ವಯನಾಡಿನಲ್ಲಿ ಮತ್ತೆ ರಾಹುಲ್ ಗಾಂಧಿ ಗೆಲ್ಲಲ್ವಾ? ಎಕ್ಸಿಟ್ ಪೋಲ್ ಸಮೀಕ್ಷೆ ಹೇಳಿದ್ದೇನು?
ದೇಶದಲ್ಲಿ ಏಳು ಹಂತದಲ್ಲಿ ಚುನಾವಣೆಗಳು ಮುಗಿದಿವೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಲೋಕಸಭಾ ಚುನಾವಣೆಯ ಫಲಿತಾಂಶ ಹೊರ ಬೀಳಲಿದೆ. ಈ ಸಂಭ್ರಮಕ್ಕೆ ಸಿದ್ಧತೆಗಳು ಭರದಿಂದ ನಡೆದಿವೆ. ಇದರ ಬೆನ್ನಲೆ ದೇಶದಲ್ಲಿ ಎಲ್ಲರ ಚಿತ್ತ ಕದ್ದ ಹಲವು ಕ್ಷೇತ್ರಗಳಲ್ಲಿ ಕೇರಳ ವಾಯನಾಡು ಸಹ ಒಂದು. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎರಡನೇ ಬಾರಿಗೆ ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ.
ಕಳೆದ ಬಾರಿ ರಾಹುಲ್ ಗಾಂಧಿ ಅಮೇಥಿ ಹಾಗೂ ವಾಯನಾಡಿನ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಅಮೇಥಿಯಲ್ಲಿ ಸೋಲು ಇವರನ್ನು ಬಹುವಾಗಿ ಅಪ್ಪಿಕೊಂಡಿತು. ಆದರೆ ದೇವರ ನಾಡಿನಲ್ಲಿ ಇವರಿಗೆ ಜಯದ ಉಡುಗೊರೆ ಲಭಿಸಿತು. ಕಳೆದ ಬಾರಿ ರಾಹುಲ್ ಗಾಂಧಿ ಹೊಂದಿರುವ ಚಾರ್ಮ್‌ನ್ನೇ ಹೊಂದಿದ್ದಾರಾ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದಕ್ಕೆ ಎಕ್ಸಿಟ್ ಪೋಲ್ ಉತ್ತರ ನೀಡಿದೆ.

ರಾಹುಲ್ ಗಾಂಧಿ ಭವಿಷ್ಯ ಏನು?
ಈ ಬಾರಿಯೂ ರಾಹುಲ್ ಗಾಂಧಿ ಎರಡು ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ. ಉತ್ತರ ಪ್ರದೇಶದ ರಾಯ್‌ಬರೇಲಿಯಿಂದ ಹಾಗೂ ಕೇರಳದ ವಾಯನಾಡಿನಿಂದ ರಾಹುಲ್ ಕದನಕ್ಕೆ ಧುಮ್ಮುಕಿದ್ದಾರೆ. ಈ ಬಾರಿ ಈ ಎರಡೂ ಕ್ಷೇತ್ರಗಳಲ್ಲಿ ಗೆಲುವು ದಾಖಲಿಸುವ ಕನಸು ರಾಹುಲ್ ಅವರದ್ದಾಗಿದೆ. ಹಾಗಿದ್ದರೆ ವಾಯನಾಡಿನಲ್ಲಿ ನಡೆದ ಸಮೀಕ್ಷೆಗಳು ಏನು ಹೇಳುತ್ತವೆ ಇಲ್ಲಿದೆ ವರದಿ.
ವಿಎಂಆರ್ ಮನೋರಮಾ ವಾಹಿನಿ ರಾಹುಲ್ ಗಾಂಧಿಯ ಭವಿಷ್ಯ ನುಡಿದಿದೆ. ಕಳೆದ ಬಾರಿಗೆ ಹೋಲಿಸಿದರೆ, ಈ ಬಾರಿ ರಾಹುಲ್ ಅವರ ಅಲೆ ಕೇರಳದಲ್ಲಿ ಕಡಿಮೆ ಆಗಿದೆ ಎಂದು ಕಾಣುತ್ತದೆ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ. ಇನ್ನು ಎಕ್ಸಿಟ್ ಪೋಲ್‌ಗಳಲ್ಲಿ ಯುಡಿಎಫ್ ಕ್ಲೀನ್ ಸ್ವೀಪ್ ಮಾಡುವ ಸಾಧ್ಯತೆ ಇದೆ ಎಂದು ತಿಳಿಸಿವೆ. ಅಲ್ಲದೆ ಎರಡು ಕ್ಷೇತ್ರಗಳಲ್ಲಿ ಜಿದ್ದಾಜಿದ್ದಿನ ಕಾದಾಟ ಇರುವುದಾಗಿ ವರದಿಯಲ್ಲಿ ತಿಳಿಸಿದೆ.

ದೇವರನಾಡಿನಲ್ಲಿ ರಾಹುಲ್ ಕೈ ಹಿಡಯುತ್ತಾರಾ ಮತದಾರ?
ರಾಹುಲ್ ಗಾಂಧಿ ಈ ಬಾರಿ ವಾಯನಾಡಿನಲ್ಲಿ ಪಡೆಯುವ ಮತಗಳಿಕೆಯಲ್ಲಿ ಕೊಂಚ ಇಳಿಕೆ ಆಗುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ. 2019ರಲ್ಲಿ ರಾಹುಲ್ ಗಾಂಧಿ ಶೇಕಡಾ 64.7 ಮತಗಳನ್ನು ಪಡೆದಿದ್ದರು. ಆದರೆ ಈ ಬಾರಿ ಈ ಪ್ರಮಾಣ ಕಡಿಮೆ ಆಗುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಈ ಬಾರಿ ರಾಹುಲ್ ಗಾಂಧಿ ಶೇಕಡಾ 50 ರಷ್ಟು ಮತವನ್ನು ಪಡೆಯಲಿದ್ದಾರೆ ಎಂದು ವರದಿಯಾಗಿದೆ.
2019ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ, ವಾಯನಾಡಿನಲ್ಲಿ 7,06,367 ಮತಗಳನ್ನು ಪಡೆಯುವ ಮೂಲಕ ಭರ್ಜರಿ ಗೆಲುವು ಸಾಧಿಸಿದ್ದರು. ಆದರೆ ಈ ಬಾರಿ ಗೆಲುವಿನ ಅಂತರ ಕಡಿಮೆ ಆಗುವ ಸಾಧ್ಯತೆ ಇದೆ.
ಖಾಥೆ ತೆರೆಯುವ ಕನಸಿನಲ್ಲಿ ಬಿಜೆಪಿ?
ಈ ಬಾರಿ ದೇವರ ನಾಡಿನಲ್ಲಿ ಕಮಲ ಅರಳುತ್ತದೆ ಎಂದು ಎಕ್ಸಿಟ್ ಪೋಲ್‌ಗಳು ಭವಿಷ್ಯವನ್ನು ನುಡಿದಿದ್ದವು. ಆದರೆ ಅಲಥುರ್ ಹಾಗೂ ಕಣ್ಣೂರ ಕ್ಷೇತ್ರದಲ್ಲಿ ಬಿಜೆಪಿ ಪ್ರಬಲ ಪೈಪೋಟಿ ನೀಡಲಿದೆ ಎಂದು ತಿಳಿದು ಬಂದಿದೆ. ಈ ಕ್ಷೇತ್ರದ ಫಲಿತಾಂಶಗಳ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಬಿಜೆಪಿ ರಾಜ್ಯದ ಎರಡು ಕ್ಷೇತ್ರಗಳಲ್ಲಿ ಎರಡನೇ ಸ್ಥಾನವನ್ನು ಹಾಗೂ ತ್ರಿಸುರಾದಲ್ಲಿ ಮೂರನೇ ಸ್ಥಾನವನ್ನು ಪಡೆಯುವ ಸಾಧ್ಯತೆ ಇದೆ.












Click it and Unblock the Notifications