Get Updates
Get notified of breaking news, exclusive insights, and must-see stories!

ಕೇರಳ: ನಿಪಾಹ್ ವೈರಸ್ ಗೂ ಬಾವಲಿಗೂ ಸಂಬಂಧವಿಲ್ಲ?!

ಕೊಞಕೊಡೆ, ಮೇ 26: ಕೇರಳಲ್ಲಿ ಇದುವರೆಗೆ 12 ಜನರನ್ನು ಬಲಿತೆಗೆದುಕೊಂಡ ನಿಪಾಹ್ ವೈರಸ್ ಗೂ ಫ್ರೂಟ್ ಬ್ಯಾಟ್ ಗೂ ಸಂಬಂಧವಿಲ್ಲದಿರಬಹುದು ಎಂಬ ಅನುಮಾನವನ್ನು ಇಲ್ಲಿನ ವೈದ್ಯಕೀಯ ಪ್ರಯೋಗಾಲಯದ ವರದಿ ವ್ಯಕ್ತಪಡಿಸಿದೆ.

ಫ್ರೂಟ್ ಬ್ಯಾಟ್ ಅಥವಾ ಹಂದಿಗಳಿಂದ ಈ ಕಾಯಿಲೆ ಹರಡುತ್ತದೆಯೇ ಎಂಬ ಕುರಿತು ನಡೆಸಿದ ಅಧ್ಯಯನದಲ್ಲಿ ಸಾಧ್ಯತೆಗಳು 'ನೆಗೆಟಿವ್' ಎಂದು ಬಂದಿದೆ. ಕೇರಳದ ಕೊಞಕೊಡೆಯಲ್ಲಿ ನಿಪಾಹ್ ವೈರಸ್ ಸೋಂಕಿಗೆ ಒಂದೇ ಮನೆಯಲ್ಲಿ ನಾಲ್ವರು ಮೃತರಾಗಿದ್ದರು. ಈ ಮನೆಯ ಭಾವಿಯಲ್ಲಿದ್ದ ಬಾವಲಿಗಳನ್ನು ಅಧ್ಯಯನಕ್ಕೊಳಪಡಿಸಿದಾಗ ಇವುಗಳಿಂದ ನಿಪಾಹ್ ವೈರಸ್ ಹರಡಿಲ್ಲ ಎಂಬುದು ದೃಢವಾಗಿದೆ ಎಂದು ಈ ವರದಿ ತಿಳಿಸಿದೆ.

ಒಂದು ಬಗೆಯ ಫ್ರುಟ್ ಬ್ಯಾಟ್ ಗಳಿಂದ ಬರುವ ಈ ರೋಗ ಮಲೇಶಿಯಾ ದೇಶದಲ್ಲಿ ಮೊದಲು ಕಂಡುಬಂದಿತ್ತು. ಮಲೇಶಿಯಾದ ನಿಪಾಹ್ ಎಂಬಲ್ಲಿ ಮೊದಲಬಾರಿಗೆ ಕಂಡುಬಂದಿದ್ದರಿಂದ ಆ ಊರಿನ ಹೆಸರನ್ನೇ ಈ ರೋಗಕ್ಕೂ ಇಡಲಾಗಿದೆ!

Keralas deadly Nipah virus may not be linked to bats: report

ಸಾಮಾನ್ಯ ಜ್ವರ, ತಲೆನೋವಿನಂತೆ ಆರಂಭವಾಗುವ ಲಕ್ಷಣ ಮಾರಣಾಂತಿಕವಾಗಿ ಬದಲಾಗಲಿದ್ದು, ಈ ವಿಚಿತ್ರ ಕಾಯಿಲೆಗೆ ಈಗಾಗಲೇ 12 ಜನ ಅಸುನೀಗಿದ್ದಾರೆ. ಈ ಕಾಯಿಲೆಗೆ ಇದುವರೆಗೆ ಯಾವುದೇ ಪರಿಣಾಮಕಾರೀ ಚಿಕಿತ್ಸೆಯಾಗಲೀ, ಲಸಿಕೆಯಾಗಲೀ ಲಭ್ಯವಿಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+