ಆರೋಗ್ಯ ಸೂಚ್ಯಂಕ: ಕೇರಳ ಪ್ರಥಮ, ಉ.ಪ್ರದೇಶ ಕೊನೆ, ಕರ್ನಾಟಕ?
ನವದೆಹಲಿ, ಜೂನ್ 25: ನೀತಿ ಆಯೋಗವು ರಾಜ್ಯವಾರು ಆರೋಗ್ಯ ಸೂಚ್ಯಂಕವನ್ನು ಬಿಡುಗಡೆ ಮಾಡಿದ್ದು, ಪಟ್ಟಿಯ ಪ್ರಕಾರ ಕೇರಳ ರಾಜ್ಯವು ಉತ್ತಮ ಗುಣಮಟ್ಟದ ಆರೋಗ್ಯ ಸೌಲಭ್ಯಗಳು ಹೊಂದಿದೆ.
ಕೊನೆಯ ಸ್ಥಾನದಲ್ಲಿ ಯೋಗಿ ಆದಿತ್ಯ ಸಿಎಂ ಆಗಿರುವ ಉತ್ತರ ಪ್ರದೇಶ ಮತ್ತು ನಿತೀಶ್ ಕುಮಾರ್ ಅವರು ಸಿಎಂ ಆಗಿರುವ ಬಿಹಾರ ರಾಜ್ಯಗಳು ಕೊನೆಯ ಎರಡು ಸ್ಥಾನದಲ್ಲಿದೆ.
ಆಂಧ್ರ ಪ್ರದೇಶ ಎರಡನೇಯ ಸ್ಥಾನದಲ್ಲಿದ್ದು, ಮಹಾರಾಷ್ಟ್ರ ಮೂರನೇ ಸ್ಥಾನದಲ್ಲಿದೆ.ಗುಜರಾತ್ ಅವರು ನಾಲ್ಕನೇ ಸ್ಥಾನದಲ್ಲಿದೆ, ಪಂಜಾಭ್ ಐದು, ಹಿಮಾಚಲ ಪ್ರದೇಶ ಆರು ಮತ್ತು ಆಶ್ಚರ್ಯಕರ ರೀತಿಯಲ್ಲಿ ಜಮ್ಮು ಕಾಶ್ಮೀರ ಏಳನೇ ಸ್ಥಾನದಲ್ಲಿದೆ.

ಕರ್ನಾಟಕ ರಾಜ್ಯವು ಎಂಟನೇ ಸ್ಥಾನದಲ್ಲಿದೆ. ಇದು ಅಷ್ಟೇನೂ ಉತ್ತಮವಾದ ಸ್ಥಾನವಲ್ಲವೆಂದು ನಂಬಲಾಗಿದೆ. ರಾಜ್ಯದಲ್ಲಿ ಅಷ್ಟೇನೂ ಉತ್ತಮವಾದ ವೈದ್ಯಕೀಯ ಸವಲತ್ತುಗಳನ್ನು ಹೊಂದಿಲ್ಲವೆನ್ನುತ್ತಿದೆ ನೀತಿ ಆಯೋಗದ ವರದಿ.
ತಮಿಳುನಾಡು ಒಂಬತ್ತು, ತೆಲಂಗಾಣ ಹತ್ತು, ಪಶ್ಚಿಮ ಬಂಗಾಳ ಹನ್ನೊಂದು, ಹರಿಯಾಣ ಹನ್ನೆರಡು, ಚತ್ತೀಸ್‌ಘಡ ಹದಿಮೂರು, ಜಾರ್ಖಂಡ್ ಹದಿನಾಲ್ಕು, ಅಸ್ಸಾಂ ಹದಿನೈದು, ರಾಜಸ್ಥಾನ ಹದಿನಾರನೇ ಸ್ಥಾನದಲ್ಲಿ ಇದೆ.
ಉತ್ತರಖಾಂಡ ಹದಿನೇಳನೇ ಸ್ಥಾನ, ಮಧ್ಯಪ್ರದೇಶ ಹದಿನೆಂಟನೇ ಸ್ಥಾನ, ಒಡಿಶಾ ಹತ್ತೊಂಬತ್ತನೇ ಸ್ಥಾನ, ಬಿಹಾರ ಇಪ್ಪತ್ತು, ಉತ್ತರ ಪ್ರದೇಶ ಇಪ್ಪತ್ತೊಂದನೇ ಸ್ಥಾನದಲ್ಲಿದೆ.












Click it and Unblock the Notifications