ಕೇರಳ: ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ, ಕೈಸ್ತ ಪಾದ್ರಿ ಬಂಧನ

Posted By:
Subscribe to Oneindia Kannada

ತಿರುವನಂತಪುರಂ, ಜನವರಿ 02: ಕಿಂಗ್ಸ್ ಡೇವಿಡ್ ಇಂಟರ್ ನ್ಯಾಷನಲ್ ಶಾಲೆಯ ಮುಖ್ಯೋಪಾಧ್ಯಾಯರಾಗಿರುವ ಪಾದ್ರಿ ಬಾಸಿಲ್ ಕುರಿಯೊಕೊಸೆ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಶಾಲೆಯ ವಿದ್ಯಾರ್ಥಿಯೊಬ್ಬನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪವನ್ನು ಪಾದ್ರಿ ಹೊತ್ತುಕೊಂಡಿದ್ದಾರೆ.

10 ವರ್ಷದ ವಿದ್ಯಾರ್ಥಿಯನ್ನು ಲೈಂಗಿಕವಾಗಿ ಬಳಸಿಕೊಂಡ ಪಾದ್ರಿ ನಂತರ, ಈ ಬಗ್ಗೆ ಯಾರಿಗೂ ಹೇಳದಂತೆ ಬೆದರಿಕೆ ಒಡ್ಡಿದ್ದರು. ಆದರೆ, ಈ ವಿಷಯ ವಿದ್ಯಾರ್ಥಿಯ ಪೋಷಕರಿಗೆ ತಿಳಿದು ಬಂದಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ.

Kerala priest, principal of international school, arrested for molesting 10-year-old boy

ಇದೊಂದು ಬೋರ್ಡಿಂಗ್ ಶಾಲೆಯಾಗಿದ್ದು, 10 ವರ್ಷ ವಯಸ್ಸಿನ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯವಾಗಿದೆ ಎಂದು ವಿದ್ಯಾರ್ಥಿಯ ಸೋದರರೊಬ್ಬರು ದೂರು ನೀಡಿದ್ದಾರೆ.ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು, ಶಾಲೆಯ ಮುಖ್ಯೋಪಾಧ್ಯಾಯರನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಡಿಸೆಂಬರ್ 21ರ ರಾತ್ರಿ ಈ ಘಟನೆ ನಡೆದಿದ್ದು, ಹಾಸ್ಟೆಲ್ ನಲ್ಲಿ ಉಳಿದ ವಿದ್ಯಾರ್ಥಿಗಳು ಕ್ರಿಸ್ಮಸ್ ಹಾಲಿಡೇಗೊಂದು ತಮ್ಮಮ್ಮ ಊರಿಗೆ ಹೋಗಿದ್ದರು. ಈ ಸಂದರ್ಭದಲ್ಲಿ ವಿದ್ಯಾರ್ಥಿ ಜತೆಗೆ ರಾತ್ರಿ ಕಳೆದಿದ್ದನ್ನು ಒಪ್ಪಿಕೊಂಡಿರುವ ಪಾದ್ರಿ, ಲೈಂಗಿಕ ಕಿರುಕುಳ ನೀಡಿಲ್ಲ ಎಂದಿದ್ದಾರೆ. ಕುನ್ನಥುನಾಡ್ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kerala priest, principal Basil Kuriakose of Kings David International School, was arrested on Sunday for molesting 10-year-old boy
Please Wait while comments are loading...