ಮಗಳು ಅಂತರ್ಜಾತಿ ವಿವಾಹವಾಗಿದ್ದಕ್ಕೆ ಅರ್ಚಕ ತಂದೆ ಸಸ್ಪೆಂಡ್: ಮುಂದೇನಾಯ್ತು? ಇಲ್ಲಿದ ವಿವರ

ಇತ್ತೀಚಿನ ದಿನಗಳಲ್ಲಿ ಅಂತರ್ಜಾತಿ ವಿವಾಹಗಳ ಸಂಖ್ಯೆ ಹೆಚ್ಚಾಗುತ್ತಲಿವೆ. ಆದರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ಮಗಳು ಅಂತರ್ಜಾತಿ ವಿವಾಗ ಆಗಿದ್ದಕ್ಕೆ ಅರ್ಚಕನಾಗಿ ಕೆಲಸ ಮಾಡುತ್ತಿದ್ದ ಆಕೆಯ ತಂದೆಯನ್ನು ಕೆಲಸದಿಂದ ಸಸ್ಪೆಂಡ್ ಮಾಡಿದ್ದಾರೆ. ಹಾಗಾದ್ರೆ ಇಲ್ಲಿದೆ ನೋಡಿ ಈ ಕುರಿತ ಸಂಪೂರ್ಣ ಮಾಹಿತಿ.

ಕೇರಳದ ಕಣ್ಣೂರಿನಲ್ಲಿ ಒಂದು ವಿಚಿತ್ರ ಹಾಗೂ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ತನ್ನ ಮಗಳು ಮೇಲ್ಜಾತಿ ಸಮುದಾಯದ ಯುವಕನನ್ನು ಮದುವೆಯಾಗಿದ್ದಕ್ಕೆ ಅರ್ಚಕ ತಂದೆಯನ್ನು ಕೆಲಸದಿಂದ ಅಮಾನತು ಮಾಡಿರುವ ಘಟನೆ ಕೇರಳದ ಕಣ್ಣೂರಿನಲ್ಲಿರುವ ಮುಚಿಲೋಟ್ ಭಗವತಿ ದೇವಸ್ಥಾನದಲ್ಲಿ ನಡೆದಿದೆ. ಸಿ.ವಿ. ರಾಜನ್. ಸಂಸ್ಪೆಂಡ್ ಆದ ಅರ್ಚಕರಾಗಿದ್ದಾರೆ.

Kerala Priest C V Rajan Suspended After Daughter s Inter-Caste Marriage Know Complete details

ಸಿ.ವಿ.ರಾಜನ್.ಇವರು ಕಳೆದ 30 ವರ್ಷಗಳಿಂದ ಮುಚಿಲೋಟ್ ಭಗವತಿ ದೇವಸ್ಥಾನದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದರು. ಮಾರ್ಚ್ 15ರಂದು ಇವರ ಮಗಳು ಮೇಲ್ಜಾತಿ ಸಮುದಾಯಕ್ಕೆ ಸೇರಿದ ಯುವಕನೊಂದಿಗೆ ಮದುವೆಯಾಗಿದ್ದರು. ಮಗಳ ವಿವಾಹ ನಿಶ್ಚಿತಾರ್ಥ ನಡೆದಾಗಲೇ ದೇವಸ್ಥಾನದ ಟ್ರಸ್ಟ್ ಆಡಳಿತ ಮಂಡಳಿಯು ರಾಜನ್ ಅವರಿಗೆ ದೇವಾಲಯದಿಂದ ದೂರವಿರಬೇಕೆಂದು ಎಚ್ಚರಿಕೆ ನೀಡಿತ್ತು. ಮದುವೆ ಪೂರ್ಣಗೊಂಡ ಬಳಿಕ ಅವರನ್ನು ಸೇವೆಯಿಂದಲೇ ವಜಾಗೊಳಿಸಲಾಗಿದೆ.

ಇನ್ನೂ ಈ ರೀತಿಯ ಅನ್ಯಾಯದ ವಿರುದ್ಧ ಸಿ.ವಿ.ರಾಜನ್ ಅವರು ಈಗ ಮಲಬಾರ್ ದೇವಸ್ವಂ ಮಂಡಳಿಯ ಉಪ ಆಯುಕ್ತರಿಗೆ ಅಧಿಕೃತ ದೂರು ಸಲ್ಲಿಕೆ ಮಾಡಿದ್ದಾರೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+