ಕೇರಳ ಚರ್ಚ್ ಅತ್ಯಾಚಾರ: ಕೋರ್ಟ್‌ನಲ್ಲಿ ಉಲ್ಟಾ ಹೇಳಿಕೆ ನೀಡಿದ ಸಂತ್ರಸ್ತೆ, ತಾಯಿ
ತಿರುವನಂತಪುರಂ, ಆಗಸ್ಟ್ 3: ಕೇರಳದ ಚರ್ಚ್‌ನಲ್ಲಿ ನಡೆದಿದೆ ಎನ್ನಲಾದ ಅತ್ಯಾಚಾರ ಆರೋಪ ಪ್ರಕರಣವೊಂದು ಸಿನಿಮೀಯ ತಿರುವು ಪಡೆದುಕೊಂಡಿದೆ.
ಅತ್ಯಾಚಾರ ನಡೆದಿದೆ ಎಂದು ಆರೋಪಿಸಿದ್ದ ಸಂತ್ರಸ್ತೆಯೇ, ಅದು ಸಹಮತದ ಲೈಂಗಿಕ ಕ್ರಿಯೆ ಎಂದು ಕೋರ್ಟ್‌ನಲ್ಲಿ ಹೇಳಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಕೇರಳ ಕ್ಯಾಥಲಿಕ್ ಚರ್ಚ್‌ನ ಪಾದ್ರಿ ರಾಬಿನ್ ವಡಕ್ಕುಂಚೆರಿಲ್ ವಿರುದ್ಧದ ಅತ್ಯಾಚಾರ ಆರೋಪ ಮಾಡಿದ್ದ ಸಂತ್ರಸ್ತೆ ಹಾಗೂ ಆಕೆಯ ತಾಯಿ ಹೇಳಿಕೆ ಬದಲಿಸಿದ್ದಾರೆ.
ಅಲ್ಲದೆ, ಸಂತ್ರಸ್ತೆಯು ಪಾದ್ರಿ ರಾಬಿನ್ ಅವರನ್ನು ಮದುವೆಯಾಗಲು ಬಯಸಿರುವುದಾಗಿ ತಿಳಿಸಿದ್ದಾರೆ.

ಥಲಸ್ಸೆರಿಯ ಪೋಕ್ಸೊ ನ್ಯಾಯಾಲಯದಲ್ಲಿ ಬುಧವಾರ ಆರಂಭವಾದ ವಿಚಾರಣೆ ವೇಳೆ ಸಂತ್ರಸ್ತೆ, ತಾನು ಪಾದ್ರಿಯೊಂದಿಗೆ ಸಹಮತದ ಲೈಂಗಿಕ ಕ್ರಿಯೆ ಹೊಂದುವಾಗ ಅಪ್ರಾಪ್ತ ವಯಸ್ಕಳಾಗಿರಲಿಲ್ಲ ಎಂದು ಹೇಳಿದ್ದಾರೆ.
'ಆಕೆ ಪಾದ್ರಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿರುವುದನ್ನು ಒಪ್ಪಿಕೊಂಡಿದ್ದಾರೆ. ಆದರೆ, ಅದು ಬೆದರಿಕೆಯಿಂದ ಅಲ್ಲ. ಘಟನೆ ನಡೆದಾಗ ತಾನು ಅದಕ್ಕೆ ಸಮ್ಮತಿ ಸೂಚಿಸುವ ವಯಸ್ಸು ದಾಟಿದ್ದಾಗಿ ಹೇಳಿಕೊಂಡಿದ್ದಾರೆ. ಆರೋಪಿ ಪಾದ್ರಿಯನ್ನು ಬಯಸಿರುವುದಾಗಿ ಹಾಗೂ ಮಗುವನ್ನು ತನ್ನ ಸುಪರ್ದಿಗೆ ಪಡೆದುಕೊಳ್ಳಲು ಇಚ್ಛಿಸಿರುವುದಾಗಿ ಆಕೆ ತಿಳಿಸಿದ್ದಾರೆ' ಎಂದು ವಿಶೇಷ ಪ್ರಾಸಿಕ್ಯೂಟರ್ ಬೀನಾ ಕಳಿಯಾತ್ ಹೇಳಿದ್ದಾರೆ.
ಪಾದ್ರಿ ರಾಬಿನ್ ವಡಕ್ಕುಂಚೆರಿಲ್ ಮತ್ತು ಒಂಬತ್ತು ಮಂದಿ ವಿರುದ್ಧ ಕಳೆದ ವರ್ಷ ಪ್ರಾಸಿಕ್ಯೂಷನ್ ದೋಷಾರೋಪ ಹೊರಿಸಿತ್ತು.
ಸಂತ್ರಸ್ತೆಯ ತಾಯಿ ಕೂಡ ಗುರುವಾರದ ವಿಚಾರಣೆ ವೇಳೆ ಹೇಳಿಕೆ ಬದಲಿಸಿದ್ದಾರೆ. ಎರಡನೆಯ ಆರೋಪಿ ತಂಕಮ್ಮ ನೆಲ್ಲಿಯಾಣಿ ಮತ್ತು ಆರನೇ ಆರೋಪಿಯಾಗಿರುವ ಆಕೆಯ ಮಗಳು, ಸನ್ಯಾಸಿನಿ ಲಿಜ್ ಮಾರಿಯಾ ಅವರ ಪಾತ್ರ ಇರುವುದನ್ನು ಸಂತ್ರಸ್ತೆಯ ತಾಯಿ ನಿರಾಕರಿಸಿದ್ದಾರೆ.
ಸಂತ್ರಸ್ತೆಯು ಮಗುವಿಗೆ ಜನ್ಮ ನೀಡಿದ ಬಳಿಕ ಘಟನೆಯು ಬಹಿರಂಗವಾಗದಂತೆ ತಡೆಯಲು ತಂಕಮ್ಮ ಮತ್ತು ಮಾರಿಯಾ ಅವರು ಮಗುವನ್ನು ಆಸ್ಪತ್ರೆಯಿಂದ ಹೊತ್ತೊಯ್ದಿದ್ದರು ಎಂದು ಪ್ರಾಸಿಕ್ಯೂಷನ್ ಆರೋಪಿಸಿತ್ತು.
ಘಟನೆ ನಡೆದಾಗ ತನ್ನ ಮಗಳು ಅಪ್ರಾಪ್ತ ವಯಸ್ಕಳಾಗಿರಲಿಲ್ಲ ಎಂದಿರುವ ತಾಯಿ, ಪಾದ್ರಿ ವಿರುದ್ಧ ತಾವು ಯಾವುದೇ ದೂರು ಹೊಂದಿಲ್ಲ ಎಂದಿದ್ದಾರೆ.
ದಾಖಲೆಗಳ ಪ್ರಕಾರ ಘಟನೆ ನಡೆದಾಗ ಸಂತ್ರಸ್ತೆಯು ಅಪ್ರಾಪ್ತ ವಯಸ್ಕರಾಗಿದ್ದರು. ಆಕೆಯ ಹೇಳಿಕೆಯು ವಿಚಾರಣೆಗೆ ಯಾವುದೇ ತೊಡಕುಂಟು ಮಾಡುವುದಿಲ್ಲ.
ಮೂರನೇ ಸಾಕ್ಷಿಯಾದ ಸಂತ್ರಸ್ತೆಯ ತಂದೆಯನ್ನು ವಿಚಾರಣೆಗೆ ಒಳಪಡಿಸಲು ನಾವು ನಿರ್ಧರಿಸಿಲ್ಲ. ಮತ್ತೊಬ್ಬ ಸಾಕ್ಷಿದಾರ ಕೂಡ ನಿಲುವು ಬದಲಿಸುವುದನ್ನು ನೋಡಲು ಪ್ರಾಸಿಕ್ಯೂಷನ್ ಬಯಸುವುದಿಲ್ಲ ಎಂದು ಬೀನಾ ತಿಳಿಸಿದ್ದಾರೆ.
ತನ್ನ ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಪಾದ್ರಿ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆಯ ತಾಯಿ ದೂರು ನೀಡಿದ್ದರು. ಅದರ ಆಧಾರದಲ್ಲಿ 2017ರ ಫೆಬ್ರುವರಿ 28ರಂದು ಪಾದ್ರಿಯನ್ನು ಬಂಧಿಸಲಾಗಿತ್ತು. ಬಳಿಕ ವಿವಿಧ ರೀತಿಯಲ್ಲಿ ಪಾದ್ರಿಗೆ ನೆರವು ನೀಡಿದ ಆರೋಪದಡಿ ಐವರು ಕ್ರೈಸ್ತ ಸನ್ಯಾಸಿನಿಯರು ಸೇರಿದಂತೆ ಒಂಬತ್ತು ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ












Click it and Unblock the Notifications