Kerala SSLC Result: ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೊರಬಿತ್ತು, ಈ ಜಿಲ್ಲೆಗೆ ಮೊದಲನೇ ಸ್ಥಾನ!
ಎಸ್‌ಎಸ್‌ಎಲ್‌ಸಿ ಫಲಿತಾಂಶ ಇದೀಗ ತಾನೆ ಹೊರಬಿದ್ದಿದೆ, ಲಕ್ಷ ಲಕ್ಷ ವಿದ್ಯಾರ್ಥಿಗಳು ಕಾದು ಕುಳಿತಿದ್ದ SSLC ರಿಸಲ್ಟ್ ಇಂದು ಘೋಷಣೆ ಆಗಿದೆ. ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವ & ಭವಿಷ್ಯದ ಭಾರತಕ್ಕೆ ವಿಜ್ಞಾನಿಗಳು, ಚಿಂತಕರು, ಶಿಕ್ಷಕರು, ನೌಕರರು, ಸಾಧಕರನ್ನು ನೀಡುವ ಎಸ್‌ಎಸ್‌ಎಲ್‌ಸಿ ಫಲಿತಾಂಶ ಇಂದು ಘೋಷಣೆ ಆಗಿದೆ. ಹಾಗಾದರೆ ಯಾವ ಜಿಲ್ಲೆಗೆ ಇದೀಗ ಪ್ರಥಮ ಸ್ಥಾನ ಸಿಕ್ಕಿದೆ? ಮುಂದೆ ಓದಿ.
ಪ್ರತಿಯೊಬ್ಬ ವಿದ್ಯಾರ್ಥಿಗೂ SSLC ಎನ್ನುವುದು ಒಂದು ಪ್ರಮುಖ ಘಟ್ಟ. ಯಾಕೆ ಅಂದರೆ, ಇಲ್ಲಿ ಪಾಸ್ ಆದ ನಂತರವೇ ವಿದ್ಯಾರ್ಥಿಯು ಕಾಲೇಜು ಹಂತಕ್ಕೆ ಹೋಗುವುದು. ಹೀಗಾಗಿ, ಪ್ರತಿಯೊಬ್ಬ ವಿದ್ಯಾರ್ಥಿ ಭವಿಷ್ಯದಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶವೇ ಪ್ರಮುಖ ಘಟ್ಟವಾಗಿದೆ. ಇನ್ನು ಹಲವು ತಿಂಗಳಿಂದ ವಿದ್ಯಾರ್ಥಿಗಳು SSLC ಪರೀಕ್ಷೆ ಬರೆದು, ರಿಸಲ್ಟ್ ನೋಡೋದಕ್ಕೆ ಕಾಯುತ್ತಾ ಕುಳಿತಿದ್ದರು. ಇಂದು ಬಹು ನಿರೀಕ್ಷಿತ ಫಲಿತಾಂಶ ಹೊರಬಿದ್ದಿದೆ. ಅಂದಹಾಗೆ, ಇದೀಗ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಯಾವ ವೆಬ್‌ಸೈಟ್‌ನಲ್ಲಿ ನೋಡಬಹುದು ಗೊತ್ತೆ? ಈ ಬಾರಿ ಯಾವ ಜಿಲ್ಲೆಗೆ ಮೊದಲನೇ ಸ್ಥಾನ ಸಿಕ್ಕಿದೆ? ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

SSLC ಪರೀಕ್ಷೆಯಲ್ಲಿ ಈ ಜಿಲ್ಲೆಗೆ ಮೊದಲ ಸ್ಥಾನ!
ಇದೀಗ ಹೊರಬಿದ್ದಿರುವ SSLC ಪರೀಕ್ಷೆಯಲ್ಲಿ ಕೊಟ್ಟಾಯಂ ಜಿಲ್ಲೆಯು ಮೊದಲನೇ ಸ್ಥಾನಕ್ಕೆ ಮುತ್ತಿಟ್ಟಿದೆ. ಹೌದು ಇದೀಗ ಹೊರಬಿದ್ದ ಫಲಿತಾಂಶ ಕೇರಳ ಎಸ್‌ಎಸ್‌ಎಲ್‌ಸಿ ಪರೀಕ್ಷೆಯದ್ದು. ಯಾಕಂದ್ರೆ ಕರ್ನಾಟಕದ ಪಕ್ಕದ ರಾಜ್ಯವಾದ ಕೇರಳದಲ್ಲಿ ಕೂಡ 10ನೇ ತರಗತಿಯನ್ನು ಈ ರೀತಿ SSLC ಎಂದೇ ಕರೆಯಲಾಗುತ್ತೆ. ಹಾಗೇ ಕೇರಳದಲ್ಲಿ ಈ ಬಾರಿ ಕೂಡ ಅತ್ಯುತ್ತಮವಾದ ಫಲಿತಾಂಶ ಬಂದಿದೆ.
ಕೇರಳದಲ್ಲಿ ಈ ಬಾರಿ ಶೇಕಡಾ 99.69ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದು, ಇದು ಇಡೀ ದೇಶದಲ್ಲೇ ಅತ್ಯುತ್ತಮ ಎನ್ನಲಾಗಿದೆ. ಹಾಗೇ 2023ರಲ್ಲಿ ಶೇ. 99.70 ಮತ್ತು 2022ರಲ್ಲಿ ಶೇಕಡಾ 99.26ರಷ್ಟು ರಿಸಲ್ಟ್ ಬಂದಿತ್ತು. ಇದೀಗ ಒಟ್ಟಾರೆ 99.69ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದು, ಕೊಟ್ಟಾಯಂ ಜಿಲ್ಲೆಗೆ ಮೊದಲ ಸ್ಥಾನ & ತಿರುವನಂತಪುರ ಜಿಲ್ಲೆಗೆ 2ನೇ ಸ್ಥಾನ ಸಿಕ್ಕಿದೆ. ಹಾಗಾದ್ರೆ ಕರ್ನಾಟಕದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಯಾವಾಗ? ಆ ಮಾಹಿತಿಗೆ ಮುಂದೆ ಓದಿ.
ಕರ್ನಾಟಕದಲ್ಲೂ ಎಸ್‌ಎಸ್‌ಎಲ್‌ಸಿ ಫಲಿತಾಂಶ!
2023 & 2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಒಟ್ಟು 2750 ಪರೀಕ್ಷಾ ಕೇಂದ್ರಗಳಲ್ಲಿ 8.69 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗಾಗಿ ನೋಂದಣಿ ಮಾಡಿಕೊಂಡಿದ್ದರು. ಇದರಲ್ಲಿ 4.41 ಲಕ್ಷ ಬಾಲಕರು, 4.28 ಲಕ್ಷ ಬಾಲಕಿಯರು ಸೇರಿದ್ದರು. ಈಗ ಇವರೆಲ್ಲರ ಭವಿಷ್ಯ ನಿರ್ಧಾರ ಮಾಡುವ ಫಲಿತಾಂಶವು ಬಿಡುಗಡೆ ಆಗಲು ಕೆಲವೇ ಗಂಟೆ ಬಾಕಿ ಇದೆ. ಮೇ 09 ರಂದು SSLC ಫಲಿತಾಂಶ ಬಿಡುಗಡೆ ಆಗಲಿದೆ ಎಂದು, ಅಧಿಕೃತ ಘೋಷಣೆ ಮಾಡಲಾಗಿದೆ. ಹಾಗಾದ್ರೆ ಯಾವ ಯಾವ ವೆಬ್‌ಸೈಟ್ ಮೂಲಕ ನೀವು ಎಸ್‌ಎಸ್‌ಎಲ್‌ಸಿ ಫಲಿತಾಂಶ ವೀಕ್ಷಣೆ ಮಾಡಬಹುದು ಗೊತ್ತೆ? ಆ ಬಗ್ಗೆ ಸಂಪೂರ್ಣ ಮಾಹಿತಿಗೆ ಮುಂದೆ ಓದಿ.
ಕರ್ನಾಟಕ ರಾಜ್ಯವೇ ಬೆಸ್ಟ್!
ಶೈಕ್ಷಣಿಕ ಗುಣಮಟ್ಟ ವಿಚಾರದಲ್ಲಿ ಕರ್ನಾಟಕ ದೇಶದಲ್ಲೇ ದೊಡ್ಡ ಹೆಸರು ಪಡೆದಿದೆ. ಹೀಗಾಗಿ ಕರ್ನಾಟಕದ ಎಸ್‌ಎಸ್‌ಎಲ್ ಫಲಿತಾಂಶವು, ಇಡೀ ದೇಶದ ಗಮನವನ್ನ ಸೆಳೆದಿದೆ. ಯಾಕಂದ್ರೆ ಕರ್ನಾಟಕದಲ್ಲಿ ಅದ್ರಲ್ಲೂ ನಮ್ಮ ಬೆಂಗಳೂರಿನಲ್ಲಿ ಬೇರೆ ಬೇರೆ ರಾಜ್ಯದ ವಿದ್ಯಾರ್ಥಿಗಳು ಕೂಡ ಓದುತ್ತಿದ್ದಾರೆ. ಇದೀಗ 2023 & 2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ ಆಗಲಿದೆ. ಹೀಗಾಗಿ ನಾಳೆ ಬಹುಮುಖ್ಯ ಸುದ್ದಿಗೋಷ್ಠಿ ನಡೆಸಲು ಇದೀಗ ಕರ್ನಾಟಕ ಪರೀಕ್ಷಾ ಮಂಡಳಿ ಸಿದ್ಧತೆ ನಡೆಸಿದೆ. ಅಲ್ಲದೆ ಈ ಕುರಿತು ಅಧಿಕೃತವಾಗಿ ನೋಟಿಫಿಕೇಷನ್ ಕೂಡ ನೀಡಲಾಗಿದೆ.
ಎಸ್‌ಎಸ್‌ಎಲ್‌ಸಿ ರಿಸಲ್ಟ್ ಬಂದೇ ಬಿಡ್ತು!
SSLC ಪರೀಕ್ಷೆ ಫಲಿತಾಂಶದ ಬಗ್ಗೆ ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ ನೀಡಿರುವ ಸೂಚನೆ ಪ್ರಕಾರ, 'ಮಾರ್ಚ್ / ಏಪ್ರಿಲ್ 2024ರ ಎಸ್.ಎಸ್.ಎಲ್.ಸಿ ಪರೀಕ್ಷೆ-1 ನ್ನು ದಿನಾಂಕ: 25.03.2024 ರಿಂದ 06.04.2024 ರವರೆಗೆ ನಡೆಸಲಾಯಿತು. ಎಲ್ಲಾ ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವು ಮುಕ್ತಾಯವಾಗಿರುತ್ತದೆ. ಎಸ್.ಎಸ್.ಎಲ್.ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಿಸುವ ಸಂಬಂಧ ದಿನಾಂಕ: 09.05.2024 ರಂದು ಬೆಳಗ್ಗೆ 10.30 ಗಂಟೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ, 6ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು -560003. ಇಲ್ಲಿ ಸುದ್ದಿಗೋಷ್ಠಿ ಕರೆಯಲಾಗಿದೆ. ಫಲಿತಾಂಶ https://karresults.nic.in ಜಾಲತಾಣದಲ್ಲಿ ದಿನಾಂಕ: 09.05.2024ರ ಬೆಳಗ್ಗೆ 10.30 ಗಂಟೆಯ ನಂತರ ವೀಕ್ಷಿಸಬಹುದಾಗಿದೆ.' ಎಂದು ಮಾಹಿತಿ ನೀಡಲಾಗಿದೆ.












Click it and Unblock the Notifications