Kiara Advani on Manipur Women Parade: ನನ್ನ ಹೃದಯವು ಕಂಪಿಸಿದೆ ಎಂದ ನಟಿ ಕಿಯಾರಾ ಅಡ್ವಾಣಿ
ನವದೆಹಲಿ, ಜುಲೈ 20: ಮಣಿಪುರದಲ್ಲಿ ಕುಕಿ ಸಮುದಾಯದ ಇಬ್ಬರು ಮಹಿಳೆಯರನ್ನು ನಗ್ನವಾಗಿ ಮೆರವಣಿಗೆ ಮಾಡಿರುವ ಘಟನೆಯನ್ನು ಹಲವರು ಗಣ್ಯರು ಖಂಡಿಸಿರುವ ಹಿನ್ನೆಲೆಯಲ್ಲಿ ಈಗ ಖ್ಯಾತ ಹಿಂದಿ ನಟಿ ಕಿಯಾರಾ ಅಡ್ವಾಣಿ ಅವರು ಈ ಘಟನಯಿಂದ ನನ್ನ ಹೃದಯವು ಕಂಪಿಸಿದೆ ಎಂದು ಹೇಳಿದ್ದಾರೆ.
ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಮೈಟಿ ಸಮುದಾಯದ ಹಲವಾರು ಯುವಕರು ಕುಕಿ ಸಮುದಾಯದ ಇಬ್ಬರು ಮಹಿಳೆಯರನ್ನು ಬೆತ್ತಲೆ ಮಾಡಿ ಎಳೆದುಕೊಂಡು ಹೋಗುತ್ತಿರುವು ವಿಡಿಯೋ ವೈರಲ್ ಆಗಿದ್ದು ಈ ಘಟನೆ ಸಂಬಂಧ ಹಲವಾರು ಗಣ್ಯರು ಇದನ್ನು ತೀವ್ರವಾಗಿ ಖಂಡಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ನಟಿ ಕಿಯಾರಾ ಅಡ್ವಾಣಿ ಅವರು ಈ ವಿಡಿಯೋ ಭಯಾನಕವಾಗಿದ್ದು, ಇದರಿಂದ ನನ್ನ ಹೃದಯ ಕಂಪಿಸಿದ್ದು, ನಾನು ಆ ಮಹಿಳೆಯರಿಗೆ ಶೀಘ್ರ ನ್ಯಾಯ ದೊರಕುವಂತೆ ಪ್ರಾರ್ಥಿಸುತ್ತೇನೆ. ಮಹಿಳೆಯರಿಗೆ ಅವಮಾನ ಮಾಡಿದವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಅವರು ಬರೆದಿದ್ದಾರೆ.
ಮಣಿಪುರದಲ್ಲಿ ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ ಘಟನೆ ಬಗ್ಗೆ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಈ ಘಟನೆಯಿಂದ ನನಗೆ ತೀವ್ರ ನೋವಾಗಿದ್ದು, ಇಂತಹ ಘಟನೆಗಳು ನಾಗರಿಕ ಸಮಾಜಕ್ಕೆ ನಾಚೀಕೆಗೇಡು. ಇಲ್ಲಿ ಘಟನೆ ಹಿಂದೆ ಇರುವ ಯಾವ ಅಪರಾಧಿಯನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಮಾನ್ಸೂನ್ ಅಧಿವೇಶನ ಆರಂಭದ ದಿನವಾದ ಗುರುವಾರ ಸಂಸತ್ ಭವನದ ಮುಂದೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಇಂತಹ ಘಟನೆಗಳು ನಾಗರಿಕ ಸಮಾಜಕ್ಕೆ ನಾಚೀಕೆಗೇಡಿನ ಸಂಗತಿಯಾಗಿದೆ. ಈ ಕೃತ್ಯ ಎಸಗಿದವರು ಹಾಗೂ ಇದರ ಹಿಂದೆ ಇರುವ ಯಾವ ಅಪರಾಧಿಗಳು ಅದು ಎರಡನೇ ವಿಷಯ. ಆದರೆ ಇದು ದೇಶಕ್ಕೆ ಮಾಡಿದ ಅವಮಾನವಾಗಿದೆ. ಇದರಿಂದ ರಾಜ್ಯದಲ್ಲಿ ಮುಖ್ಯಮಂತ್ರಿಗಳಿಗೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಮನವಿ ಮಾಡುತ್ತೇನೆ. ರಾಜಸ್ತಾನವಾಗಲಿ, ಛತ್ತಿಸ್‌ಗಡವಾಗಲಿ ಇಲ್ಲ ಮಣಿಪುರವಾಗಲಿ ಮಹಿಳೆಯರ ಗೌರವ ಸಮಸ್ಯೆ ಎಲ್ಲ ರಾಜಕೀಯವನ್ನು ಮೀರಿದ್ದಾಗಿದೆ ಎಂದರು.
ಈ ಮಧ್ಯೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಹಲವಾರು ವಿರೋಧ ಪಕ್ಷಗಳ ನಾಯಕರು ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಕುರಿತು ಚರ್ಚೆ ಮಾಡಲು ಅವಕಾಶ ಕೋರಿವೆ. ಮಣಿಪುರದಲ್ಲಿ ಮಹಿಳೆಯಲರನ್ನು ಬೆತ್ತಲಾಗಿ ಹಿಡಿದುಕೊಂಡು ಎಳೆದುಕೊಂಡು ಹೋಗುತ್ತಿರುವ ವಿಡಿಯೋ ಕಾಡ್ಗಿಚ್ಚಿನಂತೆ ಹರಡಿದೆ. ಮಣಿಪುರದಲ್ಲಿ ಬಹುಸಂಖ್ಯಾತರಾದ ಮೈಟಿ ಸಮುದಾಯ ಇಂಫಾಲದ ಹಲವಾರು ಗುಡ್ಡಗಾಡುಗಳಲ್ಲಿ ವಾಸಿಸುತ್ತಿದ್ದಾರೆ. ತಮಗೆ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಎಸ್‌ಟಿ ಮಾನ್ಯತೆ ನೀಡುವಂತೆ ಬೇಡಿಕೆ ಇಟ್ಟಿವೆ.
ಮಣಿಪುರದ ಘಟನೆಯನ್ನು ಬಾಲಿವುಡ್ ನಟ ಅಕ್ಷಯ್ ಕುಮಾರ್ ಹಾಗೂ ಊರ್ಮಿಳಾ ಮಾತೋಂಡ್ಕರ್ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ವೀಡಿಯೊದ ಬಗ್ಗೆ ಆಘಾತ ವ್ಯಕ್ತಪಡಿಸಿ ಅಪರಾಧಿಗಳಿಗೆ ಕಠಿಣ ಶಿಕ್ಷ ನೀಡುವಂತೆ ಒತ್ತಾಯಿಸಿದ್ದಾರೆ.
ಬುಧವಾರ ವಿಡಿಯೋ ಹೊರಬಿದ್ದ ನಂತರ ಮಣಿಪುರದ ಬೆಟ್ಟಗಳಲ್ಲಿ ಉದ್ವಿಗ್ನತೆ ಉಂಟಾಗಿದೆ. ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ (ಐಟಿಎಲ್‌ಎಫ್) ಗುರುವಾರ ಘೋಷಿಸಿದ ಯೋಜಿತ ಪ್ರತಿಭಟನಾ ಮೆರವಣಿಗೆಯ ಮುನ್ನಾದಿನದಂದು ಅವರ ದುಃಸ್ಥಿತಿಯನ್ನು ಎತ್ತಿ ತೋರಿಸಿದೆ.












Click it and Unblock the Notifications