ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೈಂಗಿಕ ಕಿರುಕುಳ ಅನುಭವ ಹಂಚಿಕೊಂಡ ನಿರ್ದೇಶಕ

By Mahesh
|
Google Oneindia Kannada News

ಬೆಂಗಳೂರು, ಡಿ.1: ಮದರಸಾಗಳಲ್ಲಿ ಲೈಂಗಿಕ ಕಿರುಕುಳದ ಬಗ್ಗೆ ಕೇರಳದ ಮಹಿಳಾ ಪತ್ರಕರ್ತೆ ಬಾಯ್ಬಿಟ್ಟ ಬೆನ್ನಲ್ಲೇ ರಾಷ್ಟ್ರಪ್ರಶಸ್ತಿ ವಿಜೇತ ಮಲಯಾಳಂ ನಿರ್ದೇಶಕ ಅಲಿ ಅಕ್ಬರ್ ಅವರು ತಮಗಾದ ಕೆಟ್ಟ ಅನುಭವವನ್ನು ಹಂಚಿಕೊಂಡಿದ್ದಾರೆ.

ಮದರಸಾಗಳಲ್ಲಿನ ಅನಾಚಾರದ ಬಗ್ಗೆ ಫೇಸ್ ಬುಕ್ ನಲ್ಲಿ ಹೇಳಿಕೊಂಡ ಮೀಡಿಯಾ ಒನ್ ಸಮೂಹದ ಮಹಿಳಾ ಪತ್ರಕರ್ತೆ ವಿಪಿ ರಜೀನಾ ಅವರಿಗೆ ಬೆದರಿಕೆ ಕರೆಗಳು ಕೇಳಿ ಬಂದಿತ್ತು. [ಅಕ್ರಮ ಮದ್ರಸಾ ಮೇಲೆ ಕಣ್ಣಿಡಲು ಐಬಿಗೆ ಸೂಚನೆ]

ಕೊಳಿಕ್ಕೊಡ್ ಜಿಲ್ಲೆಯ ಸುನ್ನಿ ಮದರಸಾಗಳಲ್ಲಿ ಲೈಂಗಿಕ ಕಿರುಕುಳ ನಡೆದಿದೆ ಎಂದು ರಜೀನಾ ಹೇಳಿದ್ದರು. ರಜೀನಾ ಹೇಳಿಕೆ ಖಂಡಿಸಿದ ಸುನ್ನಿ ಮುಖಂಡ ಸುಲ್ತಾನುಲ್ ಉಲಾಮಾ ಎಪಿ ಅಬೂಬಕರ್ ಮುಸ್ಲಿಯಾರ್ ಕಾಂಥಾಪುರ್ ಅವರು ಆರೋಪ ಮಾಡುವುದು ಮುಖ್ಯವಲ್ಲ, ಸರಿಯಾದ ಸಾಕ್ಷಿ ಆಧಾರವಿದ್ದರೆ ಮಾತ್ರ ಮಾತನಾಡಬೇಕು ಎಂದಿದ್ದರು.

Ali Akbar

ಈಗ ನಿರ್ದೇಶಕ ಅಲಿ ಅಕ್ಬರ್ ಅವರ ಹೇಳಿಕೆಯನ್ನು ಖಂಡಿಸಿರುವ ಅಬೂಬಕರ್ ಅವರು, 'ನಮ್ಮ ಮದರಸಾಗಳು ಲೈಂಗಿಕ ಕಿರುಕುಳದಿಂದ ಮುಕ್ತವಾಗಿವೆ' ಎಂದಿದ್ದಾರೆ. [ಮದ್ರಸಾ ಎಂದರೇನು?]

ಅಲಿ ಆರೋಪವೇನು?: ನಾನು 8 ವಯಸ್ಸಿನಲ್ಲಿದ್ದಾಗ ಉಸ್ತಾದ್ (ಮದರಸಾ ಶಿಕ್ಷಕ) ನನಗೆ ಲೈಂಗಿಕ ಕಿರುಕುಳ ನೀಡಿದ್ದರು. ವಯನಾಡಿನ ಮೀನಂಗಡಿಯಲ್ಲಿದ್ದ ನಾನು ಆತನ ಕಿರುಕುಳ ತಾಳಲಾರದೆ ಓಡಿ ಹೋಗಬೇಕಾಯಿತು. ರಜೀನಾ ಅವರ ಫೇಸ್ ಬುಕ್ ಪೋಸ್ಟ್ ನಂತರ ಅನೇಕ ಮಂದಿಗೆ ಈ ಬಗ್ಗೆ ಹೇಳಿಕೊಳ್ಳಲು ಒಂದು ವೇದಿಕೆ ಸಿಕ್ಕಿದೆ. ಮದರಸಾಗಳಲ್ಲಿನ ಅನಾಚಾರ ದೂರಾಗಬೇಕಿದೆ. ಮದರಸಾದ ವಿದ್ಯಾರ್ಥಿಗಳಿಗೆ ಧೈರ್ಯ ಬರಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ.

ಅಲಿ ಅವರು 1996ರಲ್ಲಿ ರಬಿಯಾ ಚಾಲಿಕ್ಕುನ್ನು ಮಲಯಾಳಂ ಚಿತ್ರಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದುಕೊಂಡಿದ್ದಾರೆ. ಜ್ಯೂನ್ಮಿಯರ್ ಮಾಂಡ್ರೇಕ್, ಪೈ ಬ್ರದರ್ಸ್ ಸೇರಿದಂತೆ 20ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. (ಪಿಟಿಐ)

English summary
Days after Kerala-based woman journalist claimed to have witnessed sexual exploitations in madrasas during her childhood, a Malayalam film director Ali Akbar has made shocking revelations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X