ಕೇರಳ: ಕಣ್ಣೂರಿನಲ್ಲಿ ನಾಲ್ವರು ಆರ್ ಎಸ್ ಎಸ್ ಕಾರ್ಯಕರ್ತರ ಮೇಲೆ ದಾಳಿ
ಕಣ್ಣೂರು, ನವೆಂಬರ್ 20: ರಾಷ್ಟ್ರೀಯ ಸ್ವಯಂಸೇವಕ ಸಂಘದ ನಾಲ್ವರು ಕಾರ್ಯಕರ್ತರ ಮೇಲೆ ಕೇರಳದ ಕಣ್ಣೂರಿನಲ್ಲಿ ಇಂದು(ನ.20) ದಾಳಿ ನಡೆದಿದೆ.
ಗಾಯಗೊಂಡ ನಾಲ್ವರನ್ನೂ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಹಲ್ಲೆ ನಡೆಸಿದವರು ಯಾರೆಂಬುದು ಪತ್ತೆಯಾಗಿಲ್ಲ.

ನಿನ್ನೆ(ನ.19)ಯಷ್ಟೇ ಭಾರತೀಯ ಕಮ್ಯನಿಸ್ಟ್ ಪಕ್ಷದ(ಸಿಪಿಐಎಂ) ಯಾತ್ರೆಯೊಂದರಲ್ಲಿ ಕಚ್ಚಾ ಬಾಂಬ್ ಸಿಡಿದ ಪರಿಣಾಮ ಹಲವರಿಗೆ ಗಾಯವಾಗಿತ್ತು. ಅದಕ್ಕೂ ಮುನ್ನ ಇಲ್ಲಿನ ಮೇಯರ್ ವಿ.ಕೆ.ಪ್ರಶಾಂತ್ ಅವರ ಮೇಲೆ ಬಿಜೆಪಿ ಕಾರ್ಯಕರ್ತರು ದಾಳಿ ನಡೆಸಿದ್ದರು.
ಕಳೆದ ಅಕ್ಟೋಬರ್ ನಲ್ಲಷ್ಟೇ, ಇಲ್ಲಿನ ಬಿಜೆಪಿ ಕಚೇರಿಯೆದುರು ಬಾಂಬ್ ವೊಂದು ಸಿಡಿದ ಪರಿಣಾಮ ಕಾರ್ಯಕರ್ತರಿಗೆ ಗಾಯಗಳಾಗಿದ್ದವು.











Click it and Unblock the Notifications