ ಎಂಬ ಮಾತು ನಿಜ. ನಡುರಸ್ತೆಯಲ್ಲಿ ಚಲಿಸುವಾಗಲೇ ಟ್ಯುನಿಷಿಯಾದ ಈ ಯುವತಿ ಕಿಕಿ ಹಾಡಿಗೆ ಕುಣಿಯಲುನ ಹೋಗಿ ತನ್ನ ಪರ್ಸನ್ನೇ ಕಳೆದುಕೊಂಡಿದ್ದಾಳೆ.

⭐️😃

A post shared by Hülya Avşar (@hulyavsr) on

ತುಂಟತನ ಜಾಸ್ತಿಯಾದಾಗ

ಕಾರ್‌ನಿಂದ ಇಳಿದು ಕುಣಿಯುತ್ತಿದ್ದ ಯುವತಿಯ ವಿಡಿಯೋವನ್ನು ಹಿಂದಿನಿಂದ ಒಬ್ಬರು ಚಿತ್ರೀಕರಿಸಿಕೊಳ್ಳುತ್ತಿದ್ದರೆ, ಡ್ರೈವ್ ಮಾಡುತ್ತಿದ್ದವರು ವೇಗವಾಗಿ ಚಲಿಸಿಕೊಂಡು ಹೋಗಿದ್ದಾರೆ. ಇದು ಪೂರ್ವನಿಯೋಜಿತ ಎನಿಸಿದರೂ ನಗು ತರಿಸದೆ ಇರದು.

ನಮ್ಮ ದೇಶದಲ್ಲಿ ಹೇಗಿರುತ್ತದೆ?

ಯಾವುದೇ ಜನಪ್ರಿಯ ಸಂಗತಿಯನ್ನು ದೇಸಿತನಕ್ಕೆ ಹೊಂದಿಸಿಕೊಂಡು ನಗು ಹರಿಸುವುದರಲ್ಲಿ ಭಾರತೀಯರು ಸದಾ ಮುಂದು. ಅಂತಹ ಕಲಾವಿದರು ಬೇಕಾದಷ್ಟು ಜನರಿದ್ದಾರೆ.

ಕಿಕಿ ಚಾಲೆಂಜ್ ವಿಡಿಯೋವನ್ನು ಸ್ಫೂರ್ತಿಯನ್ನಾಗಿಸಿಕೊಂಡು ತಮಾಷೆ ಮಾಡುವ ವಿಡಿಯೋ ಈಗ ವೈರಲ್ ಆಗಿದೆ. ನಮ್ಮ ಭಾರತದ ರಸ್ತೆಯಲ್ಲಿ ವಿಡಿಯೋ ಮಾಡಿದರೆ ಹೇಗಿರುತ್ತದೆ ಎಂಬುದನ್ನು ಸ್ವಾರಸ್ಯಕರವಾಗಿ ಚಿತ್ರಿಸಲಾಗಿದೆ. ನೋಡಿದವರಿಗೆ ಕಚಗುಳಿ ಇಡುತ್ತದೆ ಈ ವಿಡಿಯೋ.

ಕಾರ್ ಎಲ್ಲಿದೆ?

ಕಿಕಿ ಚಾಲೆಂಜ್‌ಅನ್ನು ಹೇಗೆ ಬೇಕಾದರೂ ಸ್ವೀಕರಿಸಬಹುದು. ಇದಕ್ಕೆ ಕಾರ್ ಇರಲೇಬೇಕು ಎಂದೇನಿಲ್ಲ. ಕಾರ್‌ ಡೋರ್ ಇದ್ದರೂ ಸಾಕು. ಆದರೆ, ಕಾರ್ ಡೋರ್ ತರುವಾಗ ಮಾತ್ರ ಹುಷಾರು.

ಲೋ ಬಜೆಟ್ ವಿಡಿಯೋ!

ಕಾರ್‌ನಿಂದ ಇಳಿದು ಡ್ಯಾನ್ಸ್ ಮಾಡಲು ಎಲ್ಲರ ಬಳಿ ಕಾರ್ ಇರಬೇಕಲ್ಲ? ಹಾಗೆಂದು ವಿಡಿಯೋದ ಮಜಾ ತೆಗೆದುಕೊಳ್ಳದೆ ಇದ್ದರೆ ಹೇಗೆ? ದೊಡ್ಡ ಕಾರ್ ಇಲ್ಲದಿದ್ದರೇನಂತೆ, ಕಡಿಮೆ ಬೆಲೆಯ ಕಾರ್‌ ಸಿಗುತ್ತದೆಯಲ್ಲ. ಅದರಲ್ಲೇ ಕಿಕಿ ಡ್ಯಾನ್ಸ್ ಮಾಡಬಹುದು.

ಎತ್ತಿನಗಾಡಿ ಡ್ಯಾನ್ಸ್ ಕೂಡ ಮಾಡಬಹುದು

ಅಪ್ಪಟ ದೇಸಿತನದ ವಿಡಿಯೋ ಇದು. ಕಿಕಿ ಹಾಡಿಗಿಂತ ಹಳೆಯದಿರಬಹುದು. ಆದರೆ, ಈಗಿನ ಕಾಲದ ಆ ನೃತ್ಯಕ್ಕೂ ಇದು ಹೊಂದಿಕೊಳ್ಳುತ್ತದೆ. ತಮಿಳು ನಟ ವಿಜಯಕಾಂತ್ ಅವರ ಹಳೆಯ ಸಿನಿಮಾವೊಂದರ ಹಾಡಿಗೆ ಕಿಕಿ ಡ್ಯಾನ್ಸ್‌ಅನ್ನು ಅಳವಡಿಸಿರುವುದು ಹೀಗೆ.

ಬೆಸ್ಟ್ ಕಿಕಿ ಚಾಲೆಂಜ್ ಇದು!

ಹಾಡೊಂದರ ಜನಪ್ರಿಯತೆ ಕಡಿಮೆಯಾದಾಗ ಕಿರಿಕಿರಿ ಹುಟ್ಟಿಸಲು ಸಾಧ್ಯವಾಗುತ್ತದೆ. ಅಲ್ಲದೆ, ಜನಪ್ರಿಯವಾದ ಹಾಡುಗಳು ಎಲ್ಲರಿಗೂ ಇಷ್ಟವಾಗಲೇಬೇಕು ಎಂದೇನಿಲ್ಲವಲ್ಲ. ಕಿಕಿ ಚಾಲೆಂಜ್ ನೋಡಿ ನೋಡಿ ರೋಸಿದ ಈ ವ್ಯಕ್ತಿ ಮಾಡಿದ್ದೇನು ನೋಡಿ.

ಡ್ಯಾನ್ಸ್ ಮಾಡುವವರು ಯಾರು ಗೊತ್ತೇ?

ಕಿಕಿ ಚಾಲೆಂಜ್ ಮನುಷ್ಯರು ಮಾತ್ರವಲ್ಲ ಪ್ರಾಣಿಗಳೂ ಸ್ವೀಕರಿಸಿವೆ. ಅದಕ್ಕೆ ಸಾಕ್ಷಿ ಇಲ್ಲಿದೆ ನೋಡಿ. ಕಿಕಿ ಹಾಡಿಗೆ ಎರಡೇ ಕಾಲಲ್ಲಿ ಜಿಗಿಯುತ್ತಾ ಹಿಂದೆ ಮುಂದೆ ಓಡುವ ಈ ಶ್ವಾನದ ಪ್ರತಿಭೆ ಎಲ್ಲ 'ಕಿಕಿ ಕಲಾವಿದರ'ನ್ನು ಬೆರಗಾಗಿಸಿದೆ.

ಇಬ್ಬರೂ ಕುಣಿದರೆ ಹೀಗಾಗುತ್ತದೆ

ಕಿಕಿ ಚಾಲೆಂಜ್‌ ಎಂದು ಹಾಡಿಗೆ ಮೈಮರೆತು ಕುಣಿಯುವುದು ಅಪಾಯ ಎಂದು ಎಚ್ಚರಿಸಲಾಗುತ್ತಿದೆ. ಹೀಗಿರುವಾಗ ಚಾಲಕ ಕೂಡ ಕಾರಿನಿಂದ ಇಳಿದು ಕುಣಿಯಲು ಹೋದರೆ ಆಗುವ ಗತಿಯೇನು?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
KiKi challenge videos getting viral in social media. Some people doing funny videos of it. Here is some videos will makes you smile.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more