ಕೇರಳ ನರಬಲಿ: ಗೋಡೆಗಳ ಮೇಲೆ ಚಿಮ್ಮಿದ ರಕ್ತ: ದೇಹದ ಭಾಗಗಳನ್ನು ಬೇಯಿಸಿ ತಿಂದ ದಂಪತಿ
ತಿರುವನಂತಪುರಂ ಅಕ್ಟೋಬರ್ 12: ಸಂಪತ್ತು ಮತ್ತು ಸಮೃದ್ಧಿ ಪಡೆಯಲು ದಂಪತಿ ಸೇರಿದಂತೆ ಮೂವರು ಕೇರಳದ ದೂರದ ಹಳ್ಳಿಯೊಂದರಲ್ಲಿ ಧಾರ್ಮಿಕ ಕ್ರಿಯೆಯ ಭಾಗವಾಗಿ ಇಬ್ಬರು ಮಹಿಳೆಯರನ್ನು ಬಲಿ ನೀಡಿದ್ದಾರೆ ಎನ್ನಲಾಗಿದೆ. ಬಲಿಯಾದ ಪದ್ಮಾ ಮತ್ತು ರೋಸ್ಲಿನ್ ಅವರ ದೇಹದ ಭಾಗಗಳನ್ನು ತುಂಡುಗಳಾಗಿ ಕತ್ತರಿಸಿ ಹಿತ್ತಲಿನಲ್ಲಿ ಹೂಳಲಾಗಿರುವುದು ಬಯಲಾಗಿದೆ. ಮಾಂತ್ರಿಕ ಆಚರಣೆಯ ಭಾಗವಾಗಿ ಗೋಡೆಗಳು ಮತ್ತು ನೆಲದ ಮೇಲೆ ರಕ್ತ ಚೆಲ್ಲಲಾಗಿರುವುದು ಬೆಳಕಿಗೆ ಬಂದಿದೆ.
ಬೀದಿಗಳಲ್ಲಿ ಲಾಟರಿ ಟಿಕೆಟ್‌ಗಳನ್ನು ಮಾರಾಟ ಮಾಡಿ ದಿನನಿತ್ಯದ ಜೀವನ ನಡೆಸುತ್ತಿದ್ದ ಇಬ್ಬರು ಮಹಿಳೆಯರನ್ನು ಆರೋಪಿಗಳು ಹಣಕಾಸಿನ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಅವರ ಜೀವನದಲ್ಲಿ ಸಮೃದ್ಧಿಯನ್ನು ತರಲು ಬಲಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜೊತೆಗೆ ಸಿಸಿಟಿವಿ ದೃಶ್ಯಗಳು ಇದಕ್ಕೆ ಸಾಕ್ಷಿಯಾಗಿವೆ.
ಮಂಗಳವಾರ ಪತ್ತನಂತಿಟ್ಟದ ಎಳಂತೂರು ಗ್ರಾಮದ ದಂಪತಿಗಳ ಮನೆಯ ಆವರಣದಿಂದ ಮೃತರ ಕತ್ತರಿಸಿದ ದೇಹದ ಭಾಗಗಳನ್ನು ಹೊರತೆಗೆಯಲಾಗಿದೆ. ಎಳಂಥೂರಿನಲ್ಲಿ ಎರಡು ಸ್ಥಳಗಳಲ್ಲಿ ಹೂಳುವ ಮೊದಲು ಬಲಿಪಶುಗಳ ದೇಹದ ಭಾಗಗಳನ್ನು ತುಂಡುಗಳಾಗಿ ಕತ್ತರಿಸಲಾಗಿದೆ. ಆರೋಪಿಗಳು ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೂವರು ಆರೋಪಿಗಳನ್ನು ಬುಧವಾರ ಎರ್ನಾಕುಲಂ ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಮಾನವ ಬಲಿಯ ಕಥೆ
ತನ್ನ ಸಂಗಾತಿಯೊಂದಿಗೆ ವಾಸಿಸುತ್ತಿದ್ದ ಕಾಲಡಿ ಮೂಲದ ರೋಸ್ಲಿನ್ ಜೂನ್‌ನಲ್ಲಿ ನಾಪತ್ತೆಯಾಗಿದ್ದು, ಅವರ ಮಗಳು ಕಾಣೆಯಾದ ದೂರನ್ನು ತಂದೆ ದಾಖಲಿಸಿದ್ದರು. ಇನ್ನೂ ಪದ್ಮಾ ಸೆಪ್ಟೆಂಬರ್‌ನಲ್ಲಿ ನಾಪತ್ತೆಯಾಗಿದ್ದರು. ಅವರ ಮೊಬೈಲ್ ಫೋನ್ ವಿವರಗಳು ಮತ್ತು ಟವರ್ ಸ್ಥಳಗಳನ್ನು ಆಧರಿಸಿ ಅವರನ್ನು ಪತ್ತೆ ಮಾಡಲಾಗಿದೆ. ಇದು ನರಬಲಿ ಕಥೆಯನ್ನು ಬಿಚ್ಚಿಟ್ಟಿದೆ.
"ಇಬ್ಬರು ಮಹಿಳೆಯರನ್ನು ಕೊಂದು [ದಂಪತಿಗಳ] ಮನೆ ಬಳಿ ಹೂಳಲಾಗಿದೆ. ಕೊಲೆ ಶಾಸ್ತ್ರೋಕ್ತ ನರಬಲಿ ಭಾಗವಾಗಿದೆ. ಇನ್ನೂ ಒಂದು ಪ್ರಕರಣ ವರದಿಯಾಗಿರುವ ಬಗ್ಗೆ ನಮಗೆ ಮಾಹಿತಿ ಇದೆ. ನಾವು ಸಂಪೂರ್ಣ ಪ್ರಕರಣವನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ" ಎಂದು ಕೊಚ್ಚಿ ನಗರ ಪೊಲೀಸ್ ಕಮಿಷನರ್ ನಾಗರಾಜು ಚಕಿಲಂ ಇಂಡಿಯಾ ಟುಡೇಗೆ ತಿಳಿಸಿದ್ದಾರೆ.

ಬಲಿಗಾಗಿ ಮಹಿಳೆಯರನ್ನು ಕರೆತಂದ ಏಜೆಂಟ್ ಅರೆಸ್ಟ್
ಬಂಧಿತರನ್ನು ಭಗವಲ್ ಸಿಂಗ್ ಮತ್ತು ಆತನ ಪತ್ನಿ ಲೈಲಾ ಎಂದು ಗುರುತಿಸಲಾಗಿದೆ. ಅವರಿಬ್ಬರೂ ತಿರುವಲ್ಲಾ ಮೂಲದವರಾಗಿದ್ದರು. ಅಲ್ಲದೆ, ದಂಪತಿಯ ಮನೆಗೆ ಇಬ್ಬರು ಮಹಿಳೆಯರನ್ನು ಕರೆತರಲು ಏಜೆಂಟ್ ಆಗಿ ಕಾರ್ಯನಿರ್ವಹಿಸಿದ್ದ ಪೆರುಂಬವೂರು ಮೂಲದ ಮಹಮ್ಮಂದ್ ಶಾಫಿ ಎಂಬಾತನನ್ನೂ ಬಂಧಿಸಲಾಗಿದೆ.
"ನಾನು ಅವರನ್ನು [ಭಗವಲ್] ವರ್ಷಗಳಿಂದ ಬಲ್ಲೆ. ಅವರು ನನ್ನ ಬಾಲ್ಯದ ಗೆಳೆಯ. ಅವರ ತಂದೆ ಮಸಾಜ್ ಥೆರಪಿಸ್ಟ್. ಅವರ ತಂದೆಯ ಮರಣದ ನಂತರ ಅವರು ಆ ಕೆಲಸ ಮಾಡಿದರು. ಇದ್ದಕ್ಕಿದ್ದಂತೆ, ಸುದ್ದಿ ಕೇಳಿ, ನಾವು ಆಘಾತಕ್ಕೊಳಗಾಗಿದ್ದೇವೆ. ನಮಗೆ ಇದು ಹೇಗೆ ಸಾಧ್ಯ ಎಂದು ನಂಬಲು ಸಾಧ್ಯವಾಗುತ್ತಿಲ್ಲ. ಇದರ ಹಿಂದಿನ ಕಾರಣ ಏನು ಎಂದು ತಿಳಿದಿಲ್ಲ" ಎಂದು ಅವರ ನೆರೆಯ ಬಾಹುಲೇಯನ್ ಇಂಡಿಯಾ ಟುಡೇಗೆ ತಿಳಿಸಿದರು.

ಗೋಡೆಗಳ ಮೇಲೆ ರಕ್ತ ಚೆಲ್ಲಿದ ಆರೋಪಿಗಳು
ಫೇಸ್‌ಬುಕ್ ಮೂಲಕ ದಂಪತಿ ಶಾಫಿಯನ್ನು ಭೇಟಿಯಾಗಿದ್ದರು. ಸಂಪತ್ತು ಗಳಿಸಲು ದಂಪತಿಗೆ ನರಬಲಿ ಆಚರಣೆ ಮಾಡುವಂತೆ ಶಾಫಿ ಒತ್ತಾಯಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶಾಫಿಯ ಆಜ್ಞೆಯ ಮೇರೆಗೆ ರೋಸ್ಲಿನ್ ಳನ್ನು ಕೊಂದು ಅವಳ ದೇಹವನ್ನು ಹಿತ್ತಲಿನಲ್ಲಿ ಹೂಳಲಾಯಿತು. ಮಹಿಳೆಯನ್ನು ಹಾಸಿಗೆಗೆ ಕಟ್ಟಿ ಹಾಕಿ ಆಕೆಯ ತಲೆಯನ್ನು ಒಡೆದಿದ್ದಾರೆ. ನಂತರ ದಂಪತಿಗಳು ಅವಳ ಕತ್ತು ಸೀಳಿದ್ದಾರೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ದೇಹವನ್ನು ತುಂಡುಗಳಾಗಿ ಕತ್ತರಿಸಲಾಗಿದೆ. ಧಾರ್ಮಿಕ ಕ್ರಿಯೆಯ ಭಾಗವಾಗಿ ಮನೆಯಾದ್ಯಂತ ರಕ್ತವನ್ನು ಚಿಮುಕಿಸಲಾಗಿದೆ.

ದೇಹದ ಕೆಲವು ಭಾಗಗಳನ್ನು ಬೇಯಿಸಿ ತಿಂದ ದಂಪತಿ
ಆದರೆ "ಆಚರಣೆ" ಆರ್ಥಿಕ ಸಮೃದ್ಧಿಗೆ ಕಾರಣವಾಗದ ಕಾರಣ, ದಂಪತಿಗಳು ಮತ್ತೆ ಶಾಫಿಯನ್ನು ಸಂಪರ್ಕಿಸಿದರು. ಅವರು ಇನ್ನೂ ಒಂದು ನರಬಲಿ ಕಾರ್ಯವನ್ನು ಮಾಡಲು ನಿರ್ದೇಶಿಸಿದರು. ಸೆಪ್ಟೆಂಬರ್‌ನಲ್ಲಿ ಪದ್ಮಾಳನ್ನು ಇದೇ ರೀತಿ ಕೊಂದು ಹೂತು ಹಾಕಲಾಗಿತ್ತು. ದಂಪತಿಯ ಮನೆಯ ಹಿಂದೆ ಅಗೆದಿದ್ದ ನಾಲ್ಕು ಹೊಂಡಗಳಲ್ಲಿ ಇಬ್ಬರು ಮಹಿಳೆಯರ ದೇಹದ ಭಾಗಗಳನ್ನು ಹೂಳಲಾಗಿತ್ತು.
ಶಾಫಿಯ ಸೂಚನೆಯಂತೆ ಸಂತ್ರಸ್ತರ ದೇಹದ ಕೆಲವು ಭಾಗಗಳನ್ನು ಬೇಯಿಸಿ ತಿಂದಿದ್ದೇವೆ ಎಂದು ಆರೋಪಿ ಲೈಲಾ ಪೊಲೀಸರಿಗೆ ತಿಳಿಸಿದ್ದಾರೆ. ದಂಪತಿಗಳು ತಮ್ಮ ಧಾರ್ಮಿಕ ಕ್ರಿಯೆಯಲ್ಲಿ ಮಾಟಮಂತ್ರ ಮತ್ತು ವಾಮಾಚಾರಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಓದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳವಾರ ಪೊಲೀಸರ ತಂಡವು ಆರೋಪಿಗಳನ್ನು ಎಳಂತೂರಿನ ಶಂಕಿತ ಅಪರಾಧ ಸ್ಥಳಕ್ಕೆ ಅವರ ಮುಖವನ್ನು ಮುಚ್ಚಿಕೊಂಡು ಸಾಕ್ಷ್ಯ ಸಂಗ್ರಹಿಸಲು ಕರೆತಂದಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.
-
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್












Click it and Unblock the Notifications