ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ನಿನ್ನ ಮೊಣಕಾಲು ಮುರಿಯುತ್ತೇನೆ’: ಕೇರಳ ಪ್ರಾಂಶುಪಾಲರಿಗೆ ಎಸ್‌ಎಫ್‌ಐ ಕಾರ್ಯಕರ್ತರ ಬೆದರಿಕೆ

|
Google Oneindia Kannada News

ತಿರುವನಂತಪುರಂ ನವೆಂಬರ್ 2: ವಿದ್ಯಾರ್ಥಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಕೇರಳ ಕಾಲೇಜು ಪ್ರಾಂಶುಪಾಲರಿಗೆ ಎಸ್‌ಎಫ್‌ಐ ಕಾರ್ಯಕರ್ತರು ಬೆದರಿಕೆ ಹಾಕಿದ್ದಾರೆ. ಕಾಲೇಜಿಗೆ ನುಗ್ಗಿದ ಕಾರ್ಯಕರ್ತರ ಗುಂಪು ಪ್ರಾಂಶುಪಾಲರಿಗೆ 'ನಿನ್ನ ಮೊಣಕಾಲು ಮುರಿಯುತ್ತೇನೆ. ಹೊರಗೆ ಬಾ' ಎಂದು ಬೆದರಿಕೆ ಹಾಕಿದೆ. ಕೇರಳದ ತ್ರಿಶೂರ್‌ನಲ್ಲಿರುವ ಮಹಾರಾಜಸ್ ಟೆಕ್ನಾಲಜಿಕಲ್ ಇನ್‌ಸ್ಟಿಟ್ಯೂಟ್‌ನಲ್ಲಿ ಈ ಘಟನೆ ನಡೆದಿದೆ.

ಆಡಳಿತಾರೂಢ ಸಿಪಿಐ(ಎಂ)ನ ವಿದ್ಯಾರ್ಥಿ ಘಟಕವಾದ ಸ್ಟೂಡೆಂಟ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ) ಕಾರ್ಯಕರ್ತರು ತ್ರಿಶೂರ್ ಕಾಲೇಜಿನ ಪ್ರಾಂಶುಪಾಲರಿಗೆ ವಿದ್ಯಾರ್ಥಿನಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಬೆದರಿಕೆ ಹಾಕುತ್ತಿರುವ ವಿಡಿಯೋ ವೈರಲ್ ಆಗಿದೆ. ಹೊರ ಬಂದರೆ ಪ್ರಾಂಶುಪಾಲರ ಮೊಣಕಾಲು ಮುರಿಯುವುದಾಗಿ ಬೆದರಿಕೆ ಹಾಕುವುದಾಗಿ ಬೆದರಿಸಿದ್ದಾರೆ. ಅಷ್ಟಕ್ಕೂ ಎಸ್‌ಎಫ್‌ಐ ಕಾರ್ಯಕರ್ತರು ಇಷ್ಟೊಂದು ಕಟೂವಾಗಿ ನಿಂದಿಸಲು ಕಾರಣವೇನೆಂದರೆ ವಿದ್ಯಾರ್ಥಿಯೊಬ್ಬ ಕಾಲೇಜಿಗೆ ಕ್ಯಾಪ್ ಹಾಕಿಕೊಂಡು ಬಂದಿರುವುದನ್ನು ಪ್ರಾಂಶುಪಾಲರು ಬಲವಂತದಿಂದ ತೆಗೆದಿದ್ದಾರಂತೆ.

ವಿದ್ಯಾರ್ಥಿ ಹಾಕಿದ್ದ ಕ್ಯಾಪ್ ತೆಗೆದು ಪ್ರಾಂಶುಪಾಲರು

ವಿದ್ಯಾರ್ಥಿ ಹಾಕಿದ್ದ ಕ್ಯಾಪ್ ತೆಗೆದು ಪ್ರಾಂಶುಪಾಲರು

ನೆತ್ತಿಯ ಸೋರಿಯಾಸಿಸ್‌ನಿಂದ ಬಳಲುತ್ತಿದ್ದ ವಿದ್ಯಾರ್ಥಿ ಕ್ಯಾಪ್‌ ಅನ್ನು ಹಾಕಿಕೊಳ್ಳುತ್ತಿರುವುದಾಗಿ ಹೇಳಿದರೂ ಪ್ರಾಂಶುಪಾಲರು ಆತನ ಮಾತು ಕೇಳದೆ ಕ್ಯಾಪ್‌ ಅನ್ನು ಬಲವಂತವಾಗಿ ತೆಗೆದಿದ್ದಾರೆ ಎಂದು ಎಸ್‌ಎಫ್‌ಐ ಕಾರ್ಯಕರ್ತರು ಆರೋಪಿಸಿದ್ದಾರೆ. ಧೂಳು ಮತ್ತು ಸೂರ್ಯನ ಬೆಳಕನ್ನು ತಡೆಯಲು ವಿದ್ಯಾರ್ಥಿಗೆ ವೈದ್ಯರು ಹೇಳಿದ್ದರಿಂದ ವಿದ್ಯಾರ್ಥಿಯು ಕ್ಯಾಪ್ ಧರಿಸುತ್ತಿದ್ದನು. ಈ ಬಗ್ಗೆ ಪ್ರಾಂಶುಪಾಲರ ಗಮನಕ್ಕೆ ತಂದರೂ ಅವರು ಕ್ಯಾಪ್ ಅನ್ನು ಬಲಂತವಾಗಿ ತೆಗೆದಿದ್ದಾರೆ ಎಂದು ಅವರು ಹೇಳಿದ್ದಾರೆ.

ಪ್ರಾಂಶುಪಾಲರಿಗೆ ಬೆದರಿಕೆ

ಪ್ರಾಂಶುಪಾಲರಿಗೆ ಬೆದರಿಕೆ

ಇದರಿಂದ ಕೋಪಗೊಂಡ ಕಾರ್ಯಕರ್ತರು ಕಾಲೇಜಿಗೆ ನುಗ್ಗಿ ಪ್ರಾಂಶುಪಾಲರಿಗೆ ಧಮ್ಕಿ ಹಾಕಿದ್ದಾರೆ. ಏಕವಚನದಲ್ಲಿ ನಿಂದಿಸಿದ್ದಾರೆ. ಜೊತೆಗೆ ಬೆದರಿಕೆ ಕೂಡ ಹಾಕಿದ್ದಾರೆ. "ನಾನು ನಿನ್ನ ಮೊಣಕಾಲುಗಳನ್ನು ಮುರಿಯುತ್ತೇನೆ. ನೀವು ಹೊರಗೆ ಬನ್ನಿ,'' ಎಂದು ಜಿಲ್ಲಾ ಕಾರ್ಯದರ್ಶಿ ಹಸನ್ ಮುಬಾರಕ್ ನೇತೃತ್ವದ ಎಸ್‌ಎಫ್‌ಐ ಕಾರ್ಯಕರ್ತರು ಕೇರಳದ ತ್ರಿಶೂರ್‌ನಲ್ಲಿರುವ ಮಹಾರಾಜಸ್ ಟೆಕ್ನಾಲಜಿಕಲ್ ಇನ್‌ಸ್ಟಿಟ್ಯೂಟ್‌ನ ಪ್ರಾಂಶುಪಾಲರಿಗೆ ಅವರ ಕಚೇರಿಗೆ ಪ್ರವೇಶಿಸಿ ಬೆದರಿಕೆ ಹಾಕಿದ್ದಾರೆ. ಅಕ್ಟೋಬರ್ 25 ರಂದು ಈ ಘಟನೆ ನಡೆದಿದೆ. ಪ್ರಾಂಶುಪಾಲರಾದ ಪಿ ದಿಲೀಪ್ ಅವರು ನಿನ್ನೆ ಪೊಲೀಸರಿಗೆ ದೂರು ನೀಡಿದ್ದಾರೆ.

ವಿದ್ಯಾರ್ಥಿ ಸಂಘ ಆಕ್ರೋಶ

ವಿದ್ಯಾರ್ಥಿ ಸಂಘ ಆಕ್ರೋಶ

ಇಡೀ ಘಟನೆ ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿದೆ. ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿಯೇ ಈ ಘಟನೆ ನಡೆದಿರುವುದು ದೃಶ್ಯಾವಳಿಗಳಲ್ಲಿ ಕಾಣಬಹುದು. ಎಸ್‌ಎಫ್‌ಐ ತ್ರಿಶೂರ್ ಜಿಲ್ಲಾ ಕಾರ್ಯದರ್ಶಿ ಫೇಸ್‌ಬುಕ್ ಪೋಸ್ಟ್‌ನ ಪ್ರಕಾರ, ನೆತ್ತಿಯ ಸೋರಿಯಾಸಿಸ್‌ನಿಂದ ಬಳಲುತ್ತಿರುವ ವಿದ್ಯಾರ್ಥಿಯ ಕ್ಯಾಪ್ ಅನ್ನು ಪ್ರಾಂಶುಪಾಲರು ಬಲವಂತವಾಗಿ ತೆಗೆದಿದ್ದರಿಂದ ವಿದ್ಯಾರ್ಥಿ ಸಂಘ ಆಕ್ರೋಶಗೊಂಡಿದೆ. ಧೂಳು ಮತ್ತು ಸೂರ್ಯನ ಬೆಳಕನ್ನು ತಡೆಯುವಂತೆ ವೈದ್ಯರು ಕೇಳಿದ್ದರಿಂದ ವಿದ್ಯಾರ್ಥಿಯು ಕ್ಯಾಪ್ ಧರಿಸಿದ್ದರು ಎಂದು ಬರೆದಿದ್ದಾರೆ.

ಸೆಕ್ಷನ್ 447 ಅಡಿ ಪ್ರಕರಣ ದಾಖಲು

ಸೆಕ್ಷನ್ 447 ಅಡಿ ಪ್ರಕರಣ ದಾಖಲು

ಎಸ್‌ಎಫ್‌ಐನ ತ್ರಿಶೂರ್ ಜಿಲ್ಲಾ ಕಾರ್ಯದರ್ಶಿ ಸೇರಿದಂತೆ ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 447 (ಕ್ರಿಮಿನಲ್ ಅತಿಕ್ರಮಣ), 506 (ಕ್ರಿಮಿನಲ್ ಬೆದರಿಕೆ), ಮತ್ತು 353 (ಸಾರ್ವಜನಿಕ ಸೇವಕನನ್ನು ತನ್ನ ಕರ್ತವ್ಯವನ್ನು ನಿರ್ವಹಿಸದಂತೆ ತಡೆಯಲು ಆಕ್ರಮಣ ಅಥವಾ ಕ್ರಿಮಿನಲ್ ಬಲ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

English summary
A video of SFI activists threatening a Kerala college principal for allegedly misbehavior towards a student has gone viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X