ಕೇರಳದಲ್ಲಿ 7 ಅಪ್ರಾಪ್ತ -ಅನಾಥ ಬಾಲಕಿಯರ ಮೇಲೆ ಸರಣಿ ರೇಪ್

ವಯನಾಡ್ ಜಿಲ್ಲೆಯ ಮುಟ್ಟಿಲ್ ನಲ್ಲಿರುವ ಅನಾಥಾಶ್ರಮದಲ್ಲಿ 15 ವರ್ಷದೊಳಗಿನ ಏಳು ಬಾಲಕಿಯರ ಮೇಲೆ ನಡೆದ ಸರಣಿ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ 6 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ತಿರುವನಂತಪುರಂ, ಮಾರ್ಚ್ 7: ವಯನಾಡ್ ಜಿಲ್ಲೆಯ ಮುಟ್ಟಿಲ್ ನಲ್ಲಿರುವ ಅನಾಥಾಶ್ರಮದಲ್ಲಿ 15 ವರ್ಷದೊಳಗಿನ ಏಳು ಬಾಲಕಿಯರ ಮೇಲೆ ನಡೆದ ಸರಣಿ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ 6 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೂ ಮೂರು ಜನ ತಲೆ ಮರೆಸಿಕೊಂಡಿದ್ದು ಹುಡುಕಾಟ ಬಿರುಸುಗೊಳಿಸಿದ್ದಾರೆ.

ಬಾಲಕಿಯರ ಮೇಲೆ ನಡೆದ ದೌರ್ಜನ್ಯ ಘಟನೆಗೆ ಸಂಬಂಧಿಸಿದಂತೆ ಅನಾಥಾಶ್ರಮದ ಆಡಳಿತ ಮಂಡಳಿ ದೂರು ನೀಡಿದ್ದು ಒಟ್ಟು 11 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯಿದೆಯ ಅಡಿಯಲ್ಲೂ ಪ್ರಕರಣ ದಾಖಲಾಗಿದೆ.[ಕೇರಳದಲ್ಲಿ 24 ವರ್ಷ ವಯಸ್ಸಿನ ಗಗನಸಖಿ ಆತ್ಮಹತ್ಯೆ]

Kerala: Six persons arrested for raping minor girls

15 ವರ್ಷದೊಳಗಿನ ಎಲ್ಲಾ ಬಾಲಕಿಯರ ಹೇಳಿಕೆಗಳನ್ನೂ ದಾಖಲಿಸಿಕೊಳ್ಳಲಾಗಿದ್ದು ವೈದ್ಯಕೀಯ ತನಿಖೆಯನ್ನೂ ಪೂರ್ಣಗೊಳಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಯುವಕರ ಗ್ಯಾಂಗ್ ಅಪ್ರಾಪ್ತರಿಗೆ ಆಮಿಷ ತೋರಿಸಿ ಸೆಳೆದುಕೊಳ್ಳುತ್ತಿತ್ತು. ನಂತರ ತಮ್ಮ ಕೃತ್ಯಕ್ಕೆ ಬಳಸಿಕೊಳ್ಳುತ್ತಿತ್ತು. ಆರಂಭದಲ್ಲಿ ನೀಲಿ ಚಿತ್ರಗಳನ್ನು ತೋರಿಸುತ್ತಿದ್ದರು, ನಂತರ ಅವರ ಮೇಲೆ ಲೈಂಗಿಕ ದೌರ್ಜನ್ಯಗಳನ್ನು ನಡೆಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಘಟನೆ ಬೆಳಕಿಗೆ ಬಂದಿದ್ದು ಹೇಗೆ?

ಅನಾಥಾಶ್ರಮದ ಯುವತಿಯೊಬ್ಬಳು ಹತ್ತಿರದ ಅಂಗಡಿಯಿಂದ ಬರುತ್ತಿರುವದನ್ನು ಅಲ್ಲಿನ ಸಿಬ್ಬಂದಿ ಗಮನಿಸಿದ್ದಾರೆ. ನಂತರ ಸಿಬ್ಬಂದಿಗಳು ಪ್ರಶ್ನಿಸಿದಾಗ ಯುವತಿ ನಡೆದಿದ್ದೆಲ್ಲವನ್ನೂ ಬಾಯಿ ಬಿಟ್ಟಿದ್ದಾಳೆ. ಹೀಗೆ ಘಟನೆ ಬೆಳಕಿಗೆ ಬಂದಿದೆ.[ನಟಿಯ ಲೈಂಗಿಕ ದೌರ್ಜನ್ಯ : ಸುನಿಗೆ ಸುಳ್ಳು ಪತ್ತೆ ಪರೀಕ್ಷೆ]

ಕಣ್ಣೂರು ಜಿಲ್ಲೆಯ ಕೊಟ್ಟಿಯೂರಿನಲ್ಲಿ ಪಾದ್ರಿಯೊಬ್ಬರು 16 ವರ್ಷದ ಯುವತಿಗೆ ಲೈಂಗಿಕ ದೌರ್ಜನ ಎಸಗಿದ ಘಟನೆ ಬೆಳಕಿಗೆ ಬಂದಿತ್ತು. ಇದೀಗ 7 ಬಾಲಕಿಯರ ಮೇಲೆ ದೌರ್ಜನ್ಯ ನಡೆದ ಘಟನೆಗಳು ಹೊರ ಬಂದಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+