ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು-ಕೊಚ್ಚಿ ಕಾರಿಡಾರ್‌ಗೆ ₹10,000 ಕೋಟಿ: ಯಾವ ಮಾರ್ಗ, ಯಾರಿಗೆಲ್ಲಾ ಉತ್ತೇಜನ? ಅಂಕಿಅಂಶ, ಮಾಹಿತಿ

ಕೊಚ್ಚಿ-ಬೆಂಗಳೂರು ಕಾರಿಡಾರ್‌ಗೆ ರೂ 10,000 ಕೋಟಿ ಮೊತ್ತವನ್ನು ಆರಂಭಿಕ ಹೂಡಿಕೆಯಾಗಿ ಬಳಸಲಾಗುವುದು ಎಂದು ಕೇರಳ ಸರ್ಕಾರ ತಿಳಿಸಿದೆ. ಈ ಕಾರಿಡಾರ್‌ನಿಂದ ಯಾರೆಗೆಲ್ಲಾ ಲಾಭವಾಗಲಿದೆ? ಯಾವ ಮಾರ್ಗದಲ್ಲಿ ಈ ಕಾರಿಡಾರ್‌ ಬರಲಿದೆ? ಮಾಹಿತಿ ಪಡೆಯಿರಿ

|
Google Oneindia Kannada News

ತಿರುವನಂತಪುರ, ಫೆಬ್ರವರಿ 03: ಕೇಂದ್ರ ಬಜೆಟ್‌ನ ಎರಡು ದಿನಗಳ ನಂತರ, ಕೇರಳ ಸರ್ಕಾರವು 2023-24ನೇ ಸಾಲಿನ ಬಜೆಟ್ ಅನ್ನು ಮಂಡಿಸಿದೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಮೂಲಕ ರಾಜ್ಯವನ್ನು ಸ್ವತಂತ್ರಗೊಳಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಅಭಿವೃದ್ಧಿ ಯೋಜನೆಗಳ ಪೈಕಿ ಮೇಕ್ ಇನ್ ಕೇರಳ ಯೋಜನೆಗೆ ಹೆಚ್ಚುವರಿಯಾಗಿ ₹1000 ಕೋಟಿ ಮೀಸಲಿಡಲಾಗುವುದು ಎಂದು ಕೇರಳ ಹಣಕಾಸು ಸಚಿವ ಕೆ.ಎನ್.ಬಾಲಗೋಪಾಲ್ ಹೇಳಿದರು. ಕಣ್ಣೂರು ಐಟಿ ಪಾರ್ಕ್ ಕಾಮಗಾರಿಯೂ ಈ ವರ್ಷ ಆರಂಭವಾಗಲಿದೆ. ಉತ್ತಮ ಸೌಲಭ್ಯಗಳು ಮತ್ತು ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮೂಲಕ ಯುವಕರು ರಾಜ್ಯದಲ್ಲಿ ಉಳಿಯಲು ಉತ್ತೇಜನ ನೀಡಲಾಗುವುದು ಎಂದು ಸಚಿವ ಬಾಲಗೋಪಾಲ್ ಹೇಳಿದರು. ಕೊಚ್ಚಿ-ಬೆಂಗಳೂರು ಕಾರಿಡಾರ್‌ಗೆ ರೂ 10,000 ಕೋಟಿ ಮೊತ್ತವನ್ನು ಆರಂಭಿಕ ಹೂಡಿಕೆಯಾಗಿ ಬಳಸಲಾಗುವುದು ಎಂದು ತಿಳಿಸಿದರು.

ಕೇಂದ್ರ ಬಜೆಟ್: ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಬಜೆಟ್‌ ಬಗ್ಗೆ ಭಾರೀ ಮೆಚ್ಚುಗೆ! ಕೇಂದ್ರ ಬಜೆಟ್: ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಬಜೆಟ್‌ ಬಗ್ಗೆ ಭಾರೀ ಮೆಚ್ಚುಗೆ!

ಕೊಚ್ಚಿ-ಬೆಂಗಳೂರು ಕಾರಿಡಾರ್‌: ಮಾಹಿತಿ

ಕೊಚ್ಚಿ-ಬೆಂಗಳೂರು ಕಾರಿಡಾರ್‌ಗೆ ರೂ 10,000 ಕೋಟಿ ಮೊತ್ತವನ್ನು ಆರಂಭಿಕ ಹೂಡಿಕೆಯಾಗಿ ಬಳಸಲಾಗುವುದು, ಬೆಂಗಳೂರು ಕೇರಳದ ಹತ್ತು ಸಾವಿರ ಐಟಿ ವೃತ್ತಿಪರರ ಕೇಂದ್ರವಾಗಿದೆ ಎಂದು ಬಾಲಗೋಪಾಲ್ ತಿಳಿಸಿದರು. ಕೊಚ್ಚಿ-ಬೆಂಗಳೂರು ಕೈಗಾರಿಕಾ ಕಾರಿಡಾರ್‌ಗೆ ಭೂಸ್ವಾಧೀನ ಪ್ರಕ್ರಿಯೆ ಡಿಸೆಂಬರ್‌ ಪೂರ್ಣಗೊಂಡಿದೆ. ಕೈಗಾರಿಕೆ ಸಚಿವ ಪಿ ರಾಜೀವ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ KIIFB ಸಹಾಯದಿಂದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಮತ್ತು ಕಲಮಸ್ಸೆರಿಯಲ್ಲಿರುವ ಕೇರಳ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ನಿಗಮಕ್ಕೆ ಹಸ್ತಾಂತರಿಸಲು ನಿರ್ಧರಿಸಲಾಗಿತ್ತು.

Kerala Budget: Rs 10000 crore for Kochi-Bengaluru corridor and other announcements

ಪಾಲಕ್ಕಾಡ್‌ನಲ್ಲಿ 310 ಎಕರೆ ಸ್ವಾಧೀನಪಡಿಸಿಕೊಳ್ಳುವ ಮೂಲಕ 95 ಪ್ರತಿಶತದಷ್ಟು ಕೆಲಸ ಪೂರ್ಣಗೊಂಡಿದೆ. ಜಿಲ್ಲಾಧಿಕಾರಿ ಮೃಣ್ಮಯಿ ಜೋಶಿ ಮಾತನಾಡಿ, ಬೇರೆಡೆ ನಿವೇಶನ ಪಡೆಯಲು ಸಾರ್ವಜನಿಕರ ವಿಚಾರಣೆ ಆರಂಭಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಪಾಲಕ್ಕಾಡ್ ಜಿಲ್ಲೆಯ ಕನ್ನಂಪ್ರನಲ್ಲಿ 2220 ಎಕರೆ, ಪುತ್ತುಸ್ಸೆರಿ ಸೆಂಟ್ರಲ್‌ನಲ್ಲಿ 600 ಎಕರೆ, ಪುತ್ತುಸ್ಸೆರಿ ಪೂರ್ವದಲ್ಲಿ 558 ಎಕರೆ, ಓಝಲಪ್ಪತ್ತಿ 250 ಎಕರೆ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಎರ್ನಾಕುಲಂ ಜಿಲ್ಲೆ- ಅಯ್ಯಂಪುಳ ಗಿಫ್ಟ್ ಸಿಟಿಯಲ್ಲಿ 500 ಎಕರೆಯನ್ನು ಸ್ವಾದೀನ ಪಡಿಸಿಕೊಳ್ಳಲಾಗಿದೆ.

ಬೆಂಗಳೂರು-ಕೊಚ್ಚಿ ಕಾರಿಡಾರ್ ಮಾರ್ಗ

ಬೆಂಗಳೂರು- ಹೊಸೂರು- ಸೇಲಂ- ಕೋಯಮತ್ತೂರು- ಪಾಲಾಕ್ಕಾಡ್‌- ಕೊಚ್ಚಿ

Kerala Budget: Rs 10000 crore for Kochi-Bengaluru corridor and other announcements

ಕೇರಳ ಬಜೆಟ್‌ ಪ್ರಮುಖಾಂಶಗಳು

1- ಎಲ್ಲರಿಗೂ ಕೈಗೆಟಕುವ ದರದಲ್ಲಿ ಇಂಟರ್ನೆಟ್ ಅನ್ನು ತರುವ ರಾಜ್ಯದ ಯೋಜನೆಯಾದ K-FON ಗೆ 100 ಕೋಟಿ ರೂ. ಮತ್ತು ಹೊಸ ಸ್ಟಾರ್ಟಪ್‌ಗಳು ಮತ್ತು ಉದ್ಯಮಿಗಳನ್ನು ಪೋಷಿಸುವ ಸ್ಟಾರ್ಟ್‌ಅಪ್ ಮಿಷನ್‌ಗಾಗಿ 125.2 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ 559 ಕೋಟಿ ರೂ ನೀಡಲಾಗುವುದು

2- ಕೇರಳ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್ಮೆಂಟ್ ಫಂಡ್ ಬೋರ್ಡ್ (KIIFB) ಮೂಲಕ ಬಂದರು ಅಭಿವೃದ್ಧಿಯ ಭಾಗವಾಗಿ ವಿಝಿಂಜಂ ರಿಂಗ್ ರೋಡ್ಗೆ 1000 ಕೋಟಿ ರೂ. ವಿಝಿಂಜಂ-ತೆಕ್ಕಡ-ಮಂಗಳಾಪುರಂ ಕೈಗಾರಿಕಾ ಕಾರಿಡಾರ್‌ಗೆ ಭೂಮಿ ಸ್ವಾಧೀನಪಡಿಸಿಕೊಳ್ಳಲು ಇನ್ನೂ 1000 ಕೋಟಿ ರೂ. ಜೊತೆಗೆ ಕೋವಲಂ-ಬೇಕಲ್ ಜಲಮಾರ್ಗಕ್ಕೆ 300 ಕೋಟಿ ರೂ ನೀಡಲಾಗುವುದು.

3- ಕೃಷಿ ಕ್ಷೇತ್ರಕ್ಕೆ 971 ಕೋಟಿ ರೂ.ಗೂ ಹೆಚ್ಚು ಮೀಸಲಿಡಲಾಗಿದೆ. ಮೀನುಗಾರಿಕೆ ಕ್ಷೇತ್ರಕ್ಕೆ ಇನ್ನೂ 321.31 ಕೋಟಿ ರೂ ನೀಡಲಾಗುವುದು.

Kerala Budget: Rs 10000 crore for Kochi-Bengaluru corridor and other announcements

4- ಸರ್ಕಾರದ ಮಹತ್ವಾಕಾಂಕ್ಷೆಯ ಲೈಫ್ ಮಿಷನ್, ಬಡವರಿಗೆ ಮನೆ ನಿರ್ಮಿಸಲು, ಈ ವರ್ಷ ಕಾಮಗಾರಿಗೆ 1436.26 ಕೋಟಿ ರೂ ಮೀಸಲಿಡಲಾಗಿದೆ.

5- ಸಬಲೀಕರಣ ಮತ್ತು ಬಡತನ ನಿರ್ಮೂಲನೆಗಾಗಿ ಮಹಿಳೆಯರ ದೊಡ್ಡ ಜಾಲವನ್ನು ಸಂಪರ್ಕಿಸುವ ರಾಜ್ಯದ 25 ವರ್ಷಗಳ ಯೋಜನೆಯಾದ ಕುಟುಂಬಶ್ರೀಗೆ 260 ಕೋಟಿ ರೂ.ಗಳನ್ನು ಅದರ ವಿವಿಧ ಕಾರ್ಯಕ್ರಮಗಳಿಗೆ ಬಳಸಲಾಗುವುದು.

6- ತ್ಯಾಜ್ಯ ನಿರ್ವಹಣೆಗೆ ಗುರಿಯಾಗಿರುವ ಸುಚಿತ್ವ ಮಿಷನ್‌ಗೆ 35 ಕೋಟಿ ರೂ. ನೀರಾವರಿ ಯೋಜನೆಗಳಿಗೆ 525.45 ಕೋಟಿ ರೂ., ಸಹಕಾರಿ ಕ್ಷೇತ್ರಕ್ಕೆ 140.5 ಕೋಟಿ ರೂ ನೀಡಲಾಗುವುದು.

7- ಶಬರಿಮಲೆ ಮಾಸ್ಟರ್ ಪ್ಲಾನ್ ಗೆ 30 ಕೋಟಿ ರೂ., ಎರುಮೇಲಿ ಮಾಸ್ಟರ್ ಪ್ಲಾನ್ ಗೆ ಇನ್ನೂ 10 ಕೋಟಿ ರೂ. ಮೀಸಲಿಡಲಾಗಿದೆ.

English summary
An amount of Rs 10,000 crore will be used as an initial investment for the Kochi-Bangalore corridor, Bangalore being the hub of tens of thousands of IT professionals in Kerala
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X