ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿರುವನಂತಪುರಂ ಮೇಯರ್‌ಗೆ ಕೇರಳ ಹೈಕೋರ್ಟ್‌ ನೋಟಿಸ್‌

|
Google Oneindia Kannada News

ತಿರುವನಂತಪುರಂ, ನವೆಂಬರ್‌ 10: ಕೇರಳ ಹೈಕೋರ್ಟ್ ಗುರುವಾರ, ನವೆಂಬರ್ 10ರಂದು ತಿರುವನಂತಪುರಂ ಮೇಯರ್ ಆರ್ಯ ರಾಜೇಂದ್ರನ್ ಮತ್ತು ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ (ಎಲ್ಡಿಎಫ್) ಸಂಸದೀಯ ಪಕ್ಷದ ಕಾರ್ಯದರ್ಶಿ ಡಿಆರ್ ಅನಿಲ್ ಅವರಿಗೆ ನೋಟಿಸ್ ಜಾರಿ ಮಾಡಿದೆ.

ಕಾರ್ಪೊರೇಷನ್‌ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಪಕ್ಷದ ಸದಸ್ಯರ ಪಟ್ಟಿಯನ್ನು ಕೋರಿ ಆರ್ಯ ಅವರು ಕಳುಹಿಸಿದ್ದಾರೆ ಎನ್ನಲಾದ ಪತ್ರದ ಬಗ್ಗೆ ನ್ಯಾಯಾಂಗ ತನಿಖೆ ಅಥವಾ ಸಿಬಿಐ ತನಿಖೆಗೆ ಕೋರಿ ಮಾಜಿ ಕೌನ್ಸಿಲರ್ ಸಲ್ಲಿಸಿದ ಮನವಿಗೆ ಸಂಬಂಧಿಸಿದಂತೆ ನೋಟಿಸ್ ಕಳುಹಿಸಲಾಗಿದೆ.

ಕೇರಳ ರಾಜ್ಯಪಾಲರಿಂದ ಅಸಾಂವಿಧಾನಿಕ ಕೆಲಸ: ವಿಡಿ ಸತೀಶನ್ಕೇರಳ ರಾಜ್ಯಪಾಲರಿಂದ ಅಸಾಂವಿಧಾನಿಕ ಕೆಲಸ: ವಿಡಿ ಸತೀಶನ್

ಅರ್ಜಿದಾರರಾದ ಜಿಎಸ್ ಶ್ರೀಕುಮಾರ್ ಅವರು ಇದು ಸ್ವಜನಪಕ್ಷಪಾತದ ಕೃತ್ಯವಾಗಿದೆ. ಅಲ್ಲದೆ ಹಲವಾರು ನೇಮಕಾತಿಗಳನ್ನು ಇದೇ ರೀತಿಯಲ್ಲಿ ಮಾಡಲಾಗಿದೆ. ಆದ್ದರಿಂದ ತನಿಖೆ ಅಗತ್ಯ ಎಂದು ವರದಿಯಾಗಿದೆ. ಅರ್ಜಿಯನ್ನು ಅಂಗೀಕರಿಸಿದ ನ್ಯಾಯಮೂರ್ತಿ ಕೆ.ಬಾಬು ಅವರು ಆರ್ಯ ಮತ್ತು ಅನಿಲ್‌ಗೆ ನೋಟಿಸ್ ಜಾರಿ ಮಾಡಿದ್ದು, ನವೆಂಬರ್ 25ರಂದು ವಿಚಾರಣೆಗೆ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

Kerala High Court notice to Thiruvananthapuram Mayor Arya Rajendran

ನವೆಂಬರ್ 5 ರಂದು ತಿರುವನಂತಪುರಂ ಮೇಯರ್ ಅವರ ಅಧಿಕೃತ ಲೆಟರ್ ಹೆಡ್ ಮತ್ತು ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಅಣವೂರು ನಾಗಪ್ಪನ್ ಅವರನ್ನು ಕಾಮ್ರೇಡ್ ಎಂದು ಸಂಬೋಧಿಸುವ ಅವರ ಸಹಿ ಹೊಂದಿರುವ ಪತ್ರವನ್ನು ಮಲಯಾಳ ಮನೋರಮಾ ದಿನಪತ್ರಿಕೆ ಪ್ರಕಟಿಸಿತು. ನವೆಂಬರ್ 1ರ ಪತ್ರದಲ್ಲಿ ನಿಗಮದ ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ 295 ಹುದ್ದೆಗಳ ಪಟ್ಟಿಯನ್ನು ಹೊಂದಿದ್ದು, ನಿಗಮದಲ್ಲಿ ಖಾಲಿ ಇರುವ ತಾತ್ಕಾಲಿಕ ಹುದ್ದೆಗಳಲ್ಲಿ ನೇಮಕ ಮಾಡಲು ಸಿಪಿಐ(ಎಂ) ಕಾರ್ಯಕರ್ತರ ಆದ್ಯತಾ ಪಟ್ಟಿಯನ್ನು ಕೇಳಲಾಗಿತ್ತು ಎನ್ನಲಾಗಿದೆ.

ಎರಡು ಸುದ್ದಿ ವಾಹಿನಿಗಳಿಗೆ ನಿಷೇಧ ವಿಧಿಸಿದ ಕೇರಳ ಗವರ್ನರ್‌, ಏನು ಕಾರಣ?ಎರಡು ಸುದ್ದಿ ವಾಹಿನಿಗಳಿಗೆ ನಿಷೇಧ ವಿಧಿಸಿದ ಕೇರಳ ಗವರ್ನರ್‌, ಏನು ಕಾರಣ?

ಆದರೆ, ಆರ್ಯ ಅವರು ತಾವು ಪತ್ರ ಬರೆದಿದ್ದಾರೆ ಎನ್ನವುದನ್ನು ನಿರಾಕರಿಸಿದ್ದಾರೆ ಮತ್ತು ನಾಗಪ್ಪನ್ ಅವರು ಅಂತಹ ಪತ್ರವನ್ನು ಸ್ವೀಕರಿಸಲಿಲ್ಲ ಎಂದು ಹೇಳಿದ್ದಾರೆ. ಪ್ರಸ್ತುತ ಇದು ರಾಜ್ಯದಲ್ಲಿ ರಾಜಕೀಯ ವಿವಾದಕ್ಕೆ ಕಾರಣವಾಗಿದ್ದು, ಪ್ರತಿಪಕ್ಷಗಳು ಅವರು ತಕ್ಷಣ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ. ಏತನ್ಮಧ್ಯೆ, ಆರ್ಯ ಅವರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಭೇಟಿ ಮಾಡಿ ಸಮಸ್ಯೆಯ ಬಗ್ಗೆ ತನಿಖೆ ನಡೆಸುವಂತೆ ಕೋರಿದರು.

English summary
The Kerala High Court on Thursday, November 10 issued notices to Thiruvananthapuram Mayor Arya Rajendran and Left Democratic Front (LDF) Parliamentary Party Secretary DR Anil.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X