ಕೇರಳದಲ್ಲೊಂದು ಮಾದರಿ ದೇವಾಲಯ, ಇಲ್ಲಿ ಮುಸ್ಲಿಮರಿಗೂ ಇಫ್ತಾರ್ ಕೂಟ!

ರಂಜಾನ್ ತಿಂಗಳಿನಲ್ಲಿ ಉಪವಾಸ ಇರುವ ಮುಸ್ಲಿಂ ಸಮುದಾಯದವರಿಗಾಗಿ ಇಫ್ತಾರ್ ಕೂಟವನ್ನು ಆಯೋಜಿಸಿ ಸುದ್ದಿಯಾಗಿದೆ ಪುನ್ನತಾಲದಲ್ಲಿರುವ ಶ್ರೀ ನರಸಿಂಹಮೂರ್ತಿ ದೇವಸ್ಥಾನ. ಆರಂಭದಲ್ಲಿ ದೇವಸ್ಥಾನ ಔತಣ ಕೂಟವನ್ನು ಆಯೋಜಿಸಲು ನಿರ್ಧರಿಸಿತ್ತು. ಆದರೆ ಕೊನೆಗೆ ಇಫ್ತಾರ್ ಕೂಟ ನಡೆಸುವ ತೀರ್ಮಾನವನ್ನು ತೆಗೆದುಕೊಂಡಿತು.

ಸುಮಾರು 500 ಜನ ಈ ಇಫ್ತಾರ್ ಕೂಟದಲ್ಲಿ ಪಾಲ್ಗೊಂಡಿದ್ದರು. ಇಲ್ಲಿ ಸಸ್ಯಾಹಾರಿ ಪದಾರ್ಥಗಳನ್ನು ಮಾತ್ರ ಮುಸ್ಲಿಂ ಸಮುದಾಯದವರಿಗೆ ಬಡಿಸಲಾಯಿತು.[ರಂಜಾನ್: ಉಪವಾಸ ವ್ರತಕ್ಕೆ ಯಾರ್ಯಾರಿಗಿದೆ ವಿನಾಯಿತಿ?]

Kerala temple organises 'iftar' for Muslims in holy month of Ramadan

ಆರಂಭದಲ್ಲಿ ಈ ದೇವಸ್ಥಾನ ಕಡೆಗಣನೆಗೆ ಒಳಪಟ್ಟಿತ್ತು. ನಂತರ ದೇವಸ್ಥಾದ ಆಡಳಿತ ಮಂಡಳಿ ಇದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶ ಕಾರ್ಯಕ್ರಮ ಕೈಗೆತ್ತಿಕೊಂಡಿತು. ಇದಕ್ಕೆ ಮುಸ್ಲಿಂ ಸಮುದಾಯದವರೂ ಕೈ ಜೋಡಿಸಿದ್ದರು. ಈ ಮೂಲಕ ಶತಮಾನಗಳಷ್ಟು ಹಳೆಯ ದೇವಸ್ಥಾನದಲ್ಲಿ ನರಸಿಂಹ ಅವತಾರದಲ್ಲಿರುವ ವಿಷ್ಣುವಿನ ವಿಗ್ರಹವನ್ನು ಭಾನುವಾರ ಪ್ರತಿಷ್ಠಾಪನೆ ಮಾಡಲಾಗುತ್ತದೆ.[ಮುಜಾಫರ್ ನಗರ್ ಜೈಲಿನಲ್ಲಿ ಹಿಂದೂಗಳಿಂದಲೂ ರಂಜಾನ್ ಉಪವಾಸ]

ಎರಡೂ ಸಮುದಾಯದ ಯುವಕರು ದೇವಸ್ಥಾನದ ನಿರ್ಮಾಣದಲ್ಲಿ ಕೈ ಜೋಡಿಸಿದ್ದರು. ಇದೀಗ ಇಫ್ತಾರ್ ಕೂಟದಲ್ಲಿ ಜತೆಯಾಗಿ ಪಾಲ್ಗೊಂಡಿದ್ದಾರೆ. ಈ ಮೂಲಕ ಧಾರ್ಮಿಕ ಸಾಮರಸ್ಯವನ್ನು ದೇವಸ್ಥಾನ ಆಡಳಿತ ಮಂಡಳಿ ಮತ್ತು ಅಲ್ಲಿನ ಮುಸ್ಲಿಂ ಸಮುದಾಯದವರು ಸಾರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+