ಹುಡುಗಿ ಹೆಸರಿನಲ್ಲಿ ಶಾಫಿ ಹಾಕಿದ ಜಾಲ: ಪತಿ ಬದಲಿಗೆ ಬುಟ್ಟಿಗೆ ಬಿದ್ದಳು ಲೈಲಾ!
ತಿರುವನಂತಪುರಂ ಅಕ್ಟೋಬರ್ 14: ಕೇರಳ ನರಬಲಿ ಪ್ರಕರಣ ಬಗೆದಷ್ಟು ಹಲವಾರು ವಿಚಾರಗಳು ಹೊರ ಬರುತ್ತಿವೆ. ಸಂಪತ್ತು ಮತ್ತು ಸಮೃದ್ಧಿ ಪಡೆಯಲು ದಂಪತಿ ಸೇರಿದಂತೆ ಮೂವರು ಕೇರಳದ ದೂರದ ಹಳ್ಳಿಯೊಂದರಲ್ಲಿ ಧಾರ್ಮಿಕ ಕ್ರಿಯೆಯ ಭಾಗವಾಗಿ ಇಬ್ಬರು ಮಹಿಳೆಯರನ್ನು ಬಲಿ ನೀಡಿರುವ ಸುದ್ದಿ ದೇಶವನ್ನೇ ಬೆಚ್ಚಿ ಬೀಳಿಸಿದೆ.
ಪ್ರಕರಣದಲ್ಲಿ ಮಾಂತ್ರಿಕ ಪೆರುಂಬವೂರು ವೆಂಗೊಳ ವೆಝಾಪಿಲ್ಲಿ ನಿವಾಸಿ ಮುಹಮ್ಮದ್ ಶಾಫಿ (52), ಪತ್ತನಂತಿಟ್ಟ ಎಳಂತೂರ್ ಕರಂವೇಲಿ ಕಡಂಪಲ್ಲಿ ನಿವಾಸಿ ಭಗವಲ್ ಸಿಂಗ್ (68) ಮತ್ತು ಅವರ ಎರಡನೇ ಪತ್ನಿ ಲೈಲಾ ಬಂಧಿತರು. ಕಾಲಡಿಯಲ್ಲಿ ಬಾಡಿಗೆ ಮನೆಯಲ್ಲಿದ್ದ ರೋಸ್ಲಿ (49) ಮತ್ತು ಧರ್ಮಪುರಿಯ ಪದ್ಮಾ (52) ಕೊಲೆಯಾದವರು. ಜೂನ್ 8 ರಂದು ರಾತ್ರಿ ರೋಸ್ಲಿ ಮತ್ತು ಸೆಪ್ಟೆಂಬರ್ 26 ರಂದು ಪದ್ಮಾ ಹತ್ಯೆ ಮಾಡಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯಂತೆ ಪೋಸ್ ನೀಡಿ ಆರೋಪಿ ಭಗವಲ್ ಸಿಂಗ್ ಜೊತೆ ಸ್ನೇಹ ಬೆಳೆಸಿದ್ದ ಆರೋಪಿ ಶಫಿ ಆತನ ಪತ್ನಿ ಲೈಲಾಳನ್ನೂ ಬುಟ್ಟಿಗೆ ಹಾಕಿಕೊಂಡಿರುವುದು ಪೊಲೀಸ್ ತನಿಖೆಯಿಂದ ಬಯಲಾಗಿದೆ.

ಪತಿ ಬದಲಿಗೆ ಬುಟ್ಟಿಗೆ ಬಿದ್ದಳು ಪತ್ನಿ ಲೈಲಾ
ಭಗವಲ್ ಸಿಂಗ್ ಅವರನ್ನು ಯಾಮಾರಿಸಿದ್ದ ಶಫಿಗೆ ಸಿಂಗ್ ಪತ್ನಿ ಲೈಲಾ ಅವರನ್ನು ಯಾಮಾರಿಸುವುದು ಕಷ್ಟವಾಗಿರಲಿಲ್ಲ. ಸಿಂಗ್ ದಂಪತಿ ತನ್ನ ಮೊದಲ ಭೇಟಿಯಲ್ಲೇ ಶಾಫಿ ಲೈಲಾಳನ್ನೂ ಮಾತಲ್ಲಿ ಮರಳು ಮಾಡಿದ್ದ. ಸಿಂಗ್ ಮನೆಗೆ ಮಾಟಮಂತ್ರದ ನೆಪದಲ್ಲಿ ಆಗಾಗ ಭೇಟಿ ಕೂಡ ನೀಡಿರುವುದು ವಿಚಾರಣೆಯಿಂದ ಬೆಳಕಿಗೆ ಬಂದಿದೆ. ಮಾಟಮಂತ್ರದ ಹೆಸರಿನಲ್ಲಿ ಶಾಫಿ ತನ್ನ ಲೈಲಾಳ ಸಂಬಂಧ ಮುಂದುವರಿಸಿದ್ದಾನೆ. ಮಾತು ಸಲಿಗೆ ಸಂಬಂಧವನ್ನು ಬೆಳಸಿದೆ.
ಶಾಫಿ ಲೈಲಾಳೊಂದಿಗಿನ ಸಂಬಂಧವನ್ನು ಮುಂದುವರೆಸಲು ನರಬಲಿಯ ನಾಟಕವಾಡಿದ ಎಂದು ಆರೋಪಿಸಲಾಗುತ್ತಿದೆ. ಅಷ್ಟಕ್ಕೂ ಶಾಫಿ ಸಿಂಗ್ ಪತ್ನಿಯೊಂದಿಗಿನ ಸಂಬಂಧ ಮುಂದುವರೆಯಲು ಇಬ್ಬರು ಮಹಿಳೆಯರ ಬಲಿ ನಾಟಕವಾಡಿದ್ದಾನೆ ಎಂದು ಹೇಳಲಾಗುತ್ತಿದೆ. ಜೂನ್ 8 ರಂದು ರಾತ್ರಿ ರೋಸ್ಲಿ ಮತ್ತು ಸೆಪ್ಟೆಂಬರ್ 26 ರಂದು ಪದ್ಮಾ ಹತ್ಯೆ ಮಾಡಲಾಗಿದೆ. ಇಬ್ಬರು ಹತ್ಯೆಯಲ್ಲಿ ಮೂರು ತಿಂಗಳ ಅಂತರವಿದೆ. ರೋಸ್ಲಿ ಎಂಬ ಮಹಿಳೆಯ ಬಲಿ ಬಳಿಕ ತನ್ನ ಜೀವನ ಆರ್ಥಿಕವಾಗಿ ಸಮೃದ್ಧವಾಗಿರುತ್ತದೆ ಎಂದು ಭಾವಿಸಿದ್ದ ಸಿಂಗ್‌ಗೆ ನಿರಾಸೆಯಾಗಿತ್ತು. ಶಾಫಿ ಹೇಳಿದಂತೆ ಏನೂ ಸಂಭವಿಸಿರಲಿಲ್ಲ. ಮತ್ತೆ ದಂಪತಿ ಶಫಿಯನ್ನು ಸಂಪರ್ಕಿಸಿದಾಗ ಶಫಿ ಮತ್ತೊಂದು ನಾಟಕವಾಡಿದ್ದ. ಮತ್ತೊಂದು ಬಲಿ ಕೊಡಲು ಸಿಂಗ್ ಅನ್ನು ಪ್ರಚೋದಿಸಿದ್ದನು. ಅದಕ್ಕೆ ತಾನೇ ಬಲಿಯನ್ನು ಹುಡುಕಿ ತರುವುದಾಗಿ ಹೇಳಿಕೊಂಡಿದ್ದನು.

ಶಾಫಿ ಮತ್ತೊಂದು ಬಲಿಯ ನಾಟಕ
ಈ ಬಲಿ ಮಾತುಕತೆ ಯೋಜನೆಗಾಗಿ ಆಗಾಗ ಸಿಂಗ್ ಮನೆಗೆ ಬರುತ್ತಿದ್ದ ಶಾಫಿ ಲೈಲಾ ಜೊತೆ ಲವ್ವಿಡವ್ವಿ ಶುರುಮಾಡಿದ್ದನು. ತನ್ನ ಪ್ರೇಮ್ ಕಹಾನಿಯನ್ನು ಮುಂದುವರೆಸಲು ಶಾಫಿ ಮತ್ತೊಂದು ಬಲಿಯ ನಾಟಕವಾಡಿದ್ದಾನೆ. ಶಾಫಿ ಬಿಟ್ಟ ಮತ್ತೊಂದು ಬಾಣಕ್ಕೆ ಬಲಿ ಕಾ ಬರ್ಕಾ ಎಂದಂತೆ ಸಿಂಗ್ ತಲೆ ಬಾಗಿದ್ದಾನೆ.
ಬೀದಿಗಳಲ್ಲಿ ಲಾಟರಿ ಟಿಕೆಟ್‌ಗಳನ್ನು ಮಾರಾಟ ಮಾಡಿ ದಿನನಿತ್ಯದ ಜೀವನ ನಡೆಸುತ್ತಿದ್ದ ಮಹಿಳೆಯನ್ನು ಆರೋಪಿಗಳು ಹಣಕಾಸಿನ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಅವರ ಜೀವನದಲ್ಲಿ ಸಮೃದ್ಧಿಯನ್ನು ತರಲು ಬಲಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜೊತೆಗೆ ಸಿಸಿಟಿವಿ ದೃಶ್ಯಗಳು ಇದಕ್ಕೆ ಸಾಕ್ಷಿಯಾಗಿವೆ.

ಶಾಫಿ ಮಾತು ಕೇಳಿ ಕರದಲ್ಲಿಗೆ ಬಂದಿದ್ದ ಪದ್ಮಾ
ಬೀದಿಗಳಲ್ಲಿ ಲಾಟರಿ ಟಿಕೆಟ್‌ಗಳನ್ನು ಮಾರಾಟ ಮಾಡಿ ದಿನನಿತ್ಯದ ಜೀವನ ನಡೆಸುತ್ತಿದ್ದ ಪದ್ಮಾಳಿಗೆ ಶಾಫಿ ಹಣದ ಆಸೆ ತೋರಿಸಿ ಲೈಂಗಿಕ ದಂಧೆಗೆ ದೂಡಿದ್ದಾನೆ. ಹಣದಾಸೆಗೆ ಪದ್ಮಾ ಶಾಫಿ ಹಿಂದೆ ಬರಲು ಒಪ್ಪಿಕೊಂಡಿದ್ದಳು ಎಂದು ಹೇಳಲಾಗುತ್ತಿದೆ. ಪದ್ಮಾಳನ್ನು ಕರೆದುಕೊಂಡು ಬಂದಿದ್ದ ಶಾಫಿ ಪದ್ಮಾಳನ್ನು ಬಲಿಕೊಟ್ಟಿದ್ದಾನೆ.
ಲೈಲಾ ಸಿಂಗ್ ಮತ್ತು ಶಾಫಿ ಇಬ್ಬರು ಬಲಿಪಶುಗಳಲ್ಲಿ ಒಬ್ಬರಿಗೆ ಲೈಂಗಿಕ ಕಿರುಕುಳ ನೀಡಿ ಚಿತ್ರಹಿಂಸೆ ನೀಡಿ ಕೊಂದಿದ್ದಾರೆ ಎಂದು ಪೊಲೀಸರು ಹೇಳುತ್ತಾರೆ. ಶಾಫಿ ಕ್ರೌರ್ಯದಲ್ಲಿ ಆನಂದವನ್ನು ಕಾಣುವ ಮನೋರೋಗಿ ಮತ್ತು ವಿಕೃತ ವ್ಯಕ್ತಿ ಎಂದು ಪೊಲೀಸರು ತಿಳಿಸಿದ್ದಾರೆ. ನರಬಲಿ ನಂತರ ಶ್ರೀಮಂತಿಕೆ ನೀಡುವ ಭರವಸೆಯೊಂದಿಗೆ ಲೈಲಾಳನ್ನು ಬ್ರೇನ್‌ವಾಶ್ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ನಿನ್ನೆ ನ್ಯಾಯಾಲಯದ ವಿಚಾರಣೆ ವೇಳೆ ಪೊಲೀಸರು ಎರಡು ಕೊಲೆಗಳ ಸರಣಿಯನ್ನು ನೀಡಿದ್ದಾರೆ. ರೋಸ್ಲಿ ಮತ್ತು ಪದ್ಮಾ ಅವರ ಮೇಲಿನ ಭೀಕರ ದಾಳಿಗಳು ಮೂರು ತಿಂಗಳ ಅಂತರದಲ್ಲಿ ನಡೆದಿವೆ.
ಇಬ್ಬರೂ ಮಹಿಳೆಯರ ಖಾಸಗಿ ಭಾಗಗಳಲ್ಲಿ ಚಾಕುಗಳನ್ನು ಅಳವಡಿಸಲಾಗಿದೆ. ಅವರ ಕುತ್ತಿಗೆಯನ್ನು ಸೀಳಲಾಗಿದೆ. ದೇಹಗಳನ್ನು ತುಂಡುಗಳಾಗಿ ಕತ್ತರಿಸಿ ಹೂತುಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ. ಎರಡನೇ ಮಹಿಳೆ ಪದ್ಮಾಳನ್ನು ಶಾಫಿ ಚಿತ್ರಹಿಂಸೆ ನೀಡಿ ಕೊಂದಿದ್ದರು. ದೇಹವನ್ನು ಸಮಾಧಿ ಮಾಡುವ ಮೊದಲು ಭಗವಲ್ ಸಿಂಗ್ ರೋಸ್ಲಿ ಅವರ ಸ್ತನಗಳನ್ನು ಕತ್ತರಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಆರೋಪಿಗಳ 14 ದಿನಗಳ ನ್ಯಾಯಾಂಗ ಬಂಧನ
ಮಂಗಳವಾರ ಪತ್ತನಂತಿಟ್ಟದ ಎಳಂತೂರು ಗ್ರಾಮದ ದಂಪತಿಗಳ ಮನೆಯ ಆವರಣದಿಂದ ಮೃತರ ಕತ್ತರಿಸಿದ ದೇಹದ ಭಾಗಗಳನ್ನು ಹೊರತೆಗೆಯಲಾಗಿದೆ. ಎಳಂತೂರುನಲ್ಲಿ ಎರಡು ಸ್ಥಳಗಳಲ್ಲಿ ಹೂಳುವ ಮೊದಲು ಬಲಿಪಶುಗಳ ದೇಹದ ಭಾಗಗಳನ್ನು ತುಂಡುಗಳಾಗಿ ಕತ್ತರಿಸಲಾಗಿದೆ. ದೇಹದ ಮಾಂಸವನ್ನೂ ತಿಂದಿದ್ದಾರೆನ್ನಲಾಗುತ್ತಿದೆ. ಆರೋಪಿಗಳು ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೂವರು ಆರೋಪಿಗಳನ್ನು ಬುಧವಾರ ಎರ್ನಾಕುಲಂ ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಮೂವರೂ ಆರೋಪಿಗಳನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.












Click it and Unblock the Notifications