ಅಪ್ರಾಪ್ತೆ ಮೇಲೆ ರೇಪ್, ಕೇರಳದ ಪಾದ್ರಿಗೆ 40 ವರ್ಷ ಜೈಲು

Posted By:
Subscribe to Oneindia Kannada

ತ್ರಿಶ್ಶೂರ್, ಮಾ.02: ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ 35 ವರ್ಷ ವಯಸ್ಸಿನ ಪಾದ್ರಿಯೊಬ್ಬರಿಗೆ 40 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಮಂಗಳವಾರ (ಮಾರ್ಚ್ 01) ಆದೇಶ ಹೊರಡಿಸಿದೆ.

ಪೀಚಿ ಎಂಬ ಪ್ರದೇಶದಲ್ಲಿರುವ ಸಾಲ್ವೇಷನ್ ಆರ್ಮಿ ಚರ್ಚ್‌ನ ಪಾದ್ರಿಯೊಬ್ಬರು 12 ವರ್ಷದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ಜಡ್ಜ್ ಕೆಪಿ ಸುಧೀರ್ ಅವರು ಚರ್ಚ್ ನ ಪಾಸ್ಟರ್ ಸಾನಿಲ್ ಕೆ ಜೇಮ್ಸ್ ಅವರಿಗೆ 40 ವರ್ಷ ಶಿಕ್ಷೆ ಪ್ರಕಟಿಸಿದ್ದಾರೆ.

Kerala Pastor gets 40 year imprisonment for rape of minor girl

Protection of Children From Sexual Offences (ಪೋಕ್ಸೊ) ಕಾಯ್ದೆಯ ಅನ್ವಯ ದಾಖಲಾದ ಪ್ರಕರಣ ಇದಾಗಿತ್ತು. ಹೀಗಾಗಿ ಶಿಕ್ಷೆ ಪ್ರಮಾಣ ಹೆಚ್ಚಳ ವಾಗಿದೆ. ಆರೋಪಿಗೆ 20 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಜತೆಗೆ ಸಂತ್ರಸ್ತ ಬಾಲಕಿಗೆ ಸಂತ್ರಸ್ತ ಪರಿಹಾರ ನಿಧಿಯಿಂದ ಮೂರು ಲಕ್ಷ ರೂಪಾಯಿ ಪರಿಹಾರ ಧನ ನೀಡುವಂತೆ ಕೇರಳ ಸರ್ಕಾರಕ್ಕೆ ಕೋರ್ಟ್ ಆದೇಶಿಸಿದೆ.

ಕೊಟ್ಟಾಯಂನ ನೆಡುಂಕಡಂನ ಸಾನಿಲ್ ಕೆ.ಜೇಮ್ಸ್ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್ 376 (2) ಎಫ್ ಅನ್ವಯ ಹಾಗೂ ಪೋಕ್ಸೊ ಕಾಯ್ದೆಯ ಸೆಕ್ಷನ್ 4 ಮತ್ತು 5ರ ಅನ್ವಯ ಪ್ರಕರಣ ದಾಖಲಾಗಿತ್ತು.

ಐಪಿಸಿ ಕಾಯ್ದೆ ಅನ್ವಯ 20 ವರ್ಷ ಹಾಗೂ ಪೋಕ್ಸೊ ಕಾಯ್ದೆಯಡಿ 20 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ. ಪೋಕ್ಸೊ ಕಾಯ್ದೆಯಡಿ ಇಂಥ ಕಠಿಣ ಶಿಕ್ಷೆ ವಿಧಿಸಿರುವುದು ಇದೇ ಮೊದಲು ಎಂದು ವಿಶೇಷ ಸರ್ಕಾರಿ ವಕೀಲ ಪಿಯಾಸ್ ಮ್ಯಾಥ್ಯೂ ಹೇಳಿದ್ದಾರೆ.

2014ರ ಏಪ್ರಿಲ್‌ನಲ್ಲಿ ತನ್ನ ಅಧಿಕೃತ ನಿವಾಸದಲ್ಲಿ ಅತ್ಯಾಚಾರ ಮಾಡಿದ್ದ ಎಂದು ಆರೋಪಿಸಲಾಗಿತ್ತು.ಸಂತ್ರಸ್ತ ಬಾಲಕಿ, ಸಹೋದರ ಹಾಗೂ ಆರೋಪಿಯ ಮಗ ಒಟ್ಟಿಗೆ ಬೇಸಿಗೆ ರಜೆ ಕಳೆಯುವಾಗ ಈ ಕೃತ್ಯ ನಡೆದಿದೆ. ಪಾಸ್ಟರ್ ಮೇಲೆ ಇನ್ನೂ ಕೆಲ ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. (ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Trissur: A 35-year old pastor was on Tuesday, March 1 sentenced to 40 years rigorous imprisonment by a court for sexually abusing a minor girl at nearby Peechi two years ago.
Please Wait while comments are loading...