ಮುಜಾಫರ್ ನಗರ್ ಜೈಲಿನಲ್ಲಿ ಹಿಂದೂಗಳಿಂದಲೂ ರಂಜಾನ್ ಉಪವಾಸ

ಲಖನೌ, ಮೇ 30: ರಂಜಾನ್ ಉಪವಾಸ ತುಂಬ ಕಟ್ಟುನಿಟ್ಟಾಗಿ ಮಾಡುತ್ತಾರೆ ಮುಸ್ಲಿಮರು. ಉತ್ತರಪ್ರದೇಶ ಮುಜಾಫರ್ ನಗರದ ಜೈಲಿನಲ್ಲಿ ಮುಸ್ಲಿಮರ ಜತೆಗೆ ಹಿಂದೂಗಳು ಕೂಡ ರೋಜಾ ಉಪವಾಸ ಮಾಡುತ್ತಿದ್ದಾರೆ. ಮೂವತ್ತೆರಡು ಹಿಂದೂ ಖೈದಿಗಳು ಜೈಲಿನಲ್ಲಿರುವ 1,174 ಮುಸ್ಲಿಂ ಖೈದಿಗಳ ಜತೆಗೂಡಿ ರೋಜಾ ಉಪವಾಸ ಮಾಡುತ್ತಿದ್ದಾರೆ.

ಹಾಲು ಹಾಗೂ ಒಣ ಹಣ್ಣುಗಳನ್ನು ಇಫ್ತಾರ್ ಗಾಗಿ ಒದಗಿಸಲಾಗಿದೆ. ಒಟ್ಟಾರೆ ಎರಡು ಸಾವಿರದ ಆರು ನೂರು ಖೈದಿಗಳ ಪೈಕಿ ಮೂವತ್ತೆರಡು ಹಿಂದೂ ಹಾಗೂ 1,174 ಮುಸ್ಲಿಂ ಖೈದಿಗಳು ಉಪವಾಸ ಮಾಡುತ್ತಿದ್ದಾರೆ. ಜೈಲು ಸೂಪರಿಂಟೆಂಡೆಂಟ್ ರಾಕೇಶ್ ಸಿಂಗ್ ಮಾತನಾಡಿ, ಜೈಲು ಅಧಿಕಾರಿಗಳು ರೋಜಾ ಉಪವಾಸ ಮಾಡುವವರಿಗಾಗಿ ವಿಶೇಷ ವ್ಯವಸ್ಥೆ ಮಾಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.[ಶನಿವಾರದಿಂದ ಕರಾವಳಿ, ಸೌದಿಯಲ್ಲಿ ರಂಜಾನ್ ಆರಂಭ; ಉಳಿದೆಡೆ ಭಾನುವಾರ]

Hindu and Muslim prisoners observe 'Roza' in Muzaffarnagar jail

ಯಾವ ಜಾಗವು ಕೋಮು ಗಲಭೆಯಿಂದ ಸುದ್ದಿಯಾಗಿತ್ತೋ ಅದೇ ಜಾಗದಲ್ಲೀಗ ಸೌಹಾರ್ದದ ಬೆಳಕು ಕಾಣುತ್ತಿದೆ. ನಾಲ್ಕು ವರ್ಷದ ಹಿಂದೆ ಇಲ್ಲಿ ನಡೆದಿದ್ದ ಕೋಮು ಗಲಭೆಯಲ್ಲಿ ನಲವತ್ತೆರಡು ಮುಸ್ಲಿಮರು ಹಾಗೂ ಇಪ್ಪತ್ತು ಹಿಂದೂಗಳು ಮೃತಪಟ್ಟಿದ್ದರು. ತೊಂಬತ್ಮೂರು ಮಂದಿ ಗಾಯಗೊಂಡು, ಐವತ್ತು ಸಾವಿರಕ್ಕೂ ಹೆಚ್ಚು ಮಂದಿ ಈ ಪ್ರದೇಶವನ್ನೇ ಬಿಟ್ತು ತೆರಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+