ಕೇರಳ ಪ್ರವಾಹಕ್ಕೆ ನೆರವು ಟೆಲಿಕಾಂ ಸಂಸ್ಥೆಗಳಿಂದ ಉಚಿತ ಸೇವೆ

ತಿರುವನಂತಪುರಂ, ಆಗಸ್ಟ್ 17: ಭಾರಿ ಮಳೆ, ಬಿರುಗಾಳಿ, ಜಲ ಪ್ರವಾಹಕ್ಕೆ ದೇವರ ಸ್ವಂತ ನಾಡು ಕೇರಳ ಮುಳುಗುತ್ತಿದೆ. ಕೇರಳದ ಕೈ ಹಿಡಿಯಲು ಎಲ್ಲೆಡೆಯಿಂದ ನೆರವಿನ ಮಹಾಪೂರವೇ ಹರಿದು ಬರುತ್ತಿದೆ. ಟೆಲಿಕಾಂ ಸಂಸ್ಥೆಗಳು ಏಳು ದಿನಗಳ ವರೆಗೆ ಉಚಿತ ಸೇವೆ ನೀಡಲು ಮುಂದಾಗಿವೆ.

ಕೇರಳದಲ್ಲಿ ಇಲ್ಲಿ ತನಕ ಮೃತಪಟ್ಟವರ ಸಂಖ್ಯೆ 167ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದ ಅನೇಕ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ನೂರಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ಸಿಎಂ ಪಿಣರಾಯಿ ವಿಜಯನ್ ಅವರು ಇಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಪ್ರವಾಹದಿಂದ ತತ್ತರಿಸಿರುವ ಕೇರಳ ಜನರಿಗೆ ಟೆಲಿಕಾಂ ಕಂಪನಿಗಳು ನೆರವಿನ ಹಸ್ತ ನೀಡಲು ಮುಂದಾಗಿವೆ. ಏರ್ಟೆಲ್ ಪ್ರೀಪೇಯ್ಡ್ ಗ್ರಾಹಕರಿಗೆ ಉಚಿತ ಡೇಟಾ ಹಾಗೂ 30 ರೂಪಾಯಿ ಮೌಲ್ಯದ ಟಾಕ್ ಟೈಂ ಉಚಿತವಾಗಿ ನೀಡುತಿದೆ. ಪ್ರಸ್ತುತ ಪೋಸ್ಟ್ ಪೇಯ್ಡ್ ಹೊಂದಿರುವ ಗ್ರಾಹಕರಿಗೆ ಬಿಲ್ ಪಾವತಿ ದಿನಾಂಕವನ್ನು ವಿಸ್ತರಿಸಿದೆ.

Kerala floods: Telecom operators offer free services for 7 days in state

ಜೊತೆಗೆ ತೊಂದರೆಗೊಳಗಾದ ಗ್ರಾಹಕರಿಗೆ ಉಚಿತ ವೈಫೈ ಹಾಗೂ ಕರೆ ಸೌಲಭ್ಯವನ್ನು ನೀಡುತ್ತಿದೆ. ಏರ್ಟೆಲ್ ಸ್ಟೋರ್ ಗಳಲ್ಲಿ ಬ್ಯಾಟರಿ ಚಾರ್ಜ್ ಗೆ ಅವಕಾಶ ಮಾಡಿಕೊಡ್ತಿದೆ.

ಇದಲ್ಲದೆ ಜಿಯೋ ಹಾಗೂ ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ ಉಚಿತ ಡೇಟಾ ಹಾಗೂ ಕರೆ ನೀಡುತ್ತಿದೆ.

ಭಾರ್ತಿ ಏರ್ಟೆಲ್, ವೋಡಾಫೋನ್ ಹಾಗೂ ಐಡಿಯಾ ಸೆಲ್ಯುಲಾರ್ ನ ಪ್ರೀಪೇಯ್ಡ್ ಗ್ರಾಹಕರು ತಮ್ಮ ಕ್ರೆಡಿಟ್ ಮಿತಿ ದಾಟಿ ಕೂಡಾ ಕರೆ ಮಾಡಬಹುದಾಗಿದೆ.

ಜಿಯೋ, ಏರ್ಟೆಲ್ ನಂತೆ ವೊಡಾಫೋನ್ ಪ್ರೀಪೇಯ್ಡ್ ಗ್ರಾಹಕರಿಗೆ 30 ರೂಪಾಯಿ ಮೌಲ್ಯದ ಟಾಕ್ ಟೈಂ ಉಚಿತವಾಗಿ ನೀಡುತ್ತಿದೆ.

ಉಚಿತ ಇಂಟರ್ನೆಟ್ ಡೇಟಾ ಏಳು ದಿನಗಳಿಗೆ ಮಾತ್ರ ಸಿಗಲಿದೆ. ಬಿಎಸ್ಎನ್ಎಲ್ ನಿಂದ 20 ನಿಮಿಷಗಳ ಅವಧಿಗೆ ಬೇರೆ ನೆಟ್ವರ್ಕ್ ಗಳಿಗೆ ಪ್ರತಿದಿನ ಕರೆ ಮಾಡುವ ಅವಕಾಶ ಸಿಗಲಿದೆ ಎಂದು ಬಿಎಸ್ಎನ್ಎಲ್ ಚೇರ್ಮನ್ ಶ್ರೀವಾಸ್ತವ ಹೇಳಿದ್ದಾರೆ.

ಏರ್ ಟೆಲ್ ನ್ ಬ್ಯಾಟರಿ ರೀಚಾರ್ಜ್ ಕೇಂದ್ರಗಳು ತ್ರಿಶೂರು, ಕ್ಯಾಲಿಕಟ್, ಮಲಪ್ಪುರಂ, ಕಣ್ಣೂರ್, ಕೊಟ್ಟಾಯಂನಲ್ಲಿ ಲಭ್ಯವಿದೆ. ಆ ಕೇಂದ್ರಗಳಿಂದ ಉಚಿತ ಕರೆ ಕೂಡಾ ಮಾಡಬಹುದಾಗಿದೆ.

ಕೇರಳ ಪ್ರವಾಹ ಪೀಡಿತರಿಗೆ ನೆರವಾಗಲು ಈ ಲಿಂಕ್ ಕ್ಲಿಕ್ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+