11 ಪುರುಷರನ್ನು ವರಿಸಿದ್ದ ಮಹಿಳೆ ಬಂಧಿಸಿದ ಪೊಲೀಸರು

Posted By:
Subscribe to Oneindia Kannada

ನೋಯ್ಡಾ, ಡಿಸೆಂಬರ್ 19: 11 ಪುರುಷರನ್ನು ಮದುವೆಯಾಗಿ ಅವರಿಂದ ಲಕ್ಷಾಂತರ ಹಣ, ಚಿನ್ನಾಭರಣ ದೋಚಿದ ಮಹಿಳೆಯನ್ನು ಕೇರಳದ ಪೊಲೀಸರು ನೋಯ್ಡಾದಲ್ಲಿ ಬಂಧಿಸಿದ್ದಾರೆ. ಕೊಚ್ಚಿ ಮೂಲದ ಉದ್ಯಮಿಯೊಬ್ಬರು ನೀಡಿದ್ದ ದೂರಿನ ಮೇರೆ ದಾಳಿ ನಡೆಸಿದ ಪೊಲೀಸರು, ಮೇಘಾ ಭಾರ್ಗವ್ ಎಂಬ ಮಹಿಳೆ ಹಾಗೂ ಆಕೆಯ ಇಬ್ಬರು ಸಹಚರರನ್ನು ವಶಕ್ಕೆ ಪಡೆದಿದ್ದಾರೆ.

ಕೊಚ್ಚಿ ನಿವಾಸಿ ಲಾರೆನ್‌ ಜಸ್ಟೀನ್‌ ಎಂಬ ಉದ್ಯಮಿಯನ್ನು ವರಿಸಿದ್ದ ಮೇಘಾನಾ ಅವರು 15 ಲಕ್ಷ ರು ದೋಚಿ ಪರಾರಿಯಾಗಿದ್ದರು. ಆಕೆಯ ವಿರುದ್ಧ ಕಳೆದ ಅಕ್ಟೋಬರ್‌ನಲ್ಲಿ ಪೊಲೀಸರಿಗೆ ದೂರು ನೀಡಲಗಿತ್ತು. ತನ್ನ ಪತ್ನಿ ಮೇಘಾ 15 ಲಕ್ಷ ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾಗಿ ದೂರಿನಲ್ಲಿ ಹೇಳಿಕೊಂಡಿದ್ದರು.

ಈ ಬಗ್ಗೆ ತನಿಖೆ ನಡೆಸಿದ ಕೇರಳ ಪೊಲೀಸರಿಗೆ ಈಕೆ ಇನ್ನೂ 10 ಮಂದಿಗೆ ಇದೇ ರೀತಿ ಮದುವೆಯಾಟದ ಮೋಸ ಮಾಡಿರುವುದು ತಿಳಿದು ಬಂದಿದೆ. ಕೇರಳದಲ್ಲೇ ಜಸ್ಟೀನ್ ಸೇರಿದಂತೆ ನಾಲ್ವರಿಗೆ ಕೈ ಕೊಟ್ಟು ಪರಾರಿಯಾಗಿರುವುದು ಗೊತ್ತಾಗಿದೆ.

Kerala police arrrests Woman for ‘marrying’ 11 men

ಕೇರಳ ಮಾತ್ರವಲ್ಲದೇ ಮುಂಬೈ, ಪುಣೆ, ರಾಜಸ್ತಾನ ಮತ್ತು ಮಧ್ಯಪ್ರದೇಶದ ಇಂದೋರ್‌ ಸೇರಿದಂತೆ ಒಟ್ಟು 11 ಪುರುಷರನ್ನು ಮದುವೆಯಾಗಿ ವಂಚಿಸಿದ್ದಾಳೆ ಎಂಬುದನ್ನು ಅರಿತ ಪೊಲೀಸರು, ನೋಯ್ಡಾದ ಅಪಾರ್ಟ್ಮೆಂಟ್ ನಂ 1104ರಲ್ಲಿ ಆಕೆ ಇರುವುದನ್ನು ಪತ್ತೆ ಹಚ್ಚಿದ್ದಾರೆ.

ದೈಹಿಕ ಅಂಗ ವೈಕಲ್ಯ ಹೊಂದಿರುವ ಪುರುಷರನ್ನೇ ಟಾರ್ಗೆಟ್‌ ಮಾಡುತ್ತಿದ್ದ ಮೇಘನಾ, ನಂತರ ಏನೋ ಕಾರಣ ನೀಡಿ ವಿಚ್ಛೇದನ ಪಡೆದುಕೊಳ್ಳುತ್ತಿದ್ದಳು ಎಂದು ತಿಳಿದು ಬಂದಿದೆ. ಮೇಘನಾ ಹಾಗೂ ಆಕೆಯ ಸೋದರಿ ಪ್ರಾಚಿ ಹಾಗೂ ಆಕೆಯ ಪತಿ ದೇವೆಂದ್ರ ಶರ್ಮ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kerala police officers arrested 28-year-old Megha Bhargava who allegedly married 11 men duping a Kochi resident Rs 15 Lakh
Please Wait while comments are loading...