ನಮ್ಮ ಯಶೋಗಾಥೆಯಲ್ಲಿ ಕೇರಳದ ಪಾತ್ರವೂ ಇದೆ: ಯುಎಇ

ಕೊಚ್ಚಿ, ಆಗಸ್ಟ್ 18: ಪ್ರವಾಹದಿಂದ ತತ್ತರಿಸಿರುವ ಕೇರಳಕ್ಕೆ ನೆರವಾಗಲು ಯುನೈಟೆಡ್ ಅರಬ್ ಎಮಿರೇಟ್ಸ್ ಮುಂದಾಗಿದೆ. ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡುವ ಸಲುವಾಗಿಯೇ ಯುಎಇ ಸಮಿತಿಯೊಂದನ್ನು ರಚಿಸಿದೆ.

ನೆರೆ ಹಾವಳಿಯಲ್ಲಿ ಸಿಲುಕಿರುವವರಿಗೆ ನೆರವಾಗಲು ರಾಷ್ಟ್ರೀಯ ವಿಪತ್ತು ಸಮಿತಿಯೊಂದನ್ನು ರಚಿಸುವಂತೆ ಯುಎಇ ಅಧ್ಯಕ್ಷ ಶೇಖ್ ಖಲೀಫಾ ಸೂಚಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

ಕೇರಳದಲ್ಲಿ ಸುಮಾರು 324 ಜನರ ಮೃತಪಟ್ಟು, ಎರಡು ಲಕ್ಷ ಜನರು ನೆಲೆ ಕಳೆದುಕೊಂಡಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಂಕಷ್ಟದಲ್ಲಿರುವ ಜನರಿಗೆ ನೆರವಾಗುವುದು ದೇಶದ ವಿಶೇಷ ಜವಾಬ್ದಾರಿಯಾಗಿದೆ. ಕೇರಳದಿಂದ ಬಂದ ಅನೇಕ ಜನರು ಯುಎಇಯಲ್ಲಿ ನೆಲೆಸಿದ್ದಾರೆ ಎಂದು ಯುಎಇ ಉಪಾಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಹೇಳಿದ್ದಾರೆ.

'ಕೇರಳದ ಜನರು ಯಾವಾಗಲೂ ಮತ್ತು ಇಂದಿಗೂ ಯುಎಇಯ ಯಶಸ್ಸಿನ ಕಥೆಯ ಭಾಗವಾಗಿದ್ದಾರೆ' ಎಂದು ಅವರು ಟ್ವೀಟ್ ಮಾಡಿದ್ದಾರೆ.

Kerala flood: Kerala part of our success story: UAE

ಕೇರಳದಲ್ಲಿ ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕೆ ಬರುವ ಸೂಚನೆ ಕಾಣಿಸುತ್ತಿಲ್ಲ. ಅಲ್ಲಿನ ನೂರಾರು ಅಣೆಕಟ್ಟುಗಳು, ನದಿ, ಜಲಾಶಯಗಳ ಪ್ರದೇಶದಿಂದ ಸಾವಿರಕ್ಕೂ ಅಧಿಕ ಸಂಖ್ಯೆಯ ಜನರನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.

ಮಳೆ ಇನ್ನಷ್ಟು ಜೋರಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಜನರು ಇನ್ನಷ್ಟು ತೊಂದರೆಗೆ ಸಿಲುಕುವ ಅಪಾಯವಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+