Kerala Lottery: ಪೌರ ಕಾರ್ಮಿಕ ಮಹಿಳೆಯರಿಗೆ ಒಲಿದ ಅದೃಷ್ಟ ಲಕ್ಷ್ಮಿ : 10 ಕೋಟಿ ಗೆದ್ದ 11 ಮಹಿಳೆಯರು
ಅದೃಷ್ಟ ಯಾರಿಗೆ ಯಾವಾಗ ಒಲಿದು ಬರುತ್ತದೆ ಎಂದು ಹೇಳಲು ಆಗದು, ಕೆಲವೊಮ್ಮೆ ಜೀವನಪೂರ್ತಿ ಲಾಟರಿ ಟಿಕೆಟ್ ಖರೀದಿ ಮಾಡಿದರೂ ವಿಜೇತರಾಗುವುದು ಕಷ್ಟ, ಅದೃಷ್ಟವಿದ್ದರೆ ಕುತೂಹಲಕ್ಕೆ ಲಾಟರಿ ಖರೀದಿಸಿ ಕೋಟ್ಯಧಿಪತಿಗಳಾದವರು ಇದ್ದಾರೆ.
ಈ ಬಾರಿ ಕೇರಳದಲ್ಲಿ ಕೂಡ ಹಾಗೆ ಆಗಿದೆ. 11 ಪೌರ ಕಾರ್ಮಿಕ ಮಹಿಳೆಯರು ಸೇರಿ ಒಂದು ಲಾಟರಿ ಟಿಕೆಟ್ ಖರೀದಿ ಮಾಡಿದ್ದು ಅದೃಷ್ಟ ಒಲಿದು ಬಂದಿದೆ. ಹೌದು, ಈ ಮಹಿಳೆಯರು ಖರೀದಿ ಮಾಡಿದ 10 ಕೋಟಿ ರೂಪಾಯಿ ಬಹುಮಾನ ಬಂದಿದ್ದು, ಮಹಿಳೆಯರ ಬದುಕೇ ಬದಲಾಗಲಿದೆ.

ಕೇರಳ ಮಾನ್ಸೂನ್ ಬಂಪರ್ ನಲ್ಲಿ ಮೊದಲ ಬಹುಮಾನ 10 ಕೋಟಿ ರೂಪಾಯಿ ಪಾಲಕ್ಕಾಡ್‌ನ ಪರಪ್ಪನಂಗಡಿ ಪುರಸಭಾ ವ್ಯಾಪ್ತಿಯ ಹಸಿರು ಸೇನೆಯ ಹರಿತ ಕರ್ಮ ಸೇನೆಯ 11 ಮಂದಿಗೆ ಸಿಕ್ಕಿದೆ. ಅವರು ಪಾಲಕ್ಕಾಡ್‌ನಲ್ಲಿರುವ ಎ ಕಾಜಾ ಹುಸೇನ್ ಎಂಬ ಏಜೆಂಟ್‌ನಿಂದ ಟಿಕೆಟ್ ಖರೀದಿ ಮಾಡಿದ್ದರು.
11 ಜನ ಸೇರಿ ಒಂದು ಟಿಕೆಟ್ ಖರೀದಿ
ಈ ಟಿಕೆಟ್ ಬೆಲೆ 250 ರೂಪಾಯಿ ಇದ್ದು, 9 ಜನ ಸೇರಿ ಟಿಕೆಟ್ ಖರೀದಿ ಮಾಡಲು ಬಯಸಿದ್ದರು, ಆದರೆ ಇಬ್ಬರಲ್ಲಿ ಹಣ ಇಲ್ಲದ ಕಾರಣ, ಇನ್ನೂ ಇಬ್ಬರನ್ನು ಸೇರಿಸಿಕೊಂಡು, ಒಟ್ಟು 11 ಜನ ಸೇರಿ ಟಿಕೆಟ್ ಖರೀದಿ ಮಾಡಿದ್ದರು
ಕೇವಲ 21 ದಿನಗಳಲ್ಲಿ ಮಲೆಮಾದಪ್ಪನಿಗೆ ಹರಿದು ಬಂತು 1.56 ಕೋಟಿ ರೂಪಾಯಿ ಕಾಣಿಕೆ.
ಪಿಟಿಐಗೆ ಮಾತನಾಡಿದ ಮಹಿಳೆಯೊಬ್ಬರ, "ಟಿಕೆಟ್ ಡ್ರಾಗಾಗಿ ಕುತೂಹಲದಿಂದ ಕಾಯುತ್ತಿದ್ದೆವು ಆದರೆ ನೆರೆಯ ಪಾಲಕ್ಕಾಡ್‌ನಲ್ಲಿ ಮಾರಾಟವಾದ ಟಿಕೆಟ್ ಮೊದಲ ಬಹುಮಾನವನ್ನು ಗೆದ್ದಿದೆ ಎಂದು ಯಾರೋ ಹೇಳಿದ ನಂತರ ಬೇಸರವಾಯಿತು" ಎಂದು ಹೇಳಿದರು.
"ಕೊನೆಗೆ ನಮಗೆ ಜಾಕ್‌ಪಾಟ್ ಹೊಡೆದಿದೆ ಎಂದು ತಿಳಿದಾಗ ನಮ್ಮ ಸಂತೋಷಕ್ಕೆ ಮಿತಿಯಿಲ್ಲ, ನಾವೆಲ್ಲರೂ ಜೀವನದಲ್ಲಿ ಸಾಕಷ್ಟು ಕಷ್ಟ ಪಡುತ್ತಿದ್ದೇವೆ ಮತ್ತು ಈ ಲಾಟರಿ ಹಣದಿಂದ ನಮ್ಮ ಸಮಸ್ಯೆಗಳನ್ನು ಪರಿಹರಿಸಲು ಸಹಾಯವಾಗುತ್ತದೆ" ಎಂದು ಅವರು ಹೇಳಿದರು.
ಹರಿತ ಕರ್ಮ ಸೇನೆಯಲ್ಲಿ ಕೆಲಸ ಮಾಡುವ ಮಹಿಳೆಯರು ತಮಗೆ ಬರುವ ಕಡಿಮೆ ಸಂಬಳದ ಕಾರಣದಿಂದ ತಮ್ಮ ಜೀವನ ನಡೆಸಲು ಹೆಣಗಾಡುತ್ತಾರೆ, ಆದರೆ ಈ ಲಾಟರಿ ಅವರ ಜೀವನವನ್ನು ಬದಲಾಯಿಸಲಿದೆ.
ಹರಿತ ಕರ್ಮ ಸೇನೆಯು ಮನೆಗಳು ಮತ್ತು ಸಂಸ್ಥೆಗಳಿಂದ ತ್ಯಾಜ್ಯವನ್ನು ಸಂಗ್ರಹಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಈ ತ್ಯಾಜ್ಯವನ್ನು ಮರುಬಳಕೆ ಪ್ರಕ್ರಿಯೆಗೆ ಅನುಕೂಲವಾಗುವಂತೆ ಘಟಕಗಳಿಗೆ ಕಳುಹಿಸಲಾಗುತ್ತದೆ.
ಹರಿತ ಕರ್ಮ ಸೇನೆಯ ಅಧ್ಯಕ್ಷೆ ಶೀಜಾ ಮಾತನಾಡಿ, ಶ್ರಮಜೀವಿ ಮಹಿಳೆಯರು ಬಹುಮಾನವನ್ನು ಗೆಲ್ಲಲು ಅರ್ಹರಾಗಿದ್ದಾರೆ. ಅವರಲ್ಲಿ ಅನೇಕ ಮಹಿಳೆಯರು ಸಾಲ ಮಾಡಿಕೊಂಡಿದ್ದಾರೆ, ಮದುವೆ ವಯಸ್ಸಿನ ಹೆಣ್ಣು ಮಕ್ಕಳಿದ್ದಾರೆ, ಸಂಬಂಧಿಕರ ಚಿಕಿತ್ಸೆ ವೆಚ್ಚ ಭರಿಸಬೇಕಾಗಿದೆ, ಹಳೆಯ ಮನೆಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಪಿಟಿಐಗೆ ತಿಳಿಸಿದರು.












Click it and Unblock the Notifications